Lokasaba ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನಾನು ಈವರೆಗೂ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ HD Kumaraswamy ತಿಳಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಪರ್ಧೆ ಮಾಡಬೇಕು ಅಂತ ನಿಮಗೆ ಆಸೆ ಇದೆಯಾ? ರಾಜ್ಯ ಬಿಟ್ಟು ನನ್ನ ಏಕೆ ಕಳುಸ್ತೀರಾ, ನಾನು ರಾಜ್ಯದಲ್ಲಿ ಇರೋಣ ಅಂತಿದ್ದೇನೆ. ಆದರೆ ಎಲ್ಲಾ ಕಡೆ ಕೇಳ್ತಾರೆ, ಈ ಬಾರಿ ನಿಂತರೆ ನೀವು ಕೇಂದ್ರದಲ್ಲಿ Minister ಆಗ್ತೀರಿ ಅಂತ. ರಾಜ್ಯಕ್ಕೆ ಒಳ್ಳೆಯದಾಗುತ್ತೆ ನಿಲ್ಲಬೇಕು, ನಿಲ್ಲಬೇಕು ಅಂತಾರೆ.

ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯದಲ್ಲೂ ನೀವೇ ನಿಲ್ಲಬೇಕು ಅಂತಾರೆ. Hassan ಜಿಲ್ಲೆಯಲ್ಲೂ Devegowda ಅವರು ನಿಲ್ಲದೆ ಇದ್ದರೆ ನೀವೇ ಬಂದು ಬಿಡಿ ಅಂತಾರೆ. ಹೀಗೆ ಅಭಿಮಾನದಲ್ಲಿ ಮಾತನಾಡುತ್ತಾರೆ, ಹಾಗಂತ ಹೇಳಿ ಎಲ್ಲಾ ಕಡೆ ನಾನೇ ನಿಲ್ಲಲು ಆಗುತ್ತಾ? ಮುಂದೆ ನೋಡೋಣ ಏನೇನ್ ಮಾಡಬೇಕು ಅಂತ ಕಾಯ್ದಿರಿಸಿದ ಎಂದರು.
BJP-JDS ಮೈತ್ರಿಯಲ್ಲಿ ಭಿನ್ನಮತ ವಿಚಾರದ ಬಗ್ಗೆ ಮಾತನಾಡಿದ ಅವರು, ನನಗೆ ಮೈತ್ರಿ ಸೀಟುಗಳ ಬಗ್ಗೆ ಚಿಂತೆ ಇಲ್ಲ. ಆದರೆ Congress Government ದುರಾಡಳಿತದ ವಿರುದ್ಧ ಸದನದಲ್ಲಿ ಹೋರಾಟ ಮಾಡುತ್ತೇನೆ. ಹಾಸನದ ಮಾಜಿ ಸಚಿವರೇ ಹೇಳಿದ್ದಾರಲ್ಲಾ, ಸರ್ಕಾರದ ವೈಖರಿ ಬಗ್ಗೆ ಪ್ರತಿದಿನ ಡಂಗೂರ ಹೊಡೀತಿದ್ದಾರಲ್ಲಾ ಭ್ರಷ್ಟಾಚಾರದ ಬಗ್ಗೆ. ಈಗ ಕೆಂಪಣ್ಣ ಹೇಳಿಕೆಗೆ ಈಗ ಸಾಕ್ಷಿ ಕೇಳುತ್ತಿದ್ದಾರೆ, ಆದರೆ BJP ಬಗ್ಗೆ 40% ಕಮಿಷನ್ ಆರೋಪ ಮಾಡಿ PayCM ಮಾಡಿದ್ರಲ್ಲಾ, ಆಗ ನಿಮ್ಮ ಬಳಿ ದಾಖಲೆ ಏನಿತ್ತು?ಈಗ ಕೆಂಪಣ್ಣ ಹೇಳಿಕೆ ದಾಖಲೆ ಇದ್ದರೆ ಸಮಿತಿ ಮುಂದೆ ಕೊಡಿ ಅಂತಾರೆ, ಇವರ ಬಗ್ಗೆಯೂ ಅಂತಹದ್ದೇ ಆರೋಪ ಇದೆ ಎಂದರು.
ನಮಗೆ ಸೀಟು ಹಂಚಿಕೆಯ ಗೊಂದಲಗಳಿಲ್ಲ, ನಮಗೆ ಈ ಭ್ರಷ್ಟ ಸರ್ಕಾರ ತೆಗೆದು 28 ಸ್ಥಾನ ಗೆಲ್ಲಬೇಕು. ದೇವೇಗೌಡರ ನೇತೃತ್ವದಲ್ಲಿ ಕಳೆದ ೭೫ ವರ್ಷದಲ್ಲಿ ಆಗಿರುವ ಅನ್ಯಾಯ ಸರಿಪಡಿಸುವುದೇ ನಮ್ಮ ಪಕ್ಷದ ಗುರಿ ಎಂದ ಹೆಚ್ಡಿಕೆ ಹೇಳಿದರು.
#Kumaraswamy #HDK #formercm #LokaSaba #BJPJDS