ದಿಲ್ಲಿ (Delhi): ಮಹಿಳೆಯರ ಪ್ರೀಮಿಯರ್ ಲೀಗ್ 2024 ನಲ್ಲಿ RCB ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಆರ್ ಸಿಬಿ ವನಿತೆಯರ ತಂಡ ಗೆಲುವು ಸಾಧಿಸುತ್ತಿದ್ದಂತೆ ಆರ್ ಸಿಬಿ ಪುರುಷರ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ವಿಡಿಯೋ ಕರೆ ಮಾಡಿ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

ನಾಯಕಿ ಸ್ಮೃತಿ ಮಂದಾನ (Smriti Mandhana) ಅವರೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿ, ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ 16 ವರ್ಷಗಳಿಂದ ಐಪಿಎಲ್ ನಲ್ಲಿ RCB ಪುರುಷರ ತಂಡ ಸಾಧಿಸಲಾಗದ್ದನ್ನು ವನಿತೆಯರು ಸಾಧಿಸಿ ತೋರಿಸಿದ್ದಾರೆ. ಇನ್ನು ಆರ್‌ಸಿಬಿ ಚಾಂಪಿಯನ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಆರ್ ಸಿಬಿ ಮಹಿಳಾ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

RCB ಕಳೆದ ಋತುವಿನಲ್ಲಿ ಪ್ಲೇ ಆಫ್ ತಲುಪಲು ಸಾಧ್ಯವಾಗಲಿಲ್ಲ, ಆದರೆ ಈ ಬಾರಿ ತಂಡವು ಒಗ್ಗಟ್ಟಿನಿಂದ ಪ್ರದರ್ಶನ ನೀಡಿತು. ಸ್ಮೃತಿ ಮಂಧಾನ ನಾಯಕತ್ವದಲ್ಲಿ ಲೀಗ್ ಹಂತದ ಸವಾಲುಗಳನ್ನು ಮೆಟ್ಟಿ ನಿಂತ ತಂಡ, ಬಳಿಕ ಎಲಿಮಿನೇಟರ್‌ನಲ್ಲಿ ಗೆಲುವು ದಾಖಲಿಸಿ, ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿ ಚೊಚ್ಚಲ ಬಾರಿಗೆ ಟ್ರೋಫಿ ಗೆದ್ದುಕೊಂಡಿತು. ಎಲ್ಲಿಸ್ ಪೆರ್ರಿ ವಿಶೇಷವಾಗಿ WPL 2024 ಋತುವಿನಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿದರು. ಅವರು ಇಡೀ ಪಂದ್ಯಾವಳಿಯಲ್ಲಿ 347 ರನ್ ಗಳಿಸಿದರು, ಇದು WPL ಸೀಸನ್ 2 ರಲ್ಲಿ ಅತ್ಯಧಿಕವಾಗಿತ್ತು.
#wpl #wpl2024 #cricket #rcb #rcbwomensteam #virakkohli # SmritiMandhana