ಕಳೆದ ತಿಂಗಳು ರಾಮನವಿಯ ಮೆರವಣಿಗೆಯ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಖರ್ಗೋನ್ನಲ್ಲಿ ಜಿಲ್ಲಾಡಳಿತ ಎರಡು ದಿನಗಳ ಕರ್ಪ್ಯೂವನ್ನ ಜಿಲ್ಲೆಯಾದ್ಯಂತ ಹೇರಿದೆ.
ಸೋಮವಾರ ಹಾಗು ಮಂಗಳವಾರ ಎರಡು ದಿನಗಳ ಕಾಲ ಹಬ್ಬ ನಡೆಯುವುದರಿಂದ ಎರಡು ದಿನಗಳ ಕಾಲ ನಿಷೇಧಾಜ್ಞೆಯನ್ನು ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಪ್ರರ್ಥಾನೆ ಸಲ್ಲಿಸುವವರು ತಮ್ಮ ಮನೆಗಳಲ್ಲಿಯೆ ಪ್ರಾರ್ಥನೆ ಮಾಡಬೇಕು ಯಾರು ಗುಂಪುಗೂಡುವಂತಿಲ್ಲ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿರುತ್ತವೆ ಪರೀಕ್ಷೆಗೆ ಹೋಗುವವರಿಗೆ ವಿಶೇಷ ಪಾಸ್ ನೀಡಲಾಗುವುದು ಎಂದು ಹೆಚ್ಚುವರು ಮ್ಯಾಜಿಸ್ಟ್ರೇಟ್ ಸಮ್ಮರ್ ಸಿಂಗ್ ತಿಳಿಸಿದ್ದಾರೆ.
ಇದೇ ವೇಳೆ ಸೋಮವಾರ ಹಾಗೂ ಮಂಗಳವಾರ ಅಕ್ಷಯ ತೃತೀಯ ಹಾಗು ಪರಶುರಾಮ ಜಯಂತಿಯಿರುವ ಕಾರಣ ಈ ಹಬ್ಬಗಳಿಗು ಸಹ ನಿಷೇಧಾಜ್ಞೆಯನ್ನು ಹೇರಲಾಗಿದೆ.