ಉಡುಪಿ ಜಿಲ್ಲೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಊರಾದ ಕೋಟ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ಇಬ್ಬರು ದಲಿತ ಮಹಿಳೆಯರ ಮೇಲೆ ಕಳ್ಳತನ ಪ್ರಕರಣಗಳನ್ನು ದಾಖಲಿಸಿ ಎರಡು ದಿನ ಠಾಣೆಗೆ ಬಂಧಿಸಿ ಜಾತಿ ನಿಂದನೆ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾದೆ ಎಂದು ಆರೋಪ ಕೇಳಿಬಂದಿದೆ. ಇಬ್ಬರು ಮಹಿಳೆಯರನ್ನು ನಗರದ ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಮಾಹಿತಿ ಪ್ರಕಾರ, ಬ್ರಹ್ಮಾವರದ ಸಾಲಿಗ್ರಾಮದ ನಿವಾಸಿಗಳಾದ ಆಶಾ ಜಿ ಮತ್ತು ಸುಜಾತ ಅವರು ಅಕ್ಟೋಬರ್ 2 ರಂದು ನೂಜಿ ಗ್ರಾಮದ ಕಿರಣ್ ಕುಮಾರ್ ಶೆಟ್ಟಿ ಅವರ ಮನೆಗೆ ಕೆಲಸಕ್ಕೆ ಹೋಗಿದ್ದರು, ಮಧ್ಯಾಹ್ನ 1.30 ಕ್ಕೆ ಕಿರಣ್ ಅವರ ಮನೆಯಿಂದ ಹೊರಟು ತಮ್ಮ ಮನೆಗೆ ಹೋಗಿದ್ದಾರೆ.
ಅಕ್ಟೋಬರ್ 2 ರಂದು ಸಂಜೆ 6.30 ಕ್ಕೆ ಕೋಟ ಪೊಲೀಸ್ ಠಾಣೆಯ ಎಸ್‌ಐ ಸುಧಾರ್ ಪ್ರಭು ಅವರು ಆಶಾ ಜಿ ಅವರಿಗೆ ಕರೆ ಮಾಡಿ ಕಿರಣ್ ಕುಮಾರ್ ಶೆಟ್ಟಿ ಅವರು ತಮ್ಮ ಮನೆಯಲ್ಲಿ ಚಿನ್ನದ ಬಳೆ ಕಳೆದುಹೋಗಿರುವ ಬಗ್ಗೆ ದೂರು ನೀಡಿದ್ದಾರೆ ತಕ್ಷಣನೀವು ಠಾಣೆಗೆ ವರದಿ ಬರಬೇಕು ಎಂದು ತಿಳಿಸಿದ್ದಾರೆ. ಅದರಂತೆ, ಆಶಾ ಮತ್ತು ಸುಜಾತ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅಲ್ಲಿ ಅವರಿಗೆ ಜಾತಿಯ ಆಧಾರದ ಮೇಲೆ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇದಲ್ಲದೇ ಆಶಾ ಅವರ ಹಣೆಗೆ ಪಿಸ್ತೂಲ್ ತೋರಿಸಿ ಎನ್‌ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ. ಆಶಾಗೆ ಕುಡಿಯುವ ನೀರು ಸಹ ನೀಡಲಿಲ್ಲ ಮತ್ತು ವಾಶ್‌ರೂಮ್‌ಗಳನ್ನು ಬಳಸಲು ಅವಕಾಶ ನೀಡದೆ ಪೊಲೀಸರು ವಿಕೃತವಾಗಿ ನಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆಶಾ ಅವರನ್ನು ಅಕ್ಟೋಬರ್ 3 ರಂದು ಕೂಡ ಠಾಣೆಗೆ ಬರುವಂತೆ ತಿಳಿಸಲಾಗಿತ್ತು. ಆಶಾ ಸುಮಾರ 10.30 ಕ್ಕೆ ಠಾಣೆಗೆ ಹೋದಾಗ. ಎಸ್‌ಐ ಸುಧಾ ಪ್ರಭು ಮತ್ತು ಸಿಬ್ಬಂದಿ ರೇವತಿ ಹಾಗೂ ಮತ್ತೊಬ್ಬ ವ್ಯಕ್ತಿ ಕಿರಣ್‌ಕುಮಾರ್ ಶೆಟ್ಟಿ ಜೊತೆ ಸೇರಿ ಆಶಾ ಮೇಲೆ ಹಾಗೂ ಸುಜಾತಾ ಮೇಲೆ ಜಾತಿ ನಿಂದನೆ ಮಾಡಿದ್ದಾರೆ. ಸುಜಾತಾಳನ್ನು ಕಿರಣ್ ಕುಮಾರ್ ಶೆಟ್ಟಿ ಬಲವಂತವಾಗಿ ಮನೆಗೆ ಕರೆದೊಯ್ದು ಆಕೆಯ ಕಪಾಲಕ್ಕೆ ಹೊಡೆದು ಹಲ್ಲೆ ಮಾಡಿದ್ದಾನೆ. ಅಲ್ಲದೆ ಆಶಾಳನ್ನು ನೆಲದ ಮೇಲೆ ತಳ್ಳಿ ಆಕೆಯನ್ನು ಕಾಲಿನಲ್ಲಿ ಹೊಡೆದು ಹೊಟ್ಟೆಗೆ ಒದ್ದಿದ್ದಾನೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 3ರಂದು ರಾತ್ರಿ 7.45ರ ಸುಮಾರಿಗೆ ಆಶಾಳನ್ನು ಠಾಣೆಯಿಂದ ಹೊರಗೆ ಕಳುಹಿಸುವ ಮುನ್ನ ಪೊಲೀಸರು ವಿಡಿಯೋ ಮಾಡಿ ಪೊಲೀಸ್ ಠಾಣೆಯಲ್ಲಿ ಆಕೆಗೆ ಕಿರುಕುಳ ನೀಡಿಲ್ಲ ಎಂದು ಬಲವಂತವಾಗಿ ಹೇಳುವಂತೆ ಹೇಳಿದ್ದಾರೆ. ಅಲ್ಲದೆ ಆಶಾಗೆ ಸುಳ್ಳು ಕೇಸ್ ಹಾಕುವುದಾಗಿ ಬೆದರಿಸಿದ್ದಾರೆ.
ಈ ಸಂಬಂಧ ಸಂತ್ರಸ್ತೆ ಆಶಾ ಉಡುಪಿ ಎಸ್ಪಿಗೆ ದೂರು ನೀಡಿದ್ದಾರೆ.