ಜಯನಗರ ಜಿಲ್ಲೆ ಕೂಡ್ಲಿಗಿ:ಜುಲೈ10_ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ, ಸರ್ಕಾರಿ ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ. ಹೊರ ಗುತ್ತಿಗೆ ಆಧಾರದಂತೆ ಕೆಲಸ ಮಾಡುತ್ತಿರುವ ನೌಕರರು, ತಮ್ಮ ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ. ಕ್ಷೇತ್ರದ ಶಾಸಕರ ಮೂಲಕ, ಸರ್ಕಾರಕ್ಕೆ ಪತ್ರ ನೀಡಿದ್ದಾರೆ. ಅವರು ಸಂಘಟನೆಯ ರಾಜ್ಯ ಮುಖಂಡರಾದ ಜಂಬಪ್ಪ ನಾಯಕರವರ ನೇತೃತ್ವದಲ್ಲಿ,
ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರನ್ನು ಭೇಟಿಯಾಗಿದ್ದಾರೆ. ಶಾಸಕರಲ್ಲಿ ತಮ್ಮ ಅಹವಾಲುಗಳನ್ನು ಹೇಳಿಕೊಂಡು ಹಕ್ಕೊತ್ತಾಯ ಪತ್ರವನ್ನು ಓದಿ, ಸದರಿ ಅಹವಾಲುಗಳನ್ನು ಸರ್ಕಾರದ ಜೊತೆ ಚರ್ಚಿಸಬೇಕೆಂದು ಹಕ್ಕೊತ್ತಾಯ ಮಾಡಿ ಪತ್ರ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಪ್ರದೀಪ, ಶ್ರೀಧರ.ಜಿ, ತಿಮ್ಮಣ್ಣ, ದುರುಗೇಶ ,ಪ್ರಕಾಶ, ಪದ್ಮಕ್ಕ, ಸಂತೋಷ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು