ಕಳೆದ ವರ್ಷದಿಂದಲೇ ಶುರುವಾದ ಕರೋನಾ ಹಾವಳಿ ಜನರ ಬದುಕು ಕಸಿದುಕೊಳ್ಳುತ್ತಿದ್ದು, ಇದೀಗ ಪುನಃ ಮತ್ತೆ ವೀಕೆಂಡ್ ಕರ್ಫ್ಯೂ ವಿಧಿಸಿ ವ್ಯಾಪಾರಿಗಳಿಗೆ ಹಾಗೂ ಇನ್ನಿತರ ಉದ್ಯಮಿಗಳಿಗೆ ಹೊಡೆತ ಬಿದ್ದಿದೆ. ದೆಹಲಿಯಲ್ಲಂತೂ ಪರಿಸ್ಥಿತಿ ಬಿಗಡಾಯಿಸಿದ್ದು, ಭಯದಿಂದ ಜನ ತಮ್ಮ ಊರುಗಳತ್ತ ಗಂಟುಮೂಟೆ ಸಮೇತ ತೆರಳುತ್ತಿದ್ದಾರೆ.
ರಾಜ್ಯ ಸರ್ಕಾರದರ ಧಿಡೀರ್ ಕರ್ಫ್ಯೂ ಬಗ್ಗೆ ಭಯಭೀತರಾದ ಅದೆಷ್ಟೋ ಜನ ವಾಪಾಸು ಎಲ್ಲಿ ಲಾಕ್ ಡೌನ್ ಆಗುತ್ತದೋ ಎಂಬ ಭಯದಿಂದ ತವರು ರಾಜ್ಯಗಳತ್ತ ಕಾಲಿಡುತ್ತಿದ್ದಾರೆ. ಈ ಕುರಿತು ಮಾತನಾಡಿದ ವಲಸೆ ಕಾರ್ಮಿಕ ಮಾರ್ಯ, ಕಳೆದ ಬಾರಿ, ನಾನು ನನ್ನ ಕುಟುಂಬದೊಂದಿಗೆ ಸಿಲುಕಿಕೊಂಡಿದ್ದೆ. ಲಾಕ್ಡೌನ್ ಅವಧಿಯನ್ನು ಕ್ರಮೇಣ ವಿಸ್ತರಿಸಲಾಯಿತು. ಈ ವೇಳೆ ನಾನು ಸಾಕಷ್ಟು ಕಷ್ಟಗಳನ್ನು ಎದುರಿಸಿದೆ. ಅದಕ್ಕಾಗಿಯೇ ಕರ್ಫ್ಯೂ ಬಗ್ಗೆ ಕೇಳಿದಾಗ ಭಯವಾಗುತ್ತದೆ ಎಂದರು. ತನ್ನ ನೋವನ್ನು ಹೊರಹಾಕಿದ ಇವರು, ಈ ಬಾರಿ ಕರ್ಫ್ಯೂ ವಿಸ್ತರಿಸದಿದ್ದರೆ ನಾವು ಪುನಃ ಬರುತ್ತೇವೆ. ಲಾಕ್ ಡೌನ್ ಗೆ ಹೆದರಿಕೊಂಡು ನಾನು ಜನವರಿ 6 ರಂದು ಮನೆಗೆ ಹೊರಟೆ. ನಮಗೆ ಜೀವ, ಜೀವನ ಎರಡೂ ಮುಖ್ಯ. ನಮ್ಮ ಜೊತೆ ವಿನೋದ್ ಎಂಬ ಗ್ರಾಮಸ್ಥನೂ ಒಟ್ಟಿಗೆ ಬಂದಿದ್ದಾರೆ. ಮುಂದಿನ ಪರಿಸ್ಥಿತಿ ನೋಡಿಕೊಂಡು ರಾಷ್ಟ್ರ ರಾಜಧಾನಿಯತ್ತ ಬರುತ್ತೇವೆ ಎಂದು ನೋವು ತೋಡಿಕೊಂಡರು.
ದೆಹಲಿಯ ದೈನಂದಿನ ಕೋವಿಡ್ ಸಂಖ್ಯೆ ಒಂದು ದಿನದಲ್ಲಿ 20,000 ಕ್ಕೂ ಹೆಚ್ಚು ಪ್ರಕರಣ ದಾಟಿದೆ. ಸೋಂಕಿನ ಉಲ್ಬಣದಿಂದಾಗಿ, ಲಾಕ್ಡೌನ್ ಹೇರುವ ಸಾಧ್ಯತೆಯಿದೆ. ಇದು ವಲಸೆ ಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ.
ಕೋವಿಡ್ ನಿಯಂತ್ರಿಸಲು ಸರ್ಕಾರ ರಾತ್ರಿ, ವಾರಾಂತ್ಯದ ಕರ್ಫ್ಯೂ ವಿಧಿಸಿದ್ದರೂ, ಪ್ರಸ್ತುತ ಪರಿಸ್ಥಿತಿ ಗಮನಿಸಿದರೆ, ವಲಸೆ ಕಾರ್ಮಿಕರು ಈ ಬಾರಿ ನೆಲೆನಿಲ್ಲಲು ಹಿಂದೇಟು ಹಾಕುತ್ತಿದ್ದಾರೆ.
ದೆಹಲಿಯ ಪ್ರೇಮ್ ನಗರದ ಸೊಸೈಟಿಯೊಂದರಲ್ಲಿ ಗುತ್ತಿಗೆದಾರರಾಗಿರುವ ತೌಫಿಕ್ ಅವರ ಜೊತೆ ಕೆಲಸ ಮಾಡುತ್ತಿರುವ ಅನೇಕ ಹಳ್ಳಿಗರು, ರಾಷ್ಟ್ರ ರಾಜಧಾನಿಯಲ್ಲಿ ಕರ್ಫ್ಯೂ ಹೇರುವ ಮುಂಚೆಯೇ ತಮ್ಮ ಮನೆಗೆ ತೆರಳಿದ್ದಾರೆ. ಆಹಾರದ ಕೊರತೆಯಿಲ್ಲ ಎಂದು ವಲಸೆ ಕಾರ್ಮಿಕರಿಗೆ ನಾವು ಭರವಸೆ ನೀಡಿದ್ದರೂ, ಅವರು ಭಯಭೀತರಾಗಿದ್ದರು ಎಂದು ತೌಫಿಕ್ ಹೇಳಿದ್ದಾರೆ
ದೆಹಲಿಯಲ್ಲಿ ಕೆಲಸ ಮಾಡುವ ಹೆಚ್ಚಿನ ಜನರು ಬೇರೆ ರಾಜ್ಯಗಳಿಂದ ಬಂದವರು. ಕೋವಿಡ್ ಪರಿಸ್ಥಿತಿ ಸುಧಾರಿಸದಿದ್ದರೆ, ಹಿಂದಿನ ಲಾಕ್ಡೌನ್ಗಳ ಸಮಯದಲ್ಲಿ ಎದುರಿಸಿದ ಸಮಸ್ಯೆಗಳಿಗೆ ರಾಷ್ಟ್ರ ರಾಜಧಾನಿ ಮರು ಸಾಕ್ಷಿಯಾಗಬಹುದು.ದೆಹಲಿಯಲ್ಲಿ ಮುಂದಿನ ಸೋಮವಾರದಂದು ಕೇಜ್ರಿವಾಲ್ ಸರ್ಕಾರ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಿಕೊಂಡ ನಂತರ ಲಾಕ್ ಡೌನ್ ಹೇರಬೇಕೋ? ಬೇಡವೋ ಎಂದು ನಿರ್ಧರಿಸುತ್ತದೆ.