ಪೇಜರ್ ಬ್ಲಾಸ್ಟ್‌ನಿಂದ (Pager) ನಲುಗಿ ಹೋಗಿದ್ದ ಲೆಬನಾನ್‌ನಲ್ಲಿ (Lebanon), ನಿನ್ನೆ ಮತ್ತೊಂದು ಸರಣಿಯ ಅಟ್ಯಾಕ್ ನಡೆದಿದೆ. ನಿನ್ನೆ ಲೆಬನಾನ್‌ನ ಬೀದಿ ಬೀದಿಗಳಲ್ಲಿ, ಮಾರುಕಟ್ಟೆಗಳಲ್ಲಿ, ಕಾರುಗಳಲ್ಲಿ, ಮನೆಗಳಲ್ಲಿ, ಕಚೇರಿಗಳಲ್ಲಿ ಹೀಗೆ ನೂರಾರು ಕಡೆಗಳಲ್ಲಿ ಸರಣಿ ಸ್ಫೋಟ ಸಂಭವಿಸಿದೆ.

ಹೌದು, ಪೇಜರ್ ಬಳಿಕ ವಾಕಿಟಾಕಿ, ಮೊಬೈಲ್ (Mobile), ಸೋಲಾರ್ ಪ್ಯಾನೆಲ್‌ಗಳು (Solar panel) ಸ್ಫೋಟಿಸಿ 9 ಜನ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದಾರೆ.
ಇದೇ 5 ತಿಂಗಳ ಹಿಂದೆ ಹಿಬ್ಬುಲ್ಲಾ (Hezbollah) ಸಂಘಟನೆ, ಸದಸ್ಯರ ನಡುವಿನ ಸಂಹವಹನಕ್ಕಾಗಿ ವಾಕಿಟಾಕಿಗಳನ್ನ ಖರೀದಿಸಿತ್ತು. ಹೀಗೆ ಖರೀದಿಸಿದ್ದ ಸುಮಾರು 500 ವಾಕಿಟಾಕಿಗಳು ಛಿದ್ರ ಛಿದ್ರವಾಗಿದೆ. ಈ ಮಾದರಿಯ ದಾಳಿ ಕಂಡು ಇಡೀ ವಿಶ್ವವೇ ಅವಾಕ್ಕಾಗಿದೆ.