
ಕುಮಾರಸ್ವಾಮಿ ಹೆಂಗೆ ಅಂದ್ರೆ ಬುಸ್… ಬುಸ್… ತರ, ಅವನು ಯಾವಾಗ ಕಚ್ಚುತ್ತಾನೊ ಗೊತ್ತಿಲ್ಲ ಎಂದು ಕೈಯಿಂದ ಹಾವಿನ ಹೆಡೆ ತೋರಿಸಿ ಶಾಸಕ ಜಮೀರ್ ಅಹಮದ್ ಖಾನ್ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿಯೇ ಕಿಡಿಕಾರಿದ್ದಾರೆ.
ಹುಮ್ನಾಬಾದ್ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಹೆಚ್ಡಿಕೆ ವಿರುದ್ಧ ಕಿಡಿ ಕಾರಿದ ಜಮೀರ್, ನಾನು ದಿನದ 24 ಗಂಟೆಯಲ್ಲಿ 16 ಗಂಟೆ ಅವನ ಜೊತೆ ಇದ್ದವನು, ಇವತ್ತು ಸಿ.ಎಂ ಇಬ್ರಾಹಿಂ ಮತ್ತು ಅವರ ಪುತ್ರನನ್ನ ಕುಮಾರಸ್ವಾಮಿ ಮುಗಿಸಲು ಹೊರಟಿದ್ದಾರೆ ಎಂದಿದ್ದಾರೆ.

ಸಿ.ಎಂ ಇಬ್ರಾಹಿಂಗೆ ಕುಮಾರಸ್ವಾಮಿ ಕಿವಿಯಲ್ಲಿ ಹೂ ಇಡುತ್ತಿದ್ದು, ಫಯಾಜ್ಗೆ ಹುಮ್ನಾಬಾದ್ ಜೆಡಿಎಸ್ ಟಿಕೆಟ್ ಕೊಟ್ಟು ಬಲಿ ಕಾ ಬಕ್ರಾ ಮಾಡ್ತಿದ್ದಾರೆ. ಬೇಕಿದ್ದರೆ ರಾಮನಗರ, ಹಾಸನ, ಹೊಳೆನರಸಿಪುರ, ಮಂಡ್ಯ ಬಿಟ್ಟು ಕೊಡಲು ಹೇಳಿ, ಫಯಾಜ್ ಪಾಪ ಒಳ್ಳೆಯ ಹುಡುಗ, ಇಬ್ರಾಹಿಂ ಕೂಡ ತಮ್ಮ ಮಗನನ್ನ ನಿಲ್ಲಿಸಿ ಬಲಿ ಕಾ ಬಕ್ರಾ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.