ಸರ್ಕಾರ ವೀಕೆಂಡ್ ಕರ್ಪ್ಯೂ ಜಾರಿ ಮಾಡುತ್ತೇವೆ ಎಂದು ಹೇಳಿದ ಕ್ಷಣದಿಂದ ಮದ್ಯ ಪ್ರಿಯರನ್ನ ಕಾಡುತ್ತಿದ್ದದ್ದು ಒಂದೆ ಪ್ರಶ್ನೆ ಬಾರ್ ಇರತ್ತಾ? ಇರಲ್ವಾ? ಅನ್ನೋದು. ಇವತ್ತು ಆ ಪ್ರಶ್ನೆಗು ಉತ್ತರ ಸಿಕ್ಕಿದ್ದು ಶನಿವಾರ ಹಾಗೂ ಭಾನುವಾರ ಮದ್ಯ ಸಿಗಲ್ಲಾ ಅನ್ನೋದು ಕನ್ಫರ್ಮ್ ಆಗಿದೆ. ಮದ್ಯ ಬೇಕು ಅಂದ್ರೆ ಸ್ಟಾಕ್ ಇಟ್ಟುಕೊಳ್ಳೋದು ಬಿಟ್ಟು ಬೇರೆ ಪರಿಹಾರ ಇಲ್ಲದಂತಾಗಿದೆ.
ಓಮಿಕ್ರಾನ್ ಹಾಗೂ ಕರೋನಾ ವೈರಸ್ ನಿಯಂತ್ರಿಸಲು ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ನಾಳೆ ರಾತ್ರಿಯಿಂದ ಸೋಮವಾರದ ಮುಂಜಾನೆವರೆಗು ಕರ್ಪ್ಯೂ ಜಾರಿಯಿರಲಿದೆ. ಈ ವೇಳೆ ಬಾರ್ ಗಳನ್ನ ಕ್ಲೋಸ್ ಮಾಡುವಂತೆ ಸರ್ಕಾರ ಆದೇಶಿಸಿದೆ. ಸರ್ಕಾರದ ಆದೇಶವನ್ನ ಪಾಲಿಸಿರುವ ಅಬಕಾರಿ ಇಲಾಖೆ ಎಲ್ಲಾ ಬಾರ್ ಮಾಲೀಕರಿಗು, ಎಂಎಸ್ಐಎಲ್ ಗಳಿಗು ಎರಡು ದಿನ ಬಂದ್ ಮಾಡಲು ಸೂಚನೆ ನೀಡಿದೆ. ಸರ್ಕಾರದ ಆದೇಶ ಬಂದ್ಮೇಲೆ ಎಲ್ಲಾ ಬಾರ್ ಗಳನ್ನ ಎರಡು ದಿನಗಳ ಕಾಲ ಕ್ಲೋಸ್ ಮಾಡಲು ಅಬಕಾರಿ ಇಲಾಖೆ ಆದೇಶ ಮಾಡಿದೆ.
ಅಬಕಾರಿ ಇಲಾಖೆಯ ಅಪರ ಮುಖ್ಯ ಆಯುಕ್ತ ರಾಜೇಂದ್ರ ಪ್ರಸಾದ್, ನಾವು ಸರ್ಕಾರ ಆದೇಶದವನ್ನು ಪಾಲನೆ ಮಾಡುತ್ತಿದ್ದೇವೆ. ವೀಕೆಂಡ್ ಕರ್ಪ್ಯೂ ಇರುವುದರಿಂದ ಶನಿವಾರ, ಭಾನುವಾರ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಎಲ್ಲಾ ಬಂದ್ ಇರುತ್ತೆ. ಯಾವುದೇ ಪಾರ್ಸಲ್ ಗೆ ಅವಕಾಶ ಇಲ್ಲ ಎಂದು ʻಪ್ರತಿಧ್ವನಿʼಗೆ ಮಾಹಿತಿ ನೀಡಿದರು. ಇತ್ತ ಬಾರ್ ಅಸೋಸಿಯೇಷನ್ ಸರ್ಕಾರದ ವಿರುದ್ಧ ಕೆಂಡ ಕಾರಿದೆ.

ನೈಟ್ ಕರ್ಫ್ಯೂ ಬಗ್ಗೆ ನಮಗೆ ಯಾವುದೇ ಆಕ್ಷೇಪಣೆ ಇರಲಿಲ್ಲ. ಆದರೆ ವೀಕೆಂಡ್ ಕರ್ಫ್ಯೂ ಸಧ್ಯಕ್ಕೆ ಅಗತ್ಯತೆ ಇರಲಿಲ್ಲ. ಈ ವೀಕೆಂಡ್ ಕರ್ಫ್ಯೂ ಮದ್ಯ ವ್ಯಾಪಾರಿಗಳಿಗೆ ತೀವ್ರ ಹೊಡೆತ ನೀಡಲಿದೆ. ವ್ಯಾಪಾರಸ್ಥರು ವೀಕೆಂಡ್ ನಲ್ಲಿಯೇ ಹೆಚ್ಚಿನ ನಿರೀಕ್ಷೆಯನ್ನು ಇಟ್ಟು ಕೊಂಡಿರುರ್ತಾರೆ. ಜೊತೆಗೆ ಹೆಚ್ಚು ವ್ಯಾಪಾರವಾಗೋದು ಸಹ ರಾತ್ರಿ ಹೊತ್ತಲ್ಲೆ. ಆದರೆ ಸರ್ಕಾರ ಈ ರೀತಿಯಾದಂತಹ ನಿರ್ಧಾರವನ್ನ ತೆಗೆದುಕೊಳ್ಳಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಸರ್ಕಾರದ ಈ ಆದೇಶಕ್ಕೆ ರಾಜಧಾನಿಯ ಮದ್ಯಪ್ರಿಯರು ಶಾಕ್ ಆಗಿದ್ದಾರೆ. ಹೀಗಾಗಿ ಬಾರ್ ಗಳು ಮುಂದೆ ನಾ ಮುಂದು ತಾ ಮುಂದೆ ಮುಗಿಬಿದ್ದು ಮದ್ಯ ಖರೀದಿಗೆ ಮುಂದಾಗ್ತಿದ್ದಾರೆ.


