ಲಿಂಕ್ಡ್ಇನ್ನ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ 55%ರಷ್ಟು ವೃತ್ತಿಪರ ಉದ್ಯೋಗಿಗಳು ತಮ್ಮ ಕೆಲಸ-ಜೀವನದ ಅಸಮತೋಲನದಿಂದಾಗಿ, ಸಾಲದಾದ ಆದಾಯ ಮತ್ತು ನಿಧಾನಗತಿಯ ವೃತ್ತಿ ಪ್ರಗತಿಯಿಂದಾಗಿ ಕೆಲಸದಲ್ಲಿ ಒತ್ತಡವನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಜುಲೈ 31 ರಿಂದ ಸೆಪ್ಟೆಂಬರ್ 24 ರವರೆಗಿನ 3,881 ವೃತ್ತಿಪರ ಉದ್ಯೋಗಿಗಳ ಪ್ರತಿಕ್ರಿಯೆಗಳನ್ನು ಆಧರಿಸಿದ ಸಮೀಕ್ಷೆಯು, ಕಳೆದ 18 ತಿಂಗಳುಗಳಲ್ಲಿ ಬದಲಾವಣೆಯ ಸಮಯಕ್ಕೆ ಅನುಗುಣವಾಗಿ ಕೆಲಸ ಮಾಡುವ ವೃತ್ತಿಪರರ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ.
ಕೆಲಸದ ಒತ್ತಡಕ್ಕೆ ತಮ್ಮ ಪ್ರಾಥಮಿಕ ಕಾರಣಗಳನ್ನು ಹಂಚಿಕೊಳ್ಳಲು ಕೇಳಿದಾಗ, ಪ್ರತಿಕ್ರಿಯಿಸಿದವರು… ‘ವೈಯಕ್ತಿಕ ಅಗತ್ಯತೆಗಳೊಂದಿಗೆ ಕೆಲಸವನ್ನು ಸಮತೋಲನಗೊಳಿಸುವುದು’ (‘balancing work with personal needs’) (34%) ರಷ್ಟು ಜನ ಒತ್ತಡಕ್ಕೆ ಒಳಗಾಗಿದ್ದಾರೆ, ಅವಶ್ಯಕತೆ ಇರುವಷ್ಟು ಹಣ ಮಾಡದಿರುವುದು’ (‘not making enough money’) (32%), ಮತ್ತು ‘ನಿಧಾನವಾದ ವೃತ್ತಿ ಪ್ರಗತಿ’ (‘slow career advancement’) (25%) ಮೂರು ಕಾರಣಗಳನ್ನು ನೀಡಿದ್ದಾರೆ.
“ಹೆಚ್ಚಿನ ವೃತ್ತಿಪರ ಉದ್ಯೋಗಿಗಳು ಕೆಲಸ-ಜೀವನದ ಸಮತೋಲನವನ್ನು ನಿಭಾಯಿಸಲಾಗದೆ ಒತ್ತಡಕ್ಕೆ ಒಳಗಾಗಿದ್ಧಾರೆ” ಅದರಿಂದ ಹೊರಬರಲು ಅವರಿಗೆ ಹೆಚ್ಚಿನ ನಮ್ಯತೆಯ (flexibility) ಅಗತ್ಯವಿದೆ” ಎಂದು ಲಿಂಕ್ಡ್‌ಇನ್‌ನ ಇಂಡಿಯಾ ಕಂಟ್ರಿ ಮ್ಯಾನೇಜರ್ ಅಶುತೋಷ್ ಗುಪ್ತಾ ಹೇಳಿದ್ದಾರೆ.
“ಆದರೆ ನಮ್ಮ ಸಮೀಕ್ಷೆಯು ಉದ್ಯೋಗಿಗಳಿಗೆ ಏನು ಬೇಕು ಮತ್ತು ಒತ್ತಡವನ್ನು ನಿಭಾಯಿಸಲು ಉದ್ಯೋಗದಾತರು ಏನು ನೀಡುತ್ತಿದ್ದಾರೆ ಎಂಬುದರ ನಡುವಿನ ವಿಶಾಲ ಅಂತರವನ್ನು ಬಹಿರಂಗಪಡಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಸುಮಾರು ಅರ್ಧದಷ್ಟು (47%) ಉದ್ಯೋಗಸ್ಥರು ಸಮಂಜಸವಾದ ಸಮಯದಲ್ಲಿ ಕೆಲಸ ಮುಗಿಸಲು ಆದ್ಯತೆ ನೀಡುತ್ತಾರೆ ಆದರೆ ಕೇವಲ ಮೂರನೇ ಒಂದು ಭಾಗದಷ್ಟು (36%) ಮಾತ್ರ ಕೆಲಸವನ್ನು ಮಾಡಲು ಸಾಧ್ಯ ಎಂದು ಗುಪ್ತಾ ಹೇಳಿದ್ದಾರೆ.