ಬೀದರ್ :ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ (ಪಿ) ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಾಂಪ್ರದಾಯಿಕವಾಗಿ ಆಚರಿಸಲಾದ ದಸರಾ ಹಬ್ಬದ ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡರು.
ಪ್ರತಿ ವರ್ಷದಂತೆಯೇ ಈ ಬಾರಿ ಕೂಡ ಗ್ರಾಮದ ಹಿರಿಯರ ಮತ್ತು ಬಂಡೆಪ್ಪ ಖಾಶೆಂಪುರ್ ಅವರ ನೇತೃತ್ವದಲ್ಲಿ ಶನಿವಾರ ಸಂಜೆ ಊರಿನ ಹತ್ತಿರದ ಬನ್ನಿ ಮರಕ್ಕೆ ಹೋಗಿ ಪೂಜೆ ಸಲ್ಲಿಸಿ ಬನ್ನಿ ತೆಗೆದುಕೊಂಡು ಬಂದ ಗ್ರಾಮಸ್ಥರು, ವಿವಿಧ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ ಬನ್ನಿ ಅರ್ಪಿಸಿದರು.ಇದೇ ವೇಳೆ ಗ್ರಾಮಸ್ಥರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ದಸರಾ ಹಬ್ಬಕ್ಕೆ ಶುಭ ಕೋರಿದರು.ನಂತರ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಬೀದರ್ ನಗರದಲ್ಲಿರುವ ತಮ್ಮ ನಿವಾಸಕ್ಕೆ ತೆರಳಿ ಕುಟುಂಬದವರು, ಅಭಿಮಾನಿಗಳು, ಮುಖಂಡರು, ಕಾರ್ಯಕರ್ತರೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡರು.
ಭಾನುವಾರ ದಿನವಿಡೀ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳ ಮುಖಂಡರು, ಕಾರ್ಯಕರ್ತರು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರ ನಿವಾಸಕ್ಕೆ ತೆರಳಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡು ಶುಭ ಕೋರಿದರು.
ಶನಿವಾರ ಸಂಜೆ ಖಾಶೆಂಪುರ್ ಪಿ ಗ್ರಾಮದಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಹಿರಿಯರಾದ ಡಾ. ಮಾರ್ತಾಂಡರಾವ್ ಖಾಶೆಂಪುರ್ಕರ್, ರಾಜು ಖಾಶೆಂಪುರ್ಕರ್, ಅಕ್ಷಯ್ ಖಾಶೆಂಪುರ್ಕರ್, ರಾಜು ಖಾಶೆಂಪುರ್, ದೂಳಪ್ಪ ಪಟ್ನೆ, ರಾಜಕುಮಾರ್ ಪಾಟೀಲ್, ಶರಣಪ್ಪ ಖಾಶೆಂಪುರ್, ಗ್ರಾ. ಪಂ ಸದಸ್ಯ ಭಜರಂಗ ತಮಗೊಂಡ, ಸುನೀಲ್ ಖಾಶೆಂಪುರ್, ರವಿ ಬಾಲೇಬಾಯಿ, ಮಾರುತಿ ಬಸಗೊಂಡ, ರವಿ ಗುಮಾಸ್ತಿ, ರಘುನಾಥ್ ಗುಮಾಸ್ತಿ, ಶರತ್ ಖಾಶೆಂಪುರ್, ಕೇವಲ್ ಖಾಶೆಂಪುರ್, ಉಜ್ವಲ್ ಖಾಶೆಂಪುರ್, ಆಕರ್ಶ್ ಖಾಶೆಂಪುರ್, ಮಾಣಿಕ್ ಮಚ್ಕೋರಿ ಸೇರಿದಂತೆ ಗ್ರಾಮಸ್ಥರು, ಮುಖಂಡರು ಇದ್ದರು.