ದೇಶದಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, NDA ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಅಗತ್ಯವಿರುವ ಸಂಖ್ಯೆ ಲಭಿಸಿದ್ದು , ಆದರೂ ಸರ್ಕಾರ ರಚನೆಯ ಕಸರತ್ತು ತೂಗುಯ್ಯಾಲೆಯಲ್ಲಿದೆ.

ಬಿಹಾರದ ಜೆಡಿಯು ಮತ್ತು ಆಂಧ್ರದ ಟಿಡಿಪಿ NDA ಮೈತ್ರಿಕೂಟದಲ್ಲಿ ಇದ್ದರೂ, ಫಲಿತಾಂಶದ ನಂತರದ ಬೆಳವಣಿಗೆಗಳು ಕುತೂಹಲಕ್ಕೆ ಕಾರಣವಾಗಿದೆ. ಒಂದುವೇಳೆ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು INDI ಮೈತ್ರಿಕೂಟದ ಜೊತೆ ಹೋಗವ ಮನಸ್ಸು ಮಾಡಿದ್ರೆ, ಆಗ NDA ಗೆ ಸಂಕಷ್ಟ ಎದುರಾಗೋದ್ರಲ್ಲಿ ಸಂಶಯವಿಲ್ಲ.

ಈಗಾಗಲೇ ಈ ಇಬ್ಬರು ನಾಯಕರನ್ನು INDI ನಾಯಕರು ಸಂಪರ್ಕಿಸಿದ್ದು ತಮ್ಮ ತೆಕ್ಕೆಗೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಮತ್ತು ವಿವಿಧ ಆಫರ್ ಗಳನ್ನೂ ನೀಡಿದ್ದು, ಈ ಇಬ್ಬರು ನಾಯಕರ ನಡೆ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.