ಮೈಸೂರು ಸಿದ್ದರಾಮಯ್ಯನವರ ತವರು ಜಿಲ್ಲೆ. ನನ್ನನ್ನು ಸೋಲಿಸಿ ಬೇಜಾರಿಲ್ಲ. ಆದರೇ ಸಿದ್ದರಾಮಯ್ಯ ಏನ್ ತಪ್ಪು ಮಾಡಿದ್ದಾರೆ. ತವರು ಜಿಲ್ಲೆಯಲ್ಲೇ ಎಷ್ಟು ಬಾರಿ ಅಪಮಾನ ಮಾಡುತ್ತೀರಿ ? ಅಂತ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕಿಡಿಕಾರಿದ್ದಾರೆ. ಮೈಸೂರಲ್ಲಿ ಮಾತಾಡಿದ ಅವರು ,ಇಷ್ಟರ ಮಟ್ಟಿಗೆ ಸ್ಯಾಡಿಸ್ಟಿಕ್ ನೇಚರ್ ಇದ್ದರೆ ಹೇಗೆ ? ಎಂದು ಎಂ.ಲಕ್ಷ್ಮಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಮತ ಹಾಕಿದವರಿಗೆ ಸಾಷ್ಟಾಂಗ ನಮಸ್ಕಾರ. ಮತ ಹಾಕದವರಿಗೆ ಬರಿ ನಮಸ್ಕಾರ ಎಂದರು. ನಂತರ ಸಿದ್ದರಾಮಯ್ಯಗೆ ಎದ್ದು ನಿಂತು ಸಾಷ್ಟಾಂಗ ನಮಸ್ಕಾರ ಮಾಡುವ ಮೂಲಕ ವಿವಿಧ ಬಗೆಯ ನಮಸ್ಕಾರ ಮಾಡಿದರು.ಮೈಸೂರಿಗೆ ಕೊಡಗು ಕ್ಷೇತ್ರದಲ್ಲಿ 6.5 ಲಕ್ಷ ಜನ ಮತ ನೀಡಿದ್ದಾರೆ. 7.9ಲಕ್ಷ ಜನ ಮತ ನೀಡಿಲ್ಲ. ಇವರಿಗೂ ಧನ್ಯವಾದ ಹೇಳುತ್ತೇನೆ. ಚುನಾವಣೆಯಲ್ಲಿ ಜನರಿಗೆ ಭರವಸೆ ನೀಡಿದ್ದೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಹೇಳಿದ್ದೆ.ಈಗ ನಾನು ಎಲ್ಲೂ ಓಡಿ ಹೋಗಲ್ಲ. ನಮ್ಮ ಪಕ್ಷ ಸರ್ಕಾರ ಅಧಿಕಾರದಲ್ಲಿದೆ. ಪ್ರಾಮಾಣಿಕವಾಗಿ ನಿಮ್ಮ ಜೊತೆ ಇದ್ದು ಕೆಲಸ ಮಾಡುತ್ತೇನೆ. ನನಗೆ ಸಿದ್ದರಾಮಯ್ಯನವರೇ ದೇವರು. ಸಿದ್ದರಾಮಯ್ಯನವರು ನನಗೆ ಟಿಕೆಟ್ ಕೊಟ್ಟರು. ಅದಕ್ಕೆ ಡಿಕೆ ಶಿವಕುಮಾರ್ ಕೂಡ ಸಹಕಾರ ನೀಡಿದರು. ಎಂಟು ಕ್ಷೇತ್ರದ ಶಾಸಕ, ಮಾಜಿ ಶಾಸಕರು ನನಗೆ ಸಹಕಾರ ನೀಡಿದ್ದಾರೆ. ನನಗೆ ಅದೃಷ್ಟ ಇರಲಿಲ್ಲ, ನನ್ನ ಹಣೆಬರಹ ಸರಿ ಇರಲಿಲ್ಲ, ಆಗಾಗಿ ನಾನು ಸೋತಿದ್ದು ಎಂದು ಎಂ ಲಕ್ಷ್ಮಣ್ ಬೇಸರ ವ್ಯಕ್ತಪಡಿಸಿದರು.ಬಿಜೆಪಿ ಅಭ್ಯರ್ಥಿ ಯದುವೀರ್ ಜನರನ್ನ ಎಷ್ಟರ ಮಟ್ಟಿಗೆ ಅರಮನೆಗೆ ಬಿಟ್ಟುಕೊಳ್ತಾರೋ ಇಲ್ಲವೋ ಗೊತ್ತಿಲ್ಲ. ನಾಳೆಯಿಂದಲೇ ನಾನು ಜನರ ಸಮಸ್ಯೆ ಪರಿಹರಿಸಲು ಮುಂದಾಗುತ್ತೇನೆ. ನನಗೆ ಮತ ಕೊಟ್ಟವರು, ಕೊಡದೆ ಇರುವವರು ಎಲ್ಲರು ನನ್ನ ಸಂಪರ್ಕ ಮಾಡಬಹುದು. ನಾಳೆಯೆ ನನ್ನ ಕಚೇರಿ ಸಹ ತೆರೆಯುತ್ತೇನೆ. ಆ ಕಚೇರಿಗೆ ಎಲ್ಲರಿಗೂ ಮುಕ್ತ ಅವಕಾಶ ಇದೆ ಎಂದು ಎಂ ಲಕ್ಷ್ಮಣ್ ತಿಳಿಸಿದರು