ಕೋಲಾರ : ಮಹಿಳಾ ಮತದಾರರಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಸೀರೆ ಗಿಫ್ಟ್ ನೀಡಿದ್ದಾರೆ.
ನಗರದ ಕೋಗಿಲಹಳ್ಳಿ ಬಳಿಯ ಇರುವ ತಮ್ಮ ನಿವಾಸದ ಬಳಿ ಬಿಜೆಪಿ ಪಕ್ಷದ ಚಿಹ್ನೆ ಬಳಸದೆ ವಿ.ಆರ್.ಪಿ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಲಿ. ಹೆಸರಿನಲ್ಲಿ ಸೀರೆ ಹಂಚಿಕೆ ಮಾಡಿದ್ದಾರೆ.
ವರ್ತೂರು ಪ್ರಕಾಶ್ ನೂತನವಾಗಿ ಸೊಸೈಟಿ ನಿರ್ಮಾಣ ಮಾಡಿಕೊಂಡಿದ್ದಾರೆ. ಸೀರೆ ಪಡೆದುಕೊಳ್ಳಲು 500 ಕ್ಕೂ ಹೆಚ್ಚು ಮಹಿಳೆಯರು ಜಮಾವಣೆಗೊಂಡಿದ್ದು, ಸೀರೆ ಪಡೆಯಲು ಮುಗಿಬಿದ್ದಿದ್ದಾರೆ.
ಕಾರ್ಯಕ್ರಮಕ್ಕೆ ಬಂದವರಿಗೆ ಭರ್ಜರಿ ಚಿಕನ್ ಬಿರಿಯಾನಿ ಸಹ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭ ವರ್ತೂರು ಪ್ರಕಾಶ್ ಮಾತನಾಡಿ, ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಕೇವಲ ಒಂದೂ ಪಕ್ಷಕ್ಕೆ ಸೀಮಿತವಾಗಿದೆ. ಹಾಗಾಗಿ ನಾವು ಸೊಸೈಟಿ ಮಾಡಿ ಜಿಲ್ಲೆಯಲ್ಲಿ ಸೀರೆ ಹಂಚುತ್ತಿದ್ದೇವೆ. ಇದು ರಾಜಕೀಯ ಗಿಮಿಕ್ ಅಲ್ಲ, ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ರು ನಾನು 50 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತೇನೆ. ಕಾಂಗ್ರೆಸ್ ಗೆ ವೋಟು ಹಾಕಿಸುವವರು ಯಾರು ಇಲ್ಲ ಎಂದು ಹೇಳಿದ್ದಾರೆ.