ಮಂಡ್ಯ ಜಿಲ್ಲೆಯು ಸ್ವಾತಂತ್ರ್ಯ ಪೂರ್ವದಿಂದಲೂ ಅಭಿವೃದ್ಧಿಯ ಪಥದಲ್ಲಿದೆ. ಒಂದು ಕಾಲದಲ್ಲಿ ಇದು ಒಳ್ಳೆಯ ಮಾದರಿ ಆಗಿತ್ತು. ಈ ಜಿಲ್ಲೆಯು ಸಂಪೂರ್ಣ ಭಾರತದ ಪ್ರತಿಬಿಂಬವಾಗಿದೆ. ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸ್ಫೂರ್ತಿಯಿಂದ ಬೆಂಗಳೂರಿನಂತಹ ನಗರವನ್ನು ಕಟ್ಟಿದರು. ಇದರ ವಿನ್ಯಾಸ ಮತ್ತು ಯೋಜನೆಗಳು ವೈಜ್ಞಾನಿಕವಾಗಿವೆ ಎಂದು ಅಭಿಪ್ರಾಯಪಟ್ಟರು.
ಮಂಡ್ಯ : ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗೆ ಶ್ರಮಿಸಿದ ಸಚಿವ ಮತ್ತು ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರಿಗೆ ಜಿಲ್ಲೆಯ ಶಿವಪುರ ಮತ್ತು ಹಲಗೂರಿನಲ್ಲಿ ಜನಾಭಿನಂದನೆ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಸಚಿವರು, ರೈತ ಕುಟುಂಬದಿಂದ ಬಂದ ಕೆಂಪೇಗೌಡರು ಬೆಂಗಳೂರು ನಗರವನ್ನು ಕಟ್ಟುವ ಮೂಲಕ ನಂತರದ ತಲೆಮಾರುಗಳ ಜನರ ಬದುಕನ್ನು ಉಜ್ವಲಗೊಳಿಸಿದರು ಎಂದು ಬಣ್ಣಿಸಿದರು. ಕೆಂಪೇಗೌಡರ ಅಭಿವೃದ್ಧಿ ಆಧಾರಿತ ದೃಷ್ಟಿಕೋನಕ್ಕೆ ತಕ್ಕಂತೆ ‘ಪ್ರಗತಿ ಪ್ರತಿಮೆ’ ಎಂದು ನಾಮಕರಣ ಮಾಡಲಾಗಿದೆ. ಈ ಮೂಲಕ ಅಂತಹ ಪುಣ್ಯಪುರುಷರಿಗೆ ನಮ್ಮ ಸರ್ಕಾರವು ಸೂಕ್ತ ಗೌರವ ಸಲ್ಲಿಸಿದೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯು ಸ್ವಾತಂತ್ರ್ಯ ಪೂರ್ವದಿಂದಲೂ ಅಭಿವೃದ್ಧಿಯ ಪಥದಲ್ಲಿದೆ. ಒಂದು ಕಾಲದಲ್ಲಿ ಇದು ಒಳ್ಳೆಯ ಮಾದರಿ ಆಗಿತ್ತು. ಈ ಜಿಲ್ಲೆಯು ಸಂಪೂರ್ಣ ಭಾರತದ ಪ್ರತಿಬಿಂಬವಾಗಿದೆ. ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸ್ಫೂರ್ತಿಯಿಂದ ಬೆಂಗಳೂರಿನಂತಹ ನಗರವನ್ನು ಕಟ್ಟಿದರು. ಇದರ ವಿನ್ಯಾಸ ಮತ್ತು ಯೋಜನೆಗಳು ವೈಜ್ಞಾನಿಕವಾಗಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, “ಸಕ್ಕರೆ ನಾಡು ಮಂಡ್ಯದ ಮದ್ದೂರಿನಲ್ಲಿ ಹಮ್ಮಿಕೊಳ್ಳಲಾದ ಜನಾಭಿನಂದನೆ ಕಾರ್ಯಕ್ರಮದಲ್ಲಿ ಅಭೂತಪೂರ್ವವಾಗಿ ಬರಮಾಡಿಕೊಂಡ ಜನತೆಯ ಪ್ರೀತಿ ಹಾಗೂ ಭಾವನಾತ್ಮಕ ಸ್ಪಂದನೆಯನ್ನು ನೋಡಿ ಹೃದಯ ತುಂಬಿ ಬಂದಿದೆ. ಸುಮಾರು 500 ವರ್ಷಗಳ ಹಿಂದೆಯೇ ಬೆಂಗಳೂರು ನಗರವನ್ನು ಕಟ್ಟಿದ ಕೆಂಪೇಗೌಡರ ದೂರದೃಷ್ಟಿ ಯೋಜನೆಗಳು ಇಂದಿಗೂ ಪ್ರಸ್ತುತವಾಗಿದೆ” ಎಂದು ಬರೆದುಕೊಂಡಿದ್ದಾರೆ.
ಮದ್ದೂರಿನ ಶಿವಪುರ ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಮುಖಂಡರಾದ ಎಸ್ ಪಿ ಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ ಪಿ ಉಮೇಶ್, ಡಾ.ಇಂದಿರೇಶ್, ಅಶೋಕ್ ಜಯರಾಂ, ಕೃಷ್ಣೇಗೌಡ, ರಾಜು, ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು.