
ಬೆಂಗಳೂರು: ದೇಶ ಕಂಡ ಅತ್ಯುತ್ತಮ ಆಡಳಿತಗಾರ, ಆರ್ಥಿಕ ತಜ್ಞ ಡಾಕ್ಟರ್ ಮನಮೋಹನ್ ಸಿಂಗ್ ಅವರು ವಿಧಿವಶರಾದ ಹಿನ್ನೆಲೆಯಲ್ಲಿ ಇಂದು ನೈಜ್ಯ ಹೋರಾಟಗಾರರ ವೇದಿಕೆ ಮತ್ತಿತರ ಸಂಘಟನೆಗಳು ಬೆಂಗಳೂರಿನಲ್ಲಿರುವ ಮಾಹಿತಿ ಆಯೋಗದ ಮುಂದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದರು.





ಸಭೆಯನ್ನು ಉದ್ದೇಶಿಸಿ ನೈಜ ಹೋರಾಟಗಾರ ವೇದಿಕೆ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್.ಎಂ ವೆಂಕಟೇಶ್ ಮಾತನಾಡಿ ಕರ್ನಾಟಕ ಸರ್ಕಾರಕ್ಕೆ ಬದ್ಧತೆ ಮತ್ತು ಇಚ್ಛಾಶಕ್ತಿ ಇದ್ದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ತಂದ ಮಾಹಿತಿ ಹಕ್ಕು ಅಧಿನಿಯಮ2005 ಪ್ರಕಾರ ಮಾಹಿತಿ ಆಯೋಗದಲ್ಲಿ ವರ್ಷಗಳಿಂದ ಖಾಲಿ ಇರುವ ಆಯುಕ್ತರ ಹುದ್ದೆಯನ್ನು ಭರ್ತಿ ಮಾಡಿ ಸಮರ್ಪಕ ಮತ್ತು ಅರ್ಹರನ್ನು ಆಯ್ಕೆ ಮಾಡುವ ಮೂಲಕ ಅವರಿಗೆ ಗೌರವ ಸಮರ್ಪಿಸಲಿ ಎಂದು ಹೇಳಿದರು.
ಮಾಹಿತಿ ಅಧ್ಯಯನ ಕೇಂದ್ರದ ಬಿ.ಹೆಚ್ ವೀರೇಶ್ ಮತ್ತಿತರ ಹೋರಾಟಗಾರರು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.










