ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕಾರು ಅಪಘಾತಕ್ಕೆ ಒಳಗಾಗಿದ್ದು ಹಿಟ್ ಆ್ಯಂಡ್ ರನ್‌ನಿಂದ (Hit & run) ಎಂದು ಬೆಳಗಾವಿಯಲ್ಲಿ ಎಸ್ಪಿ ಡಾ. ಭೀಮಾಶಂಕರ ಗುಳೇದ್ (Dr Bhima Shankar guled) ಮಾಹಿತಿ ನೀಡಿದ್ದಾರೆ.ಸರ್ಕಾರಿ ವಾಹನ ಅಪಘಾತ ಸಂಬಂಧ ಕಿತ್ತೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲಕ ಶಿವಪ್ರಸಾದ್ ಗಂಗಾಧರಯ್ಯ ಕಿತ್ತೂರ ಠಾಣೆಯಲ್ಲಿ ದೂರು ಈ ಬಗ್ಗೆ ದೂರು ದಾಖಲಿಸಿದ್ದರು.ಅಂಬಡಗಟ್ಟಿ ಕ್ರಾಸ್ ಬಳಿ ಕಂಟೇನರ್ ಎಡಗಡೆಯಿಂದ ಬಲಗಡೆ ಬಂದಿದೆ,ಆಗ ಕಂಟೇನರ್ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ವಾಹನಕ್ಕೆ ತಾಗಿದೆ.ಅಪಘಾತ ತಪ್ಪಿಸಲು ಹೋಗಿ ಹೆಬ್ಬಾಳ್ಕರ್ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.
ಈ ಘಟನೆ ಬಳಿಕ ವಾಹನ ಟೊಯೋಟಾ ಶೂರೂಂಗೆ ಸಾಗಿಸಲಾಗಿತ್ತು.ವಾಹನ ಪರಿಶೀಲನೆ ನಡೆಸಿದಾಗ ಕ್ಯಾಂಟರ್ ಡಿಕ್ಕಿ ಹೊಡೆದಿರುವುದು ಗೊತ್ತಾಗಿದೆ.ಸಚಿವರ ಕಡೆಯವರೇ ಟೋವಿಂಗ್ ವಾಹನಕ್ಕೆ ಫೋನ್ ಮಾಡಿ ಅಪಘಾತಕ್ಕಿಡಾದ ವಾಹನ ಶಿಫ್ಟ್ ಮಾಡಿದ್ದಾರೆ.

ಇದಾದ ಬಳಿಕ ಕಂಟೇನರ್ ಚಾಲಕ ಅಪಘಾತ ಬಳಿಕ ಗಾಡಿ ನಿಲ್ಲಿಸದೇ ಓಡಿ ಹೋಗಿ ತಪ್ಪು ಮಾಡಿದ್ದಾರೆ.ಹಿಟ್ ಆ್ಯಂಡ್ ರನ್ ಆದಾಗ ತಕ್ಷಣವೇ ನೆರವು ಒದಗಿಸಬೇಕು ಎಂದು ಕಾನೂನು ಇದೆ.ಅಪಘಾತ ಎಸಗಿದ ತಕ್ಷಣವೇ ಓಡಿ ಹೋಗದೇ ಅಪಘಾತಕ್ಕೆ ಒಳಗಾದವರ ನೆರವಿಗೆ ನಿಲ್ಲಬೇಕು ಎಂದು ಹೇಳಿದ್ದಾರೆ.
ಹೀಗಾಗಿ ಹೆಬ್ಬಾಳ್ಕರ್ ವಾಹನ ಅಪಘಾತ ಪ್ರಕರಣ ಹಿಟ್ ಆ್ಯಂಡ್ ರನ್ ಆಗಿದೆ.ಗನ್ ಮ್ಯಾನ್ ನೀಡಿದ ಅರ್ಜಿಯಲ್ಲಿ ಕ್ಲಾರಿಟಿ ಇರಲಿಲ್ಲ.ಈ ಕಾರಣಕ್ಕೆ ಚಾಲಕನಿಂದ ಅರ್ಜಿ ಪಡೆದು ದೂರು ದಾಖಲಿಸಿಕೊಳ್ಳಲಾಗಿದೆ.ಅಪಘಾತದ ಅವಧಿಯ ನಂತರ ಟೋಲ್ ದಾಟಿ 42 ವಾಹನ ಹೋಗಿವೆ.ಎರಡು ತಂಡ ರಚನೆ ಮಾಡಿ 42 ವಾಹನಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದು ಎಸ್ಪಿ ಡಾ. ಭೀಮಾಶಂಕರ ಗುಳೇದ್ ಮಾಹಿತಿ ನೀಡಿದ್ದಾರೆ.ಈ ಘಟನೆಯನ್ನು ನೋಡಿದರೆ ಇದೇನೂ ಪೂರ್ವ ನಿಯೋಜಿತ ಕೃತ್ಯ ಎನಿಸುವುದಿಲ್ಲ ಎಂದು ಕೂಡ ಹೇಳಿದ್ದಾರೆ.