• Home
  • About Us
  • ಕರ್ನಾಟಕ
Tuesday, October 28, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ನವೆಂಬರ್ 14 ರಂದು ಉತ್ತಮ ಸಂದೇಶ ಹೊತ್ತು ಬರಲಿದ್ದಾರೆ “kite ಬ್ರದರ್ಸ್” .

ಭಜರಂಗ ಸಿನೆಮಾ ಲಾಂಛನದಲ್ಲಿ ಮಂಜುನಾಥ್ ಬಿ.ಎಸ್, ರಜನಿಕಾಂತ್ ರಾವ್ ಹಾಗೂ ಮಂಜುನಾಥ್ ಬಗಾಡೆ ನಿರ್ಮಿಸಿರುವ ಹಾಗೂ ವಿರೇನ್ ಸಾಗರ್ ಬಗಾಡೆ ನಿರ್ದೇಶಿಸಿರುವ "KITE ಬ್ರದರ್ಸ್" ಚಿತ್ರ ನವೆಂಬರ್ 14ರಂದು ಬಿಡುಗಡೆಯಾಗಲಿದೆ. ಈ ಕುರಿತು ಮಾಹಿತಿ ನೀಡಲು ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಪ್ರತಿಧ್ವನಿ by ಪ್ರತಿಧ್ವನಿ
October 28, 2025
in Top Story, ಅಂಕಣ, ಇದೀಗ, ಕರ್ನಾಟಕ, ವಿಶೇಷ, ಸಿನಿಮಾ
0
Share on WhatsAppShare on FacebookShare on Telegram

ADVERTISEMENT

“kite ಬ್ರದರ್ಸ್” ಮಕ್ಕಳ ಚಿತ್ರವಾದರೂ, ಎಲ್ಲಾ ವಯಸ್ಸಿನವರೂ ನೋಡಬೇಕಾದ ಉತ್ತಮ ಸಂದೇಶವಿರುವ ಚಿತ್ರ ಎಂದು ಮಾತನಾಡಿದ ನಿರ್ದೇಶಕ ವಿರೇನ್ ಸಾಗರ್ ಬಗಾಡೆ, ಹಳೆಯ ಸರ್ಕಾರಿ ಶಾಲೆಗಳನ್ನು ಸರ್ಕಾರವೇ ದುರಸ್ತಿ ಮಾಡಿಸಲಿ ಎಂದು ಸಮಾಜ ಕಾಯಬಾರದು. ಆ ಶಾಲೆಯಲ್ಲಿ ಕಲಿತವರು ಸಶಕ್ತರಾಗಿ ಬದುಕು ರೂಪಿಸಿಕೊಂಡಾಗ ಆ ಶಾಲೆಯ ನಿಸ್ಸಹಾಯಕ ಉಪಾಧ್ಯಯರ ಬೆಂಬಲಕ್ಕೆ ನಿಂತು ಆ ಶಾಲೆಯನ್ನು ಸರಿಪಡಿಸಿ ಮುಂದಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು.

ಈ ರೀತಿ ಮನಸ್ಸಿನ ಜನರು ನಮ್ಮ ಸುತ್ತ ಸಾಕಷ್ಟು ಜನರು ಇದ್ದಾರೆ. ಇದೇ ವಿಷಯವನ್ನು ಪ್ರಮುಖವಾಗಿಟ್ಟುಕೊಂಡು ಚಿತ್ರದ ಕಥೆ ಹೆಣೆಯಲಾಗಿದೆ. ಇನ್ನು ಶೀರ್ಷಿಕೆಯ ಬಗ್ಗೆ ಹೇಳಬೇಕಾದರೆ, ರೈಟ್ ಬ್ರದರ್ಸ್ ಅವರು ಫ್ಲೈಟ್ ಇಂಜಿನಿಯರಿಂಗ್ ನಲ್ಲಿ ಆವಿಷ್ಕಾರ ಮಾಡಿದರೆ ಇಲ್ಲಿ ಇಬ್ಬರು ವಿದ್ಯಾರ್ಥಿಗಳು ದೂರದ ಅಹಮದಾಬಾದ್ ನಲ್ಲಿ ನಡೆಯುವ ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸಿ ಕೈಟ್ ನಲ್ಲಿ ಮಾಡುವ ಎಂಜಿನಿಯರಿಂಗ್ ನಿಂದಾಗಿ ಪಡೆಯುವ ಒಂದು ರೋಚಕ ಗೆಲುವಿನ ಕಾರಣ ಕೈಟ್ ಬ್ರದರ್ಸ್ ಎನಿಸಿಕೊಂಡು ಅದರಿಂದ ಬಂದ ಹಣದಿಂದ ಶಾಲೆಯ ದುರಸ್ತಿ ಮಾಡಿಸುತ್ತಾರೆ. ಹಾಗಾಗಿ ಚಿತ್ರಕ್ಕೆ “KITE ಬ್ರದರ್ಸ್” ಎಂದು ಶೀರ್ಷಿಕೆ ಇಡಲಾಗಿದೆ. .

