ಮಂಡ್ಯ: ವಿಜಯೇಂದ್ರಣ್ಣ ಶೀಘ್ರವೇ ಮುಖ್ಯಮಂತ್ರಿಯಾಗಲಿ ಸಚಿವ ಕೆ.ಸಿ ನಾರಾಯಣಗೌಡ ಹೇಳಿದ್ದಾರೆ. ಕೆ.ಆರ್ ಪೇಟೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆದ ಹೆಗ್ಗಳಿಕೆ ಹೊಂದಿದ್ದಾರೆ. ಅದೇ ರೀತಿ ರಾಜಾಹುಲಿ ಮಗ ಕೂಡ ಶೀಘ್ರದಲ್ಲೇ ಈ ರಾಜ್ಯದ ಸಿಎಂ ಆಗಬೇಕು ಎಂದು ಆಶಿಸಿದ್ದಾರೆ.
ನಾನು ಜೆಡಿಎಸ್ನಲ್ಲಿ 2ಬಾರಿ ಶಾಸಕನಾಗಿದ್ದೆ. ಆದರೆ ಆಗ ನನಗೆ ಕ್ಷೇತ್ರ ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ. ಯಡಿಯೂರಪ್ಪ ಸಿಎಂ ಆಗ್ತಾರೆ ಎಂದು ತಿಳಿದ ತಕ್ಷಣ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದೇನೆ. ರಾಜ್ಯದಲ್ಲಿ ಯಾರಾದರೂ ನುಡಿದಂತೆ ನಡೆಯುವ ನಾಯಕರಿದ್ದರೆ ಅದು ಯಡಿಯೂರಪ್ಪ ಮಾತ್ರ ಎಂದು ನಾರಾಯಣ ಗೌಡ ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ವಿಜಯೇಂದ್ರ ಯಡಿಯೂರಪ್ಪರ ಸ್ಥಾನ ತುಂಬುವ ಕಾರ್ಯ ಮಾಡ್ತಿದ್ದಾರೆ. ಅವರ ಕಾಲ್ಗುಣ ಚೆನ್ನಾಗಿದೆ. ಆದಷ್ಟು ಬೇಗ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಗಲಿ. ಆ ದಿನ ಹೆಚ್ಚು ದೂರವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.