ಇದೇ ಆಗಸ್ಟ್ ನಲ್ಲಿ ಆಷ್ಟ್ರೇಲಿಯಾದ ಮೆಲ್ಬೋರ್ನ್ ಇಂಡಿಯನ್ ಚಿತ್ರೋತ್ಸವದಲ್ಲಿ ಏಪ್ರಾನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಿಸಿರುವ, ಖ್ಯಾತ ಕತೆಗಾರ ಕಾ.ತಾ ಚಿಕ್ಕಣ್ಣನವರ ಕತೆಯಾಧಾರಿತ ಚಂಪಾ ಪಿ ಶೆಟ್ಟಿಯವರ ನಿರ್ದೇಶನದ ಕನ್ನಡದ “ಕೋಳಿ ಎಸ್ರು” ಸಿನೆಮಾ ಆಯ್ಕೆಗೊಂಡಿದೆ.,
ಇದೇ ಚಿತ್ರದ ನಟಿ ಅಕ್ಷತಾ ಪಾಂಡವಪುರ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮಿನೆಟ್ ಆಗಿದ್ದಾರೆ .. ಐಶ್ವರ್ಯ ರೈ, ಆಲಿಯಾ ಭಟ್, ಕಾಜೊಲ್, ಸಾಯಿಪಲ್ಲವಿ, ನೀನಾಗುಪ್ತ, ರಾಣಿಮುಖರ್ಜಿ ಮುಂತಾದ ಬಾಲಿವುಡ್ ನ ಖ್ಯಾತ ನಟಿಯರ ಜೊತೆ ಅಕ್ಷತಾ ನಾಮಿನೇಟ್ ಆಗಿರುವುದು ಕನ್ನಡದ ಹೆಮ್ಮೆ.

ಜೊತೆಗೆ ಇತ್ತೀಚೆಗೆ ನಡೆದ ಕೆನಡಾದ ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಕೂಡ ಕೋಳಿ ಎಸ್ರು ಸಿನೆಮಾ ಪ್ರದರ್ಶನಗೊಂಡು, ಚಿತ್ರದ ನಿರ್ದೇಶಕಿ ಚಂಪಾಶೆಟ್ಟಿ ಅವರಿಗೆ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಮತ್ತು “ಅಕ್ಷತಾ ಪಾಂಡವಪುರ” ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದ್ದೂ ಕೂಡಾ ಭಾರತೀಯ ಚಿತ್ರರಂಗ “ಕೋಳಿ ಎಸ್ರು” ಚಿತ್ರವನ್ನು ಗಮನಿಸುವಂತಾಗಿದೆ.
ಇದು ಕನ್ನಡಿಗರಿಗೆ ಹಾಗೂ ಕನ್ನಡ ಚಿತ್ರರಂಗಕ್ಕೇ ಹೆಮ್ಮೆಯ ವಿಷಯ. ಈಗಾಗಲೇ ಹಲವಾರು ಹೊರದೇಶಗಳ ಹಾಗೂ ಭಾರತೀಯ ಚಿತ್ರೋತ್ಸವ ಗಳಲ್ಲಿ ಆಯ್ಕೆಗೊಂಡು ಅನೇಕ ಪ್ರಶಸ್ತಿಗಳನ್ನು ಪಡೆದಿದೆ.