ಬೆಂಗಳೂರು: ಕಾಲ್ ಸೆಂಟರ್ ಉದ್ಯೋಗಿಗಳನ್ನ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಓರ್ವ ಹೆಡ್ ಕಾನ್ಸ್ ಟೇಬಲ್ ಸೇರಿದಂತೆ 8 ಆರೋಪಿಗಳನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.
ಮಾಲೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಛಲಪತಿ ಹಾಗೂ ಕೋಲಾರದವರೇ ಆದ ಭರತ್, ಪವನ್, ಪ್ರಸನ್ನ, ಅತೀಕ್, ಜಭಿವುಲ್ಲ ಸೇರಿದಂತೆ 8 ಜನ ಬಂಧಿತ ಆರೋಪಿಗಳು.

ಮೊನ್ನೆ ಮಧ್ಯರಾತ್ರಿ ಕಾಲ್ ಕೋರಮಂಗಲದಲ್ಲಿರೋ ಗ್ಲೋಬಲ್ ಕನೆಕ್ಟ ಟೆಲಿಕಾಂ ಪ್ರೈ.ಲಿ ಕಚೇರಿಗೆ ಬಂದಿದ್ದ 6 ಮಂದಿ, ತಾವು ಪೊಲೀಸರು ಎಂದು ಕಂಪನಿಯ ನಾಲ್ವರು ಉದ್ಯೋಗಿಗಳಾದ ಪವನ್, ರಾಜ್ ವೀರ್, ಆಕಾಶ್, ಅನಸ್ ಎಂಬುವರನ್ನ ಕರೆದು ನಾವು ಪೊಲೀಸರು ಎಂದು ಬೆದರಿಸಿದ್ದರು. ಬಳಿಕ ತಮ್ಮ ಕಾರಿನಲ್ಲಿ ಕೂರಿಸಿ ನಾಲ್ವರನ್ನ ಕಿಡ್ನಾಪ್ ಮಾಡಿ ಹೊಸಕೋಟೆಯ ಲಾಡ್ಜ್ ನಲ್ಲಿ ಕೂಡಿ ಹಾಕಿದ್ದರು. ಅಲ್ಲಿ ತಮಗೆ 25 ಲಕ್ಷ ಹಣ ನೀಡಬೇಕೆಂದು ಡಿಮ್ಯಾಂಡ್ ಮಾಡಿ ಕಿಡ್ನಾಪ್ ಮಾಡಿದ್ದ ಓರ್ವನ ಅಕೌಂಟ್ ನಿಂದ 19 ಲಕ್ಷ ಹಣ ವರ್ಗಾಯಿಸಿಕೊಂಡು, ಕಂಪನಿಯ ಸಿಬ್ಬಂದಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟರು.

ಈ ಬಗ್ಗೆ ಕಂಪನಿ ಸಿಬ್ಬಂದಿ ಮುಂಜಾನೆ 4 ಗಂಟೆಗೆ ಪೊಲೀಸರಿಗೆ ವಿಚಾರ ತಿಳಿಸಿದ್ದರು. ತಕ್ಷಣವೇ ಆರೋಪಿಗಳ ಬೆನ್ನು ಬಿದ್ದ ಕೋರಮಂಗಲ ಪೊಲೀಸರು,
ನಾಲ್ಕು ಟೀಂ ಮಾಡಿಕೊಂಡು ಆರೋಪಿಗಳ ಹುಡುಕಾಟ ಶುರು ಮಾಡಿದ್ರು. ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಹೊಸಕೋಟೆಯ ಲಾಡ್ಜ್ ನಲ್ಲಿ ನಾಲ್ವರನ್ನ ಕೂಡಿ ಹಾಕಿದ್ದ ವಿಚಾರ ದಾಳಿ ನಡೆಸಿ ಪರಿಶೀಲನೆ ನಡೆದಿದರು. ಬಳಿಕ ನಾಲ್ವರನ್ನ ರಕ್ಷಿಸಿ, 8 ಜನರ ಬಂಧಿಸಿ, ಎರಡು ಕಾರುಗಳನ್ನ ಸೀಜ್ ಮಾಡಲಾಗಿದೆ. ಇತ್ತಿಚೆಗೆ ನಡೆದಿದ್ದ ಕಾಲ್ ಸೆಂಟರ್ ರೇಡ್ ಕೇಸ್ ಬಂಡವಾಳ ಮಾಡಿಕೊಂಡು ಕೃತ್ಯ ಎಸಗಿರೋ ಶಂಕೆಯಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.










