26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸ<ಚುಕೋರರು ಮತ್ತು ಯೋಜಕರು ಪಾಕಿಸ್ತಾನ ಸರ್ಕಾರದ ರಕ್ಷಣೆಯಲ್ಲಿದ್ದಾರೆ ಮತ್ತು ಇಲ್ಲಿಯವರೆಗೂ ಯಾವುದೇ ಶಿಕ್ಷಗೆ ಒಳಗಾಗದೆ ತಮ್ಮ ಅಟ್ಟಹಾಸವನ್ನ ಮೆರೆಯುತ್ತಿದ್ದಾರೆ ಎಂಧು ವಿದೇಶಾಂಗ ಸಚಿವ ಎಸ್.ಜೈಶಂಕರ್ ಬೇಸರಿಸಿದ್ದಾರೆ.
ಮುಂಬೈನಲ್ಲಿ 26/11 ಸ್ಮಾರಕಕ್ಕೆ ನಮನ ಸಲ್ಲಿಸಿ ಮಾತನಾಡಿದ ಜೈ ಶಂಕರ್ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡುವ ವೇಳೆ ಭಯೋತ್ಪಾದಕರನ್ನು ನಿಷೇಧಿಸುವ ಮತ್ತು ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸುವ ವಿಚಾರಕ್ಕೆ ಬಂದಾಗ ವಿಶ್ವ ಸಂಸ್ಥೆಯಲ್ಲಿ ಕೆಲವೊಮ್ಮೆ ಅಂತರಾಷ್ಟ್ರೀಯ ರಾಜಕೀಯದಿಂದಾಗಿ ಈ ವಿಚಾರಕ್ಕೆ ಪೆಟ್ಟು ಬೀಳುತ್ತಿದೆ.
ಭಯೋತ್ಪಾದನೆ ಬರಿ ಭಾರತದ ಮೇಲಲ್ಲ ಅಂತರಾಷ್ಟ್ರೀಯ ಸಮುದಾಯದ ಮೇಲೆ ನಡೆದ ದಾಳಿ ಎಂದು ಹೇಳಿದ್ದಾರೆ.