ಆರಂಭಿಕ ಜೋಡಿಯಾದ ಕ್ವಿಂಟನ್ ಡಿ ಕಾಕ್ ಮತ್ತು ನಾಯಕ ಕೆಎಲ್ ರಾಹುಲ್ ಪೂರ್ಣ 20 ಓವರ್ ಆಡುವ ಮೂಲಕ ಐಪಿಎಲ್ ಇತಿಹಾಸದಲ್ಲೇ 2 ಸಾರ್ವಕಾಲಿಕ ಶ್ರೇಷ್ಠ ಸಾಧನೆಯ ದಾಖಲೆ ಬರೆದರು.
ಅಹಮದಾಬಾದ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಗೈಂಟ್ಸ್ ತಂಡ 20 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 210 ರನ್ ಗಳಿಸಿತು.
ಕಾಕ್ ಮತ್ತು ರಾಹುಲ್ ಜೋಡಿ ಮೊದಲ ವಿಕೆಟ್ ಗೆ 210 ರನ್ ಗಳಿಸಿರುವುದು ಐಪಿಎಲ್ ಇತಿಹಾಸದಲ್ಲೇ ಮೊದಲ ವಿಕೆಟ್ ಗೆ ಬಂದ ಅತೀ ದೊಡ್ಡ ಜೊತೆಯಾಟವಾಗಿದೆ. ಅಲ್ಲದೇ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿ ಆರಂಭಿಕ ಜೋಡಿ ಪೂರ್ಣ 20 ಓವರ್ ಗಳ ಆಡಿದ ದಾಖಲೆ ಬರೆದಿದೆ.
ಕ್ವಿಂಟನ್ ಡಿಕಾಕ್ 59 ಎಸೆತದಲ್ಲಿ 6 ಬೌಂಡರಿ ಮತ್ತು 7 ಸಿಕ್ಸರ್ ಸೇರಿದಂತೆ ಶತಕ ಪೂರೈಸಿದರು. ಅಲ್ಲದೇ 70 ಎಸೆತದಲ್ಲಿ 10 ಬೌಂಡರಿ ಮತ್ತು 10 ಸಿಕ್ಸರ್ ಸೇರಿದ 140 ರನ್ ಸಿಡಿಸಿ ಔಟಾಗದೇ ಉಳಿದರೆ, ಮತ್ತೊಂದು ತುದಿಯಲ್ಲಿದ್ದ ನಾಯಕ ಕೆಎಲ್ ರಾಹುಲ್ 51 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 68 ರನ್ ಬಾರಿಸಿ ಅಜೇಯರಾಗಿ ಉಳಿದರು.
ಕ್ವಿಂಟನ್ ಡಿ ಕಾಕ್ ಗೆ ಇದು 2ನೇ ಐಪಿಎಲ್ ಶತಕವಾಗಿದೆ. ಇದಕ್ಕೂ ಮುನ್ನ 2016ರಲ್ಲಿ ಆರ್ ಸಿಬಿ ವಿರುದ್ಧ ಶತಕ ಗಳಿಸಿದ್ದು ಅದನ್ನು ಮೀರಿಸುವಂತೆ ಇಂದು ವೃತ್ತಿಜೀವನದ ಗರಿಷ್ಠ ಮೊತ್ತ ದಾಖಲಿಸಿದರು.