ಪಶ್ಚಿಮ ದೆಹಲಿಯ ಜಹಾಮಗೀರ್ಪುರಿಯಲ್ಲಿ ಹನುಮ ಜಯಂತಿಯ ಮೆರವಣಿಗೆ ವೇಳೆ ನಡೆದ ಗಲಭೆಗೆ ಸಂಬಂದಿಸಿದಂತೆ ಮುಖ್ಯ ಆರೋಪಿಯನ್ನು ದೆಹಲಿಯ ಕ್ರೈಂ ಬ್ರಾಂಚ್ ಪೊಲೀಸರು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ಫರೀದ್ ಅಲಿಯಾಸ್ ನೀತು ಎಂದು ಗುರುತಿಸಲಾಗಿದೆ. ಆರೋಪಿ ಈ ಹಿಂದೆ ಖೋಮು ಗಲಭೆಗಳಿಗೆ ಸಂಬಂಧಿಸಿದಂತೆ ಪೊಲೀಸರಿಂದ ಎಸ್ಕೇಪ್ ಆಗಿದ್ದ ಎಂದು ತಿಳಿದು ಬಂದಿದೆ. ತಮ್ಲುಕ್ ಎಂಬ ಹಳ್ಳಿಯಲ್ಲಿ ಅವನ ಚಿಕ್ಕಮ್ಮನ ಮನೆಗೆ ಆರೋಪಿ ಭೇಟಿ ನೀಡುವುದನ್ನು ಕಚಿತಪಡಿಸಿಕೊಂಡಿದ್ದ ಪೊಲೀಸರು ಅವನನ್ನು ಅಲ್ಲಿಯೇ ಬಂಧಿಸಿದ್ದಾರೆ.
ಜಹಾಂಗೀರ್ಪುರಿ ಘಟನೆ ನಂತರ ಆರೋಪಿಗಳು ಪದೇ ಪದೇ ತಾವಿದ್ದ ಜಾಗನ್ನು ಬದಲಾಯಿಸುತ್ತಿದ್ದರು ಮತ್ತು ಆರೋಪಿ ವಿರುದ್ದ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿದ್ದವು ಮತ್ತು ಜಹಾಂಗೀರ್ಪುರಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದ ಎಂದು ತಿಳಿದು ಬಂದಿದೆ.
