2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್(BJP Highcommand) ಜಿದ್ದಿಗೆ ಬಿದ್ದು ಮಲ್ಲಿಕಾರ್ಜುನ್ ಖರ್ಗೆಯವರನ್ನು (Mallikarjuna kharge) ಸೋಲಿಸಲೇಬೇಕು ಎಂದು ಪಣತೊಟ್ಟು ,ಹೈಕಮಾಂಡ್ ಮಟ್ಟದಲ್ಲಿಯೇ ರಣತಂತ್ರ ರೂಪಿಸಿ ಅಂತಿಮವಾಗಿ ಸೋಲಿಲ್ಲದ ಸರದಾರನಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರನ್ನ ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹೈಕಮಾಂಡ್ ಸೋಲಿಸುವ ಮೂಲಕ , ಮೊದಲನೇ ಸೋಲಿನ ರುಚಿಯನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿತ್ತು.
ಅದೇ ರೀತಿ ಈ ಬಾರಿ ಬೆಂಗಳೂರು ಗ್ರಾಮಾಂತರ (Bangalore rural) ಲೋಕಸಭಾ ಕ್ಷೇತ್ರದಲ್ಲಿ ಶತಾಯಗತಾಯ ಡಿಕೆ ಸುರೇಶ್ (Dk suresh) ರನ್ನ ಸೋಲಿಸುವ ಮೂಲಕ ಡಿಕೆ ಬ್ರದರ್ಸ್ ನ (Dk brothers) ಹಣಿಯಬೇಕು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಹೈಕಮಾಂಡ್ ಇದ್ದ ಹಾಗಿದೆ. ಅದಕ್ಕೆ ಪೂರಕ ಎಂಬಂತೆ ಬಿಜೆಪಿ ಅಭ್ಯರ್ಥಿಯಾಗಿ ಡಾಕ್ಟರ್ ಮಂಜುನಾಥ(Dr.manjunath ) ಕಣಕದಲ್ಲಿರೋದು ಮತ್ತು ಈಗಾಗಲೇ ಅಮಿತ್ ಶಾ (amith sha)ಆ ಭಾಗದಲ್ಲಿ ಬಂದು ರೋಡ್ ಶೋ ನಡೆಸಿರೋದು ,ಹೈಕಮಾಂಡ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೇಲೆ ಕಣ್ಣಿಟ್ಟಿರೋದನ್ನ ಸೂಚಿಸುತ್ತೆ.
ಒಟ್ನಲ್ಲಿ ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ಡಿಕೆ ಬ್ರದರ್ಸ್ ಇಟ್ಟ ಗುರಿಯನ್ನು ತಪ್ಪದೇ ಉಡಾಯಿಸುವಲ್ಲಿ ಬಿಜೆಪಿ ಹೈಕಮಾಂಡ್ ಎತ್ತಿದ ಕೈ . ಹೀಗಾಗಿ ಕೇಂದ್ರ ಬಜೆಟ್ ಮಂಡನೆ ನಂತರ ಡಿಕೆ ಸುರೇಶ್ ನೀಡಿದ ದೇಶ ವಿಭಜನೆಯ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡು ಡಿಕೆ ಸುರೇಶ್ ರನ್ನ ಸೋಲಿಸಿ, ಆ ಮೂಲಕ ಡಿಕೆ ಶಿವಕುಮಾರ್ ನಾಗಲೋಟಕ್ಕೆ ಬ್ರೇಕ್ ಹಾಕಬೇಕು ಅನ್ನೋದು ಬಿಜೆಪಿ ಹೈಕಮಾಂಡ್ನ ಲೆಕ್ಕಾಚಾರ.
ಆದ್ರೆ ಮಲ್ಲಿಕಾರ್ಜುನ ಖರ್ಗೆಯವರನ್ನ ಪರಾಭವಗುಳಿಸಿದಷ್ಟು ಸುಲಭವಾಗಿ ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಡಿಕೆ ಸುರೇಶ್ ರನ್ನ ಸೋಲಿಸುವುದು ಬಿಜೆಪಿ ಹೈಕಮಾಂಡ್ಗೆ ಸವಾಲಾಗಿಯೂ ಸವಾಲಾಗುತ್ತಾ ಅಥವಾ ಇಟ್ಟ ಗುರಿಯನ್ನು ತಲುಪುವುದರಲ್ಲಿ ಬಿಜೆಪಿ ಹೈಕಮಾಂಡ್ ಯಶಸ್ವಿಯಾಗುತ್ತಾ ಫಲಿತಾಂಶವೇ ಉತ್ತರ ನೀಡಬೇಕಿದೆ