ಉತ್ತರ ಪ್ರದೇಶ(Uttar Pradesh)ದ ಲಕ್ನೋದಲ್ಲಿ ಸಾಧುಗಳಂತೆ ನಟಿಸಿ ಜನರ ಬೆಲೆಬಾಳುವ ವಸ್ತುಗಳು ಮತ್ತು ಹಣವನ್ನು ದೋಚುತ್ತಿದ್ದ ನಾಲ್ವರು ಯುವಕರನ್ನು ಗ್ರಾಮಸ್ಥರು ಅಮಾನುಷವಾಗಿ ಥಳಿಸಿದ್ದಾರೆ. ನಾಲ್ವರನ್ನು ದೈಹಿಕವಾಗಿ ಚಪ್ಪಲಿಯಿಂದ ಹಲ್ಲೆ ನಡೆಸಲಾಗಿದ್ದು, ಈ ಘಟನೆಯ ವಿಡಿಯೋದಲ್ಲಿ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್(Viral Video) ಆಗಿದೆ.
ವರದಿಗಳ ಪ್ರಕಾರ, ಶುಕ್ರವಾರ ಬೆಳಗ್ಗೆ ಸಾಧುಗಳ ವೇಷ ಧರಿಸಿದ ಪುರುಷರು ಮಹುರಕಲಾ ಗ್ರಾಮದ ಅಂಗಡಿಯೊಂದಕ್ಕೆ ಭೇಟಿ ನೀಡಿದಾಗ ಗಲಾಟೆ ಶುರುವಾಗಿತ್ತು. ಅಂಗಡಿಯವನಿಗೆ ತಿಲಕವನ್ನು ಹಚ್ಚಿ, ಪ್ರಸಾದವನ್ನು ಕೊಡುವ ಮೊದಲು 1,100 ರೂಪಾಯಿಗಳನ್ನು ಕೊಡುವಂತೆ ಮನವೊಲಿಸಿದರು. ಒಮ್ಮೆ ಅಂಗಡಿಯವನು ಪ್ರಜ್ಞಾಹೀನನಾಗಿ ಬಿದ್ದಾಗ, ಖದೀಮರು ಪರಾರಿಯಾಗುವ ಮೊದಲು ಅಂಗಡಿಯಲ್ಲಿದ್ದ ಮೂರು ಗೋಣಿ ಸಾಸಿವೆ ಮತ್ತು ಹಣವನ್ನು ಕದ್ದೊಯ್ದರು.
लखनऊ पुलिस की जांच में पता चला-
— Sachin Gupta (@SachinGuptaUP) August 10, 2024
ये कोई साधु नहीं हैं, सपेरे हैं। लेकिन अब वो भी नहीं हैं। सिर्फ सम्मोहित करके ठगी करते हैं। चारों युवक अमित, आकाश, सागर और अक्षय हैं। मेरठ के रहने वाले हैं। इन्हें गिरफ्तार करके मुकदमा दर्ज किया जा रहा है।
pic.twitter.com/L2yuYugLZw
ಮರುದಿನ ಬೆಳಿಗ್ಗೆ, ಪುರುಷರು ಗಂಗಾಖೇಡಕ್ಕೆ ಬಂದರು, ಅಲ್ಲಿ ಸ್ಥಳೀಯರು ಅವರನ್ನು ಗುರುತಿಸಿದರು. ಅಂಗಡಿಯವರು ಅವರನ್ನು ಗುರುತಿಸಿದ್ದು, ಗ್ರಾಮಸ್ಥರಿಂದ ಸಾರ್ವಜನಿಕವಾಗಿ ಥಳಿಸಿದ್ದಾರೆ. ಅಂಗಡಿಯವರು ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಆರೋಪಿಗಳು ಹೇಳಿಕೊಂಡಿದ್ದಾರೆ. ಆದರೆ ಅದನ್ನು ಕೇಳದ ಸ್ಥಳೀಯರು ಅವರನ್ನು ಚೆನ್ನಾಗಿ ಧಳಿಸಿದ್ದಾರೆ.