ಲೋಕಸಭಾ(Lokasaba) ಚುನಾವಣೆಗೆ ಪ್ರೀತಂ ಗೌಡ(Preetham Gowda) ಅವರನ್ನೇ ನಿಲ್ಲಿಸಬೇಕೆಂದರೆ ನಿಲ್ಲಿಸೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ(HD Kumaraswamy) ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಹಾಸನ ತಾಲ್ಲೂಕಿನ ಚನ್ನಂಗಿಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಅವರನ್ನೇ ನಿಲ್ಲಿಸಬೇಕೆಂದರೆ ನಿಲ್ಲಿಸೋಣ, ಅವರೇ ನಿಲ್ಲಬೇಕು ಎನ್ನುವ ಆಸೆ ಇದ್ದರೆ ಚರ್ಚೆ ಮಾಡೋಣ. ನಾವು, ಅವರು ಅಣ್ಣ-ತಮ್ಮಂದಿರ ತರ ಹೋಗಬೇಕಲ್ವಾ?ಪಾಪ ಯಾರ್ ಯಾರೋ ಅವನ ಮನಸ್ಸಿನ ಮೇಲೆ ಪರಿಣಾಮ ಆಗುವ ಹಾಗೇ ಹೇಳ್ತಾರೆ. ಅವರಿಗೆ ಇನ್ನೂ Young Age ಪಾಪ ಮಾತಾಡುತ್ತಾರೆ, ಮಾತಿನ ಬಿರುಸು. ಅವನು ಒಬ್ಬ ನಮ್ಮ ತಮ್ಮ ಅಲ್ವೆ. ಕುಳಿತು ಸರಿ ಮಾಡೋಣ ಅದೇನ್ ಸಮಸ್ಯೆ ಇಲ್ಲ ಎಂದು, ಹಾಸನ ಹಾಗೂ ಮಂಡ್ಯದಲ್ಲಿ ಬಿಜೆಪಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿರುವ ರಾಜ್ಯ BJP ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹೇಳಿಕೆಗೆ ಟಾಂಗ್ ನೀಡಿದರು.
#HDKumaraswamy #BJPJDS #PreethamGowda #BJP #Lokasaba