ಚಿತ್ರದಲ್ಲಿ ಪ್ರಣಿಲ್ ನಾಡಗೀರ್, ಸಮರ್ಥ ಆಶಿ, ವಿನೋದ್ ಬಗಾಡೆ, ಅನಂತ ದೇಶಪಾಂಡೆ, ಪ್ರಭು ಹಂಚಿನಾಳ, ಶ್ರೇಯಾ ಹರಿಹರ, ರಾಜೀವ್ ಸಿಂಗ್ ಹಲವಾಯಿ ಮತ್ತು ಇತರ ಧಾರವಾಡದ ಹೊಸ ಪ್ರತಿಭೆಗಳೆ ಅಭಿನಯಿಸಿದ್ದಾರೆ. ಮೂರು ಹಾಡುಗಳಿದ್ದು, ವಿಜಯ್ ಭರಮಸಾಗರ, ಸಿಂಪಲ್ ಸುನಿ ಹಾಗೂ ನಾನು ಹಾಡುಗಳನ್ನು ಬರೆದಿದ್ದೇವೆ. ಅನೀಶ್ ಚೆರಿಯನ್ ಸಂಗೀತ ನೀಡಿದ್ದಾರೆ. ಹಿರಿಯ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಛಾಯಾಗ್ರಹಣ ‌ಮಾಡಿದ್ದಾರೆ. ಮಂಜುನಾಥ ಬಗಾಡೆ, ರಜನಿಕಾಂತ್ ರಾವ್ ದಳವಿ ಹಾಗೂ ಮಂಜುನಾಥ್ ಬಿ.ಎಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಧಾರಾವಾಡದಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ. ನವೆಂಬರ್ 14 ಮಕ್ಕಳ ದಿನಾಚರಣೆಯ ದಿನದಂದೆ ನಮ್ಮ ಚಿತ್ರ ತೆರೆ ಕಾಣುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹ, ಬೆಂಬಲವಿರಲಿ ಎಂದರು.

ನಾನು ಈವರೆಗೂ ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದೇನೆ. ಅದರಲ್ಲಿ ಮೊದಲ ನಿರ್ದೇಶಕರ ಚಿತ್ರಗಳಿಗೆ ಹೆಚ್ಚು ಕೆಲಸ ಮಾಡಿರುವುದು ವಿರೇನ್ ಸಾಗರ್ ಬಗಾಡೆ ಅವರು ಕೂಡ ಉತ್ತಮ ನಿರ್ದೇಶಕರು. ಒಳ್ಳೆಯ ಕಥೆ ಮಾಡಿದ್ದಾರೆ. ಈ ಚಿತ್ರದಲ್ಲಿ ಕೆಲಸ ಮಾಡಿದ್ದು ಖುಷಿಯಾಗಿದೆ ಎಂದು ಛಾಯಾಗ್ರಾಹಕ ಅಶೋಕ್ ಕಶ್ಯಪ್ ತಿಳಿಸಿದರು. ಕಾರ್ಯಕಾರಿ ನಿರ್ಮಾಪಕರಾದ ವಿನೋದ್ ಬಗಾಡೆ ಮತ್ತು ನಿರ್ಮಾಪಕ ಬಿ.ಎಸ್ ಮಂಜುನಾಥ್ ಚಿತ್ರದ ಕುರಿತು ಮಾತನಾಡಿದರು. ಹಾಡುಗಳ ಬಗ್ಗೆ ಅನೀಶ್ ಚೆರಿಯನ್ ಮಾಹಿತಿ ನೀಡಿದರು. ನಿರ್ದೇಶಕ ಅರವಿಂದ್ ಕೌಶಿಕ್ ಚಿತ್ರಕ್ಕೆ ಶುಭ ಕೋರಿದರು. ಸಂತೋಷ್ ರಾಧಾಕೃಷ್ಣನ್ ಹಾಗೂ ಗೀತರಚನೆಕಾರ ವಿಜಯ್ ಭರಮಸಾಗರ ಪತ್ರಿಕಾಗೋಷ್ಠಿಯಲ್ಲಿದ್ದರು.

