ಹಾಸನ : ಆರೋಪ, ಪ್ರತ್ಯಾರೋಪ, ದ್ವೇಷದ ಮೂಲಕ ಮತ ಗಳಿಸೋದನ್ನು ಬಿಟ್ಟು ನೀವು ರಾಜ್ಯದ ಜನತೆಯ ಮತಗಳಿಸಲು ಯತ್ನಿಸಬೇಡಿ. ನಾಡಿನ ಜನತೆಗೆ ಕೊಡುಗೆಯೇನು ಕೊಟ್ಟಿದ್ದೀರಿ ಎಂಬುದರ ಮೂಲಕ ಜನರ ಮನಸ್ಸನ್ನು ಗೆಲ್ಲಲು ಯತ್ನಿಸಿ ಎಂದು ವಿಪಕ್ಷಗಳಿಗೆ ಮಾಜಿ ಸಿಎಂ ಡಿ.ವಿ ಸದಾನಂದ ಗೌಡ ಟಾಂಗ್ ನೀಡಿದ್ದಾರೆ. ಹಾಸನದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ತಾಕತ್ ಇದ್ದರೆ ಒಳ್ಳೆಯ ರಾಜನೀತಿಯನ್ನು ಮಾಡುವ ಪ್ರಯತ್ನ ಮಾಡಿ ಅಂತಾ ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಹೀಗೆ ಮೂರೂ ಪಕ್ಷಗಳೂ ರಾಜ್ಯದಲ್ಲಿ ಆಡಳಿತ ನಡೆಸಿವೆ. ಇದೇ ಊರಿನ ಮಣ್ಣಿನ ಮಗ ದೇವೇಗೌಡ ದೇಶದ ಪ್ರಧಾನಿಯಾಗಿ ಕೂಡ ಕೆಲಸ ಮಾಡಿದ್ದಾರೆ. ಅವರ ಪುತ್ರ ಹೆಚ್ಡಿಕೆ ಸಿಎಂ ಆಗಿ ರಾಜ್ಯದಲ್ಲಿ ಆಡಳಿತ ನಡೆಸಿದ್ದಾರೆ. ಯಡಿಯೂರಪ್ಪ ನಾಲ್ಕು ಬಾರಿ, ಈಗ ಬಸವರಾಜ ಬೊಮ್ಮಾಯಿ ಸಿಎಂ ಆಡಳಿತ ನಡೆಸುತ್ತಿದ್ದಾರೆ .ಮಧ್ಯದಲ್ಲಿ ವಿವಿಧ ಕಾರಣಗಳಿಂದ ನಾನು ಹಾಗೂ ಶೆಟ್ಟರ್ ಕೂಡ ಸಿಎಂ ಆಗಬೇಕಾಯ್ತು. ಸಿದ್ದರಾಮಯ್ಯ 13 ಬಜೆಟ್ ಕೊಟ್ಟವರು. ಸಿದ್ದರಾಮಯ್ಯನವರೇ ನಿಮ್ಮ 13 ಬಜೆಟ್ಗಳಲ್ಲಿ ಎಷ್ಟು ಇಂಪ್ಲಿಮೆಂಟ್ ಮಾಡಿದ್ದೀರಿ..? ಇದರಿಂದ ಜನರಿಗೆ ಆದ ಅನುಕೂಲವೇನು ಎನ್ನವುದನ್ನು ಜನರ ಮುಂದೆ ಇಡಿ ಎಂದು ಸವಾಲ್ ಎಸೆದಿದ್ದಾರೆ.

ಯಡಿಯೂರಪ್ಪ ಹಾಗೂ ಈಗಿನ ಸಿಎಂ ಬೊಮ್ಮಾಯಿ ರಾಜ್ಯದ ಜನತೆಗೆ ಎಷ್ಟು ಭರವಸೆ ನೀಡಿದ್ದಾರೆ ಎಂಬುದನ್ನು ಜನರ ಮುಂದೆ ಇಡುತ್ತೇವೆ. ಈ ಬಗ್ಗೆ ಮನೆ ಮನೆಗೆ ಕರಪತ್ರ ಹಂಚುತ್ತಿದ್ದೇವೆ. ವಿಜಯಸಂಕಲ್ಪ ಯಾತ್ರೆಗೆ ನಿರೀಕ್ಷೆಗಿಂತ ಹೆಚ್ಚು ಬೆಂಬಲ ಸಿಗುತ್ತಿದೆ. ಹೊಳೆ ನರಸೀಪುರ ನಮಗೆ ಸವಾಲಿನ ಭೂಮಿಯಾಗಿದೆ. ನಾವು ಇಲ್ಲಿ ಬಿತ್ತಿದ ಬೆಳೆಗ ಇಷ್ಟರವರೆಗೆ ಒಳ್ಳೆಯ ಫಸಲು ಸಿಗಲಿಲ್ಲ. ಮಣ್ಣಿನ ಮಕ್ಕಳು ಈ ಭಾಗಕ್ಕೆ ಏನು ಮಾಡಿದ್ದಾರೆ ಅದಕ್ಕಿಂತ ಹೆಚ್ಚು ಸೇವೆ ನಾವು ನೀಡಿದ್ದೇವೆ. ಈ ಚುನಾವಣೆಯಲ್ಲಿ ಯಾವುದೇ ರಾಜಕೀಯ ಹೊಂದಾಣಿಕೆ ಇಲ್ಲ ಎಂದು ಹೇಳಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ನಾವು ಎರಡೂ ಪಕ್ಷಗಳ ವಿರುದ್ಧ ಸೆಣೆಸಲಿದ್ದೇವೆ. ಇದರಲ್ಲಿ ಒಂದು ಪಕ್ಷ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಇನ್ನೊಂದು ಪಕ್ಷಕ್ಕೆ ಅವರವರ ಆಂತರಿಕ ಕಚ್ಚಾಟವೇ ಹೆಚ್ಚಾಗಿದೆ. ಪ್ರತಿಯೊಬ್ಬರನ್ನು ಕೇಳಿ ಚುನಾವಣೆ ಪ್ರಣಾಳಿಕೆ ಮಾಡಬೇಕಾದಸ್ಥಿಯಲ್ಲಿ ಕುಮಾರಸ್ವಾಮಿ ಇದ್ದಾರೆ. ಪಂಚರತ್ನ ಯಾತ್ರೆ ಬದಲು ಅವರು ಸೋಲಿನ ಯಾತ್ರೆ ಮಾಡಬೇಕಿತ್ತು ಎಂಧು ವ್ಯಂಗ್ಯವಾಡಿದ್ದಾರೆ.







