ಬೆಂಗಳೂರು: ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನ ನನಗೆ ನೀಡಿದರೆ, ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಚಿವ ಕೆಎನ್ ರಾಜಣ್ಣ (KN Rajanna) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷನಾಗಲು ಸಿದ್ಧನಿದ್ದೇನೆ. ಅಧ್ಯಕ್ಷ ಸ್ಥಾನ ನೀಡದರೆ, ನಾನು ಸಚಿವ ಸ್ಥಾನ ತ್ಯಜಿಸುತ್ತೇನೆ. ಅಲ್ಲದೇ, ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಪ್ರಜ್ವಲ್ ಕೃತ್ಯ ಮಹಾಪರಾಧ. ವಿಡಿಯೋ ಬಿಡುಗಡೆಯಾಗಿದ್ದು ಅಪರಾಧವೇ. ರಮೇಶ್ ಜಾರಕಿಹೊಳಿಗೂ ಇದೇ ಟ್ರ್ಯಾಪ್ ಆಗಿತ್ತು. ಆದರೆ, ಕ್ರಮ ಆಗಲಿಲ್ಲ. ರೇವಣ್ಣ ಮತ್ತು ನಮ್ಮ ಕುಟುಂಬ ಬೇರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಯಾವ ಕುಟುಂಬಕ್ಕೆ ಅಗೌರವ ಆಗುತ್ತಿದೆ ಹೇಳಬೇಕಲ್ವಾ ಎಂದು ವಾಗ್ದಾಳಿ ನಡೆಸಿದರು.