ವಿಜಯನಗರ ಜಿಲ್ಲೆ ಕೂಡ್ಲಿಗಿ: ಜುಲೈ9_ ಪಟ್ಟಣ ಪಂಚಾಯ್ತಿ ವತಿಯಿಂದ, ಆರೋಗ್ಯ ಇಲಾಖೆ ನಿರ್ಧೇಶನದಂತೆ. ಪಟ್ಟಣದ ವ್ಯಾಪ್ತಿಯ ಎಲ್ಲಾ ಇಲಾಖೆಗಳ ಹಾಸ್ಟೆಲ್ ಗಳ ಆವರಣದಲ್ಲಿ, ಸೊಳ್ಳೆ (Mosquito) ನಿವಾರಣೆಗೆ ಫಾಗಿಂಗ್ ಮಾಡಲಾಯಿತು. ಪಟ್ಟಣದ ಡಾ”ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ(Dr. B.R Ambedkar), ಆವರಣದಲ್ಲಿ ಪಟ್ಟಣ ಪಂಚಾಯ್ತಿ ಸಿಬ್ಬಂದಿಯವರು ಫಾಗಿಂಗ್ ವಾಹನ ಸಮೇತ ಆಗಮಿಸಿ ಫಾಗಿಂಗ್ ಮಾಡಿದರು. ಡ್ಯೆಂಗ್ಯೂ(Dengue) ಚಿಕನ್ ಗುನ್ಯಾ(Chicken Gunya) ಟೈಪಾಯಿಡ್(Typhoid) ಸೇರಿದಂತೆ, ವಿವಿದ ರೋಗಗಳು ಹರಡಲು ಕಾರಣ ವಾದ ಸೊಳ್ಳೆ ನಿವಾರಣೆಗೆ ಮುಂಜಾಗ್ರತಾ ಕ್ರಮವಾಗಿ. ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯ್ತಿ ನೈರ್ಮಲ್ಯ ಇಲಾಖೆ ಸಹಯೋಗದಲ್ಲಿ, ಪಟ್ಟಣದ ಎಲ್ಲಾ ಇಲಾಖೆಗಳ ಹಾಸ್ಟೆಲ್ ಗಳ ಆವರಣದಲ್ಲಿ ಫಾಗಿಂಗ್ ಮಾಡಲು ಆರೋಗ್ಯ ಇಲಾಖೆ ನಿರ್ಧೇಶಿಸಿರುವ ಹಿನ್ನಲೆಯಲ್ಲಿ ಫಾಗಿಂಗ್ ಕಾರ್ಯ ಜರುಗಿತು. ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಸ್ಟೆಲ್ ಗಳಿಗೆ ತರಳಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು. ವಿದ್ಯಾರ್ಥಿಗಳಿಗೆ ಕಣ್ಣು ಕಿವಿ ಮೂಗು ಸೇರಿದಂತೆ, ವಿವಿದ ರೀತಿಯ ಆರೋಗ್ಯ ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವಸತಿ ಶಾಲೆಯ ಪ್ರಾಂಶುಪಾಲರಾದ ಶೋಭ(Principle Shobha), ವಸತಿ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಮತ್ತು ಪಟ್ಟಣ ಪಂಚಾಯ್ತಿ ಸಿಬ್ಬಂದಿ. ಆರೋಗ್ಯ ಇಲಾಖೆಯ ತಪಾಸಣಾ ಸಿಬ್ಬಂದಿ, ವಸತಿ ಶಾಲೆಯ ಆರೋಗ್ಯ ಕಾರ್ಯಕರ್ತೆ ಇದ್ದರು. ವಸತಿ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಆರೋಗ್ಯ ತಪಾಸಣೆಯಲ್ಲಿ ಭಾಗಿಯಾಗಿದ್ದರು
ಅಧಿವೇಶನದ ಬಳಿಕ ಪೌರಕಾರ್ಮಿಕರ ಸಮಸ್ಯೆಗೆ ಪರಿಹಾರ: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
"ಪೌರಕಾರ್ಮಿಕರ ಬಗ್ಗೆ ನಮಗೆ ಸಹಾನುಭೂತಿ ಇದೆ. ವಿಧಾನಮಂಡಲ ಅಧಿವೇಶನದ ಬಳಿಕ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. ಐಪಿಡಿ ಸಾಲಪ್ಪ...
Read moreDetails