ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ, ಸದ್ಯ 2023ನೇ ಸಾಲಿನ ಐಪಿಎಲ್ ಅಂಗಳದಲ್ಲಿ ಮಿಂಚುತ್ತಿದ್ದಾರೆ. ಇನ್ನೊಂದೆಡೆ ಮಹಿ, ಸಿನಿಮಾ ಕ್ಷೇತ್ರದಲ್ಲೂ ಸದ್ದು ಮಾಡೋಕೆ ಆರಂಭಿಸಿದ್ದಾರೆ.

ಧೋನಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾ, ʻಎಲ್‌ಜಿಎಂʼ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ʻಲೆಟ್ಸ್ ಗೆಟ್ ಮ್ಯಾರೀಡ್ʼ ಇದು ʻಎಲ್‌ಜಿಎಂʼ ಟೈಟಲ್‌ನ ವಿಸ್ತ್ರತ ರೂಪ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಂಡಿರುವ ಎಂ.ಎಸ್.ಧೋನಿ, ಇಡೀ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.

ʻಎಲ್‌ಜಿಎಂ ಸಿನಿಮಾದ ಫಸ್ಟ್ ಲುಕ್ ಲಾಂಚ್ ಮಾಡೋಕೆ ಖುಷಿ ಆಗ್ತಿದೆ. ನಿಮ್ಮ ಮುಖದಲ್ಲಿ ನಗು ತರಿಸುವ ಫ್ಯಾಮಿಲಿ ಎಂಟರ್‌ಟೇನರ್ ಚಿತ್ರಕ್ಕಾಗಿ ರೆಡಿಯಾಗಿರಿ. ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಅಂತ ಮಹಿ ಶುಭಹಾರೈಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸುವ ಮೂಲಕ, ತಮಿಳುನಾಡಿನ ಅಭಿಮಾನಿಗಳ ಜೊತೆ ವಿಶೇಷ ನಂಟು ಬೆಳೆಸಿಕೊಂಡಿದ್ದಾರೆ. ಈ ಹಿನ್ನೆಲೆ ಧೋನಿ ತಮ್ಮ ಪ್ರೊಡಕ್ಷನ್ ಹೌಸ್‌ನಲ್ಲಿ ʻಎಲ್‌ಜಿಎಂʼ ಶೀರ್ಷಿಕೆಯ ತಮಿಳು ಸಿನಿಮಾವನ್ನ ನಿರ್ಮಿಸಲಿದ್ದಾರೆ. ಈ ಸಿನಿಮಾದಲ್ಲಿ ನಟ ಹರೀಶ್ ಕಲ್ಯಾಣ್, ನದಿಯಾ, ಇವಾನ ಸೇರಿ ಮುಂತಾದ ಕಲಾವಿದರು ನಟಿಸಿದ್ದಾರೆ. ʻಎಲ್‌ಜಿಎಂʼ ಸಿನಿಮಾ ನಿರ್ದೇಶಕ ರಮೇಶ್ ತಮಿಳ್ಮಣಿ ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಂಗೀತ ನಿರ್ದೇಶನವನ್ನೂ ಸಹ ಮಾಡಿದ್ದಾರೆ
