ಬಸವರಾಜ ಬೊಮ್ಮಾಯಿ ಸರ್ಕಾರ ಅಧಿಕಾರಕ್ಕೆ ಬಂದು ಹತ್ತು ತಿಂಗಳು ಸಮೀಪಿಸುತ್ತಿದ್ದರೂ ಸಂಪುಟ ವಿಸ್ತರಣೆಗೆ ಸಮಯ ಕೂಡಿಬರುತ್ತಿಲ್ಲ. ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವ ಸಂದರ್ಭದಲ್ಲಾದರೂ ಸಂಪುಟ ವಿಸ್ತರಣೆ ಮಾಡಿ ಎಂದು ಆಕಾಂಕ್ಷಿಗಳು ದುಂಬಾಲು ಬಿದ್ದಿದ್ದಾರೆ.
ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಬೊಮ್ಮಾಯಿ ಮೇಲೆ ಹೆಚ್ಚಿದ ಒತ್ತಡ
ಈಗ, ಸಿಎಂ ಬೊಮ್ಮಾಯಿ ಕೇಂದ್ರ ನಾಯಕತ್ವಕ್ಕೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಒತ್ತಡದಲ್ಲಿದ್ದಾರೆ. ಕೆಲ ಹಳಬರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆಯೂ ಇದೆ. ಇತ್ತ ಅನೇಕ ಹಿರಿಯ ಶಾಸಕರು ಹೈಲೆವೆಲ್ ಲಾಬಿ ಮಾಡುತ್ತಿದ್ದು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕೆಲವು ವಾರಗಳಲ್ಲಿ ಸಂಪುಟ ಪುನಃ ರಚನೆ ಮತ್ತು ವಿಸ್ತರಣೆ ಮಾಡಬೇಕಿದೆ. ಒಟ್ಟಿನಲ್ಲಿ ಪುನಃ ರಚನೆ / ವಿಸ್ತರಣೆಗೆ ಸಿಎಂ ಬೊಮ್ಮಾಯಿ ನಿರ್ಧರಿಸಿದ್ದು, ಹೈಕಮಾಂಡ್ ಗ್ರೀನ್ ಸಿಗ್ನಲ್ಗಾಗಿ ಕಾಯುತ್ತಿದ್ದಾರೆ.
ಪೋರ್ಟ್‌ಫೋಲಿಯೋ ಹಂಚಿಕೆ ಕುರಿತು ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿದ್ದು, “ಮೇ 27 ರಂದು ಪ್ರಾರಂಭವಾಗುವ 15 ದಿನಗಳ ರಾಜ್ಯಾದ್ಯಂತ ಪ್ರವಾಸದ ಮೊದಲು ಅಂತಿಮ ನಿರ್ಧಾರ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.” 2023ರ ವಿಧಾನಸಭೆ ಚುನಾವಣೆಗೆ ಕಾರ್ಯಕರ್ತರನ್ನು ಸಿದ್ಧಪಡಿಸಲು ಸಿಎಂ ಮತ್ತು ಬಿಜೆಪಿಯ ಇತರ ನಾಯಕರು ರಾಜ್ಯ ಪ್ರವಾಸ ಮಾಡುವ ನಿರೀಕ್ಷೆಯಿದೆ.
ಸದ್ಯಕ್ಕೆ ಕರ್ನಾಟಕದಲ್ಲಿ ಒಟ್ಟು 29 ಸಚಿವರು 34 ಖಾತೆಗಳನ್ನು ಹಂಚಿಕೊಂಡಿದ್ದಾರೆ. ಕ್ಯಾಬಿನೆಟ್ ವಿಸ್ತರಣೆಯಾದರೆ ಆದಾಗ್ಯೂ, ಯಾರಿಗೆ ಯಾವ ಪೋರ್ಟ್‌ಫೋಲಿಯೊ ಸಿಗುತ್ತದೆ ಎಂಬ ಬಗ್ಗೆ ಸ್ಪಷ್ಟ ಸೂಚನೆ ಕೂಡ ಯಾರಿಗೂ ಇಲ್ಲ ಎಂದು ದಿ ಕ್ವಿಂಟ್ ವರದಿ ಮಾಡಿದೆ.
ಸಂಪುಟ ವಿಸ್ತರಣೆ ಅಂತಿಮವಾಗುತ್ತದೆಯೇ?
ಸದ್ಯ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಇತ್ತೀಚೆಗೆ ಖಾಲಿಯಾದ ಕೆ.ಎಸ್. ಈಶ್ವರಪ್ಪ ಅವರ ಸ್ಥಾನ ಸಹಿತ ಒಟ್ಟು ಐದು ಸ್ಥಾನಗಳು ಖಾಲಿ ಇವೆ. ಕೆಲ ಹಳಬರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆಯೂ ಇದೆ. ಒಟ್ಟಾರೆ 12-15 ಹೊಸ ಸಚಿವರು ಬರಲಿದ್ದಾರೆ ಎಂಬ ಊಹಾಪೋಹಗಳು ಬಹುದಿನಗಳಿಂದ ಹರಿದಾಡುತ್ತಿವೆ.
ಸಿಎಂ ಬೊಮ್ಮಾಯಿ ಸಂಪುಟದ ಪ್ರಮುಖ ಆಕಾಂಕ್ಷಿಗಳು
ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಬಿಜೆಪಿ ಕೇಂದ್ರ ನಾಯಕತ್ವ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ ಮರುದಿನವೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಭೇಟಿಯಾಗಲು ಧಾವಿಸಿದ್ದಾರೆ.
ರಾಜ್ಯದ ವಿಧಾನ ಪರಿಷತ್ತಿನಲ್ಲಿ ಮತಾಂತರ ವಿರೋಧಿ ಮಸೂದೆಯನ್ನು ಅಂಗೀಕರಿಸಲು ಸಹಾಯ ಮಾಡುವ ತಮ್ಮ ಸಹೋದರ ಎಂಎಲ್‌ಸಿ ಲಖನ್ ಜಾರಕಿಹೊಳಿ ಅವರ ಮೇಲೆ ಹಿಡಿತ ಸಾಧಿಸುವ ಮೂಲಕ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಬಿಜೆಪಿಯ ಒಳಗಿನ ಚರ್ಚೆ. ಲಖನ್ ಜಾರಕಿಹೊಳಿ ಸ್ವತಂತ್ರ ಅಭ್ಯರ್ಥಿಯಾಗಿದ್ದು, ಅವರ ಸ್ವಿಂಗ್ ಮತವು ರಾಜ್ಯದ ಮೇಲ್ಮನೆಯಲ್ಲಿ ಮಸೂದೆಯನ್ನು ಅಂಗೀಕರಿಸಬಹುದು.
ಸಚಿವ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ಅವರ ಕಿರಿಯ ಪುತ್ರ ಬಿವೈ ವಿಜಯೇಂದ್ರ ಡರ್ಬಿಯಲಿದ್ದಾರೆ. 2019 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿ ಪಕ್ಷಕ್ಕೆ ಸೇರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗಿತ್ತು, ಆದರೂ ಸಹ ಅಂದು ಯಾವುದೇ ಕ್ಯಾಬಿನೆಟ್ ಸ್ಥಾನವನ್ನು ನೀಡಿರಲಿಲ್ಲ. ಆದಾಗ್ಯೂ, ಲಿಂಗಾಯತ ಮತದಾರರನ್ನು ಓಲೈಸಲು ಈಗ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಎಂದು ಹೇಳಲಾಗ್ತಿದೆ.
ಸಿಎಂ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಬಿಎಸ್ ಯಡಿಯೂರಪ್ಪ ಅವರ ಆಪ್ತರಾಗಿರುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಳೆದ ವರ್ಷ ಸಂಪುಟಕ್ಕೆ ಸೇರ್ಪಡೆಯಾಗಿರಲಿಲ್ಲ. ಆದರೆ, ರೇಣುಕಾಚಾರ್ಯ ಸಚಿವ ಸ್ಥಾನಕ್ಕಾಗಿ ನಿರಂತರವಾಗಿ ಲಾಬಿ ನಡೆಸುತ್ತಿದ್ದಾರೆ. 2022ರ ಜನವರಿಯಲ್ಲಿ ರೇಣುಕಾಚಾರ್ಯ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ‘ಹೊಸ ಮುಖಗಳೇಕೆ ಬೇಡ, ನಮಗೆ ಸಚಿವರಾಗುವ ಅರ್ಹತೆ ಇಲ್ಲವೇ? ಎಂದು ಬಹಿರಂಗವಾಗಿ ಕಿಡಿಕಾರಿದ್ದರು.
ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟ ಪುನಃ ರಚನೆಗೆ ಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
“ಬಿಜೆಪಿ ಕೆಲ ಹಿರಿಯ ಶಾಸಕರು ಕೂಲಂಕುಷವಾಗಿ (ಕ್ಯಾಬಿನೆಟ್) ಬೇಡಿಕೆಯಿಡುತ್ತಿರುವಾಗ, ಈ ಚುನಾವಣೆ ಹೊಸ್ತಿಲಲ್ಲಿ ದೆಹಲಿಯ ನಾಯಕತ್ವವು ರಾಜ್ಯದ ಹಿರಿಯ ನಾಯಕರನ್ನು ಅಸಮಾಧಾನಗೊಳಿಸುತ್ತಾರೆಯೇ ಇಲ್ಲವೆ ಎಂಬುದನ್ನು ಕಾದು ನೋಡಬೇಕು.”
ಸಿಎಂ ಬೊಮ್ಮಾಯಿ ಅವರು ಏಪ್ರಿಲ್ 30 ರಂದು ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ. ಸುಮಾರು ಎಂಟು ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.
ಏಪ್ರಿಲ್ 16 ರಂದು ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕಾರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, “ನಮ್ಮ ರಾಜ್ಯದ ಮೇಲೆ ನಾವು ಬೀರಿದ ಸಕಾರಾತ್ಮಕ ಪರಿಣಾಮಕ್ಕಾಗಿ ಜನರು ನಮ್ಮನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆಂದು ನನಗೆ ಖಾತ್ರಿಯಿದೆ” ಎಂದು ಹೇಳಿದರು.
ದಿ ಕ್ವಿಂಟ್‌ನೊಂದಿಗೆ ಮಾತನಾಡಿದ ಅರ್ಥಶಾಸ್ತ್ರಜ್ಞ ಪ್ರೊ.ನರೇಂದರ್ ಪಾಣಿ, “ಅಭಿವೃದ್ಧಿಯ ವಿಷಯದಲ್ಲಿ ನೀವು ಈ ಸರ್ಕಾರದೊಂದಿಗೆ ಮಾತನಾಡಲು ಏನೂ ಇಲ್ಲ.” ಬದಲಿಗೆ, ಬೊಮ್ಮಾಯಿ ಸಂಪುಟದ ಸಚಿವರು ಮತ್ತು ಶಾಸಕರು ಲೈಂಗಿಕ- ಟ್ಯಾಪ್‌ಗಳಲ್ಲಿ, ಕೋಮು ಘರ್ಷಣೆಗಳಲ್ಲಿ, ಭ್ರಷ್ಟಾಚಾರ ಮತ್ತು ವಿವಾದಾತ್ಮಕ ಹೇಳಿಕೆ, ಪ್ರಚೋದನೆಗಳಿಗೆ ಬಲಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಪಕ್ಷದ ವರಿಷ್ಠರು ನನ್ನನ್ನು ಕರೆದಿಲ್ಲ, ದೆಹಲಿಯಲ್ಲಿ ತೀರ್ಮಾನವಾದ ನಂತರ ತಿಳಿಸುತ್ತೇನೆ ಎಂದರು. ಮೇ 2023 ರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಪೂರ್ಣ ಪ್ರಮಾಣದ ಪ್ರಚಾರಕ್ಕೆ ಸಜ್ಜಾಗಿರುವ ಸಮಯದಲ್ಲಿ ಈ ನಿರ್ಧಾರವೂ ತೆಗೆದುಕೊಳ್ಳುತ್ತಿರೋದು ಪ್ಲೆಸ್ ಆಗುತ್ತ ಕಾದುನೋಡಬೇಕಿದೆ.