ಬಿಜೆಪಿಯಲ್ಲಿ ಭ್ರಷ್ಟಾಚಾರ ಯಾವ ರೀತಿ ತಾಂಡವಾಡುತ್ತಿದೆ ಎನ್ನುವುದಕ್ಕೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಸಾಕ್ಷಿಯಾಗಿದೆ. ಈ ಕಾರಣದಿಂದ 30-40 ಪರ್ಸೆಂಟ್ ವ್ಯವಹಾರ ನಡೆಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಬಿಜೆಪಿಯವರು ದೊಡ್ಡ ಕೊಡಲಿ ಪೆಟ್ಟನ್ನು ಇಟ್ಟಿದ್ದಾರೆ ಎಂದು ಶಾಸಕ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರ ಹೇಳಿಕೆಯನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಈ ಬಗ್ಗೆ ತಕ್ಷಣವೇ ತನಿಖೆಯಾಗಬೇಕು. ಸ್ವತಃ ಸ್ವಪಕ್ಷದ ಶಾಸಕರೇ ಇಂಥ ಗಂಭೀರ ಆರೋಪ ಮಾಡಿರುವಾಗ 2500 ಕೋಟಿ ಕೇಳಿದವರು ಯಾರು? ಯಾರಿಗೆ ಆ ಹಣ ಮುಟ್ಟುತ್ತೆ ಎನ್ನುವ ಬಗ್ಗೆ ಸಂಪೂರ್ಣವಾಗಿ ತನಿಖೆಯಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಶಕ್ತಗೊಳಿಸಲು ಇದಕ್ಕಿಂತ ದೊಡ್ಡ ಹೆಜ್ಜೆ ಇನ್ನಾವುದು ಇಲ್ಲ ಎಂದು ಶಾಸಕ ಎಚ್.ಕೆ. ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರಂಭದಲ್ಲಿ ಶಾಸಕ ಯತ್ನಾಳ್ ಸಿಎಂ ಮಾಡ್ತಿವಿ 2500 ಸಿದ್ಧಪಡಿಸಿಕೊಳ್ಳಿ. ನಿಮ್ಮನ್ನ ಶಾ ಮತ್ತು ನಡ್ಡಾ ಎದುರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದರು. ಮಾರನೇ ದಿನವೇ ನಾನು ಕೇವಲ ಒಂದು ಪಕ್ಷದ ಬಗ್ಗೆ ಹೇಳಿಲ್ಲ. ಎಲ್ಲ ಪಕ್ಷದಲ್ಲೂ ಇದೆ ಸ್ಥಿತಿ ಇದೆ ಎಂದು ಯುಟರ್ನಾದ್ರು. ಮುಂದುವರೆದು ಪ್ರಧಾನಿ ಮೋದಿ ಅವರಂಥವರು ಇರುವವರೆಗೆ ಬಿಜೆಪಿಯಲ್ಲಿ ಇಂಥದಕ್ಕೆಲ್ಲ ಅವಕಾಶವಿಲ್ಲ ಎಂದು ಹೇಳಿದ್ದರು. ಆದರೂ ಕೂಡ ದೇಶದ ರಾಜಕಾರಣದಲ್ಲಿ ಯತ್ನಾಳ್ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಮಾತನ್ನು ಯಾವುದೋ ಪಕ್ಷ ಅಥವಾ ವ್ಯಕ್ತಿಯಿಂದ ಬಂದಿಲ್ಲ. ಸ್ವತಃ ಆಡಳಿತ ಪಕ್ಷದ ಶಾಸಕರೇ ಆರೋಪ ನಾಡಿದ್ದರಿಂದ ನ್ಯಾಯಾಂಗ ತನಿಖೆ ಮಾಡಬೇಕು. ಈಗಾಗಲೇ ರಾಜ್ಯದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿರುವಾಗಲೇ ಈ ಆರೋಪವೂ ಕೇಳಿದ್ದು ಈ ಬಗ್ಗೆ ತನಿಖೆಯ ಅವಶ್ಯಕತೆ ಇದೆ ಎಂದು ಎಚ್.ಕೆ. ಪಾಟೀಲ್ ಆಗ್ರಹಿಸಿದರು.