ಪ್ರಧಾನಿ ನರೇಂದ್ರ ಮೋದಿಯನ್ನು ಹೂವಿನಹಡಗಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಹರಪ್ಪನಹಳ್ಳಿಯಲ್ಲಿ ನಡೆದಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪರ-ವಿರೋಧದ ಚರ್ಚೆ ಜೋರಾಗಿ ನಡೆಯುತ್ತಿದೆ.
ಆಪ್ತರೊಬ್ಬರ ತೋಟದ ಮನೆಯಲ್ಲಿ ಬೆಂಬಲಿಗರ ಸಭೆಯಲ್ಲಿ ಮಾತನಾಡುವ ವೇಳೆ ಪೆಟ್ರೋಲ್ ಡೀಸೆಲ್ ದರ ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬಾಯಿಗೆ ಬಂದಂತೆ ಬೈದಿದ್ದಾರೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಇನ್ನು ಮಾತನಾಡುವ ವೇಳೆ ಮಾಜಿ ಸಚಿವ ದಿ.ಎಂ.ಪಿ.ಪ್ರಕಾಶ್ ಪುತ್ರಿಯರ ಬಗ್ಗೆ ಮಾತನಾಡಿರುವ ಪರಮೇಶ್ವರ್ ಅವರಿಗೆ ಮತ ನೀಡಿದರೆ ನಿಮ್ಮ ಕೈಗೆ ಸಿಗುತ್ತಾರೇನು. ಅವರಿಗೆ ಟಿಕೆಟ್ ಕೊಟ್ರೆ ನಿಮ್ಮ ಪರಿಸ್ಥಿತಿ ಇಲ್ಲಿ ಕಷ್ಟವಾಗುತ್ತದೆ. ಜನರು ಹೇಗೆ ಇದ್ದಾರೆ ಎಂದರೆ ಚುನಾವಣೆ ಸಮಯದಲ್ಲಿ ಯಾರು 500 ರೂಪಾಯಿ ಕೊಡುತ್ತಾರೋ ಅವರಿಗೆ ಮತ ಹಾಕುತ್ತಾರೆ ಎಂದು ಮತದಾರರನ್ನು ಜರಿದಿದ್ದಾರೆ.