ಕನ್ನಡ ಚಿತ್ರರಂಗದ ಬಾದ್‌ಷಾ ಕಿಚ್ಚ ಸುದೀಪ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಟ ಸುದೀಪ್ ಮನೆಯಲ್ಲಿ ಅವರ ತಾಯಿ ನಿಧನದ ಬಳಿಕ ನಡೆಯುತ್ತಿರುವ ಮೊದಲ ಶುಭಕಾರ್ಯ ಇದಾಗಿದೆ.

ಕಿಚ್ಚ ಸುದೀಪ್ ಮನೆಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಬಹಳ ಸಂಭ್ರಮದಿಂದ ಹಳದಿ ಶಾಸ್ತ್ರ ನಡೆದಿದ್ದು, ಈಗಾಗಲೇ ಫೋಟೋಗಳು ವೈರಲ್ ಆಗುತ್ತಿದೆ. ಹಾಗಾದರೆ ಸುದೀಪ್ ಅವರ ಮನೆಯಲ್ಲಿ ಮನೆ ಮಾಡಿರುವ ಮದುವೆ ಸಂಭ್ರಮ ಯಾರದು ಎನ್ನುವ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಸುದೀಪ್ ಅಕ್ಕ ಸುರೇಖಾ ಅವರ ಮಗ ತಾರಣ್ ಸುರೇಶ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ತಾರಿಣಿ ಎನ್ನುವವರ ಜೊತೆ ಶ್ರೀಲಂಕಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಆಗಿದ್ದಾರೆ. ಮದುವೆಗೂ ಮೊದಲು ಸುದೀಪ್ ಮನೆಯಲ್ಲಿ ನಡೆದ ಹಳದಿ ಶಾಸ್ತ್ರದ ಫೋಟೋ ವೈರಲ್ ಆಗಿದ್ದು, ಅತ್ತೆ ಮಗನ ಮದುವೆ ಶಾಸ್ತ್ರದಲ್ಲಿ ಸಾನ್ವಿ ಸುದೀಪ್ ಮಿಂಚಿದ್ದಾರೆ.













