ಯುರೋಪ್ ( Europe ) ಪ್ರವಾಸದ ನಂತರ ರಾಜ್ಯಕ್ಕೆ ಮರಳಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (H.D Kumaraswamy ) ಇದೀಗ ಮತ್ತೆ ಎಂದಿನಂತೆ ಸಕ್ರಿಯ ರಾಜಕಾರಣದಲ್ಲಿ ( Politics ) ತೊಡಗಿಕೊಂಡಿದ್ದಾರೆ. ಯುರೋಪ್‌ನಿಂದ ಮರಳುತ್ತಿದಂತೆ ಕಾಂಗ್ರೆಸ್ ಸರ್ಕಾರದ ( Congress ) ವಿರುದ್ಧ ಕೆಂಡ ಕಾರಿದ್ದ ಹೆಚ್‌ಡಿಕೆ, ಡಿಸಿಎಂ ಡಿ.ಕೆ. ಶಿವಕುಮಾರ್ ( DCM D.K Shivakumar ) ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು, ಇದೀಗ ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ಕೋಟ್ಟಿದ್ದಾರೆ.
ಈ ಜನ್ಮದಲ್ಲಿ ಡಿಕೆ ಶಿವಕುಮಾರ್ ಅವರಂತಹ ತಮ್ಮ ಬೇಡ ಎಂದು ಹೆಚ್ಡಿ ಕುಮಾರಸ್ವಾಮಿ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ʼʼಬಹಳ ಸಂತೋಷ, ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಏನಿದೆ? ನುಡಿಮುತ್ತುಗಳನ್ನು ಬಹಳ ಸಂತೋಷದಿಂದ ಸ್ವೀಕಾರ ಮಾಡಿದ್ದೇನೆʼʼ ಎಂದು ವ್ಯಂಗ್ಯವಾಡಿದ್ದಾರೆ.
ಇದರ ಜೊತೆಗೆ ʼʼನಾಳೆನೋ, ನಾಡಿದ್ದೋ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನೆಗಳಿಗೆ ಉತ್ತರ ಕೊಡೋಣʼʼ ಎಂದಿರುವ ಅವರು .ʼʼನನ್ನ ಜಾಯಮಾನದಲ್ಲೇ ಹಿಟ್ & ರನ್ ಮಾಡಲ್ಲʼʼ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ʼʼಯಾರ ಜಾಯಮಾನ ಏನು ಅಂತಾ ನಾಳೆ ಮಾತನಾಡೋಣ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಾರೆಯಾಗಿ ಇದೀಗ ಮಾಜಿ ಸಿಎಂ ಹಾಗೂ ಹಾಲಿ ಉಪಮುಖ್ಯಮಂತ್ರಿ ನಡುವೆ ಕದನ ತಾರಕಕ್ಕೆ ಏರುವ ಸಾಧ್ಯತೆಗಳು ಕೂಡ ದಟ್ಟವಾಗಿ ಕಾಡುತ್ತಿದೆ, ಹೀಗಾಗಿ ಮುಂದಿನ ದಿನಗಳಲ್ಲಿ ಈ ಇಬ್ಬರು ನಾಯಕರ ನಡುವಿನ ಸಮರ ಯಾವ ರೀತಿಯಲ್ಲಿ ಮುಂದುವರೆಯಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