Tags: Anish CheriyanArvind KowshikB. S.Manjunath.kannada cinemaKite BrotherKite Brothers CinemasandalwoodStudents MovieVInod Bagade
Previous Post

ಪೊಲೀಸ್ ಇಲಾಖೆಯ ದಕ್ಷತೆಯಿಂದ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ: ಸಿ.ಎಂ

Next Post

ಕಳ್ಳ ಅಂತಾ ಬೆನ್ನಟ್ಟಿದ್ದಕ್ಕೆ ಮರವೇರಿ ಕೂತ ಆಸಾಮಿ..!

Related Posts

Top Story

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

by ಪ್ರತಿಧ್ವನಿ
October 28, 2025
0

ಸಾಮಾಜಿಕ ಅರ್ಥಪೂರ್ಣ ವಿಷಯಗಳನ್ನು ಜನಪ್ರಿಯ ಶೈಲಿಯಲ್ಲಿ ಚಿತ್ರಿಸುವ ಖ್ಯಾತ ನಿರ್ದೇಶಕ ವೆಂಕಟ್ ಭರದ್ವಾಜ್, ತಮ್ಮ ಹೊಸ ಚಿತ್ರ “ಹೇ ಪ್ರಭು” (Hey Prabhu Kannada Cinema) ಮೂಲಕ...

Read moreDetails
ಈ ವಾರ ತೆರೆಗೆ ಬಹು ನಿರೀಕ್ಷಿತ “ಬ್ರ್ಯಾಟ್”(BRAT). .

ಈ ವಾರ ತೆರೆಗೆ ಬಹು ನಿರೀಕ್ಷಿತ “ಬ್ರ್ಯಾಟ್”(BRAT). .

October 28, 2025
ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ

ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ

October 28, 2025
ಕಳ್ಳ ಅಂತಾ ಬೆನ್ನಟ್ಟಿದ್ದಕ್ಕೆ ಮರವೇರಿ ಕೂತ ಆಸಾಮಿ..!

ಕಳ್ಳ ಅಂತಾ ಬೆನ್ನಟ್ಟಿದ್ದಕ್ಕೆ ಮರವೇರಿ ಕೂತ ಆಸಾಮಿ..!

October 28, 2025
ಪೊಲೀಸ್ ಇಲಾಖೆಯ ದಕ್ಷತೆಯಿಂದ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ: ಸಿ.ಎಂ

ಪೊಲೀಸ್ ಇಲಾಖೆಯ ದಕ್ಷತೆಯಿಂದ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ: ಸಿ.ಎಂ

October 28, 2025
Next Post
ಕಳ್ಳ ಅಂತಾ ಬೆನ್ನಟ್ಟಿದ್ದಕ್ಕೆ ಮರವೇರಿ ಕೂತ ಆಸಾಮಿ..!

ಕಳ್ಳ ಅಂತಾ ಬೆನ್ನಟ್ಟಿದ್ದಕ್ಕೆ ಮರವೇರಿ ಕೂತ ಆಸಾಮಿ..!

Recent News

Top Story

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

by ಪ್ರತಿಧ್ವನಿ
October 28, 2025
ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ
Top Story

ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ

by ಪ್ರತಿಧ್ವನಿ
October 28, 2025
ಕಳ್ಳ ಅಂತಾ ಬೆನ್ನಟ್ಟಿದ್ದಕ್ಕೆ ಮರವೇರಿ ಕೂತ ಆಸಾಮಿ..!
Top Story

ಕಳ್ಳ ಅಂತಾ ಬೆನ್ನಟ್ಟಿದ್ದಕ್ಕೆ ಮರವೇರಿ ಕೂತ ಆಸಾಮಿ..!

by ಪ್ರತಿಧ್ವನಿ
October 28, 2025
Top Story

ನವೆಂಬರ್ 14 ರಂದು ಉತ್ತಮ ಸಂದೇಶ ಹೊತ್ತು ಬರಲಿದ್ದಾರೆ “kite ಬ್ರದರ್ಸ್” .

by ಪ್ರತಿಧ್ವನಿ
October 28, 2025
ಸಮುದಾಯ 50 – ಮುಂಗಾಣ್ಕೆಯ ದಿಕ್ಕಿನಲ್ಲಿ
Top Story

ಸಮುದಾಯ 50 – ಮುಂಗಾಣ್ಕೆಯ ದಿಕ್ಕಿನಲ್ಲಿ

by ಪ್ರತಿಧ್ವನಿ
October 28, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

October 28, 2025
ಈ ವಾರ ತೆರೆಗೆ ಬಹು ನಿರೀಕ್ಷಿತ “ಬ್ರ್ಯಾಟ್”(BRAT). .

ಈ ವಾರ ತೆರೆಗೆ ಬಹು ನಿರೀಕ್ಷಿತ “ಬ್ರ್ಯಾಟ್”(BRAT). .

October 28, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!