ಹೆಚ್.ಡಿ. ಕುಮಾರಸ್ವಾಮಿ ಮೈತ್ರಿ ಕುರಿತಾದ ಆಡಿದ ಮಾತುಗಳು ಬಿಜೆಪಿ ಸ್ಪಷ್ಟ ಸಂದೇಶ ರವಾನಿಸೋ ಧಾಟಿಯಲ್ಲಿದೆ. ಒಂದು ವೇಳೆ ಕೋಲಾರ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡದಿದ್ರೆ ಬಿಜೆಪಿ ಪರಿಣಾಮ ಎದುರಿಸಬೇಕಾಗುತ್ತೆ ಅನ್ನೋ ಹಾಗಿದೆ ಹೆಚ್.ಡಿ.ಕೆ ಮಾತಿನ ಮರ್ಮ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು , ಈಗಾಗಲೇ ಚುನಾವಣೆಯ ದಿನಾಂಕವೂ ಘೋಷಣೆಯಾಗಿದೆ. ಆದ್ರೆ ಬಿಜೆಪಿ ಮತ್ತು ಜೆಡಿಎಸ್ ನುಡುವೆ ಇನ್ನೂ ಸೀಟು ಹಂಚಿಕೆ ಫೈನಲ್ ಆಗದೆ ಇರೋದು , ಮೂರನೇ ಕ್ಷೇತ್ರ ಬಿಟ್ಟುಕೊಡಲು ಬಿಜೆಪಿ ಮೀನಮೇಷ ಎಣಿಸುತ್ತಿರೋದು ಜೆಡಿಎಸ್ ಆಕ್ರೋಶಕ್ಕೆ ಕಾರಣವಾಗಿದೆ.

ಜೆಡಿಎಸ್ ಒಟ್ಟಾಗಿ ಕೇಳಿರೋದೆ ೩ ಕ್ಷೇತ್ರಗಳು. ಹಾಸನ ಮಂಡ್ಯ ಮತ್ತು ಕೋಲಾರ . ಈ ಪೈಕಿ ಈಗಾಗಲೇ ಮಂಡ್ಯ ಹಾಸನ ಜೆಡಿಎಸ್ ಗೆ ಎಂಬ ಖಾತ್ರಿ ಸಿಕ್ಕಿದ್ದು, ಕೋಲಾರದ ಕಥೆ ಡೋಲಾಯಮಾನವಾಗಿದೆ. ಒಂದುವೇಳೆ ಕೋಲಾರ ಬಿಟ್ಟುಕೊಡದಿದ್ರೆ ಮೈತ್ರಿಯೇ ಬೇಡ ಎಂಬ ನಿರ್ಧಾರಕ್ಕೆ ಬಂದಹಾಗೇ ಕಾಣ್ತಿದೆ. ಕೇವಲ ೨ ಕ್ಷೇತ್ರಕ್ಕೆ ನಾವು ಮೈತ್ರಿ ಮಾಡಿಕೊಳ್ಳೋ ಅವಶ್ಯಕತೆ ಇರಲಿಲ್ಲ. ಹಾಗಂತ ನಾವು ಹೆಚ್ಚಿಗೆ ಕ್ಷೇತ್ರವನ್ನೂ ಡಿಮ್ಯಾಂಡ್ ಮಾಡಿಲ್ಲಾ. ಹಾಗಿದ್ದರೂ ಬಿಜೆಪಿ ನಿರ್ಧಾರ ಪ್ರಕಟಿಸದಿರೋದು ಸರಿಯಲ್ಲ ಎಂದಿದ್ದಾರೆ.

ಇಷ್ಟೇ ಅಲ್ಲ , ಒಂದು ವೇಳೆ ಬಿಜೆಪಿ ಕೋಲಾರ ಬಿಟ್ಟುಕೊಡದಿದ್ದರೆ ಮೈತ್ರಿಯಿಂದ ಹೊರಬಂದು ಜೆಡಿಎಸ್ ರಾಜ್ಯದಲ್ಲಿ ಬಿಜೆಪಿ ವಿರುದ್ಧ ಸ್ಪರ್ಧೆ ಮಾಡಿ , ಬಿಜೆಪಿಗೆ ಸರಿಯಾದ ಪೆಟ್ಟು ನೀಡಬೇಕು ಎಂಬ ಲೆಕ್ಕಾಚಾರದಲ್ಲಿದೆ. ಒಂದುವೇಳೆ ಮೈತ್ರಿ ಮುರಿದುಬಿದ್ರೆ ಬಿಜೆಪಿಗೆ ಹೊಡೆತ ಬೀಳೋದು ಖಂಡಿತ.ಸೋ ಈಗ ಚೆಂಡು ಬಿಜೆಪಿ ಅಗಲದಲ್ಲಿದ್ದು , ಹೈಕಮಾಂಡ್ ಯಾವ ನಿರ್ಧಾರ ಘೋಷಿಸುತ್ತೋ ಕಾದುನೋಡಬೇಕಿದೆ.