ISIS ಜೊತೆ ಸಂಪರ್ಕ ಹೊಂದಿದ್ದ ಇಬ್ಬರನ್ನು ಪಶ್ಚಿಮ ಬಂಗಾಳದ ಹೌರಾದ ಟಿಕಿಯಾಪಾರಾ ಪ್ರದೇಶದಲ್ಲಿ ಕೋಲ್ಕತ್ತಾ ವಿಶೇಷ ಕಾರ್ಯಪಡೆ ಶನಿವಾರ ಬಂಧಿಸಿದೆ.
ಕೇಂದ್ರಿಯಾ ತನಿಖಾ ಸಂಸ್ಥೆ ನೀಡಿದ ಖಚಿತ ಮಾಹಿತಿ ಮೇರೆಗೆ ಟಿಕಿಯಾಪಾರಾ ಪ್ರದೇಶದಲ್ಲಿರುವ ಹಫ್ತಾಬುದ್ದೀನ್ ಮುನ್ಶಿ ಲೇನ್‌ನಲ್ಲಿರುವ ಶಂಕಿತರ ಮನೆ ಮೇಲೆ ದಾಳಿ ಮಾಡಿದಾಗ ವಿಚಾರ ಬೆಳಕಿಗೆ ಬಂದಿದೆ.
ಬಂಧಿತ ಇಬ್ಬರು ಎಂ.ಟೆಕ್ ಪದವಿದರೆಯಾಗಿದ್ದು ಪಾಕಿಸ್ತಾನ ಹಾಗು ಪಶ್ಚಿಮ ಏಷ್ಯಾದಲ್ಲಿನ ಐಸಿಸ್ ನಿಕಟವರ್ತಿಗಳ ಜೊತೆ ಸಂಬಂಧ ಹೊಂದಿದ್ದರು. ಈ ಇಬ್ಬರು ಹೌರಾದಲ್ಲಿ ವಿದ್ವಂಸಕ ಕೃತ್ಯಗಳನೆಸಗಲು ಸಜ್ಜಾಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.