
ಜೋಕಾಲಿ ಸಿನಿಮಾ ಮೂಲಕ ನಾಯಕನಟನಾಗಿ ಪಾದಾರ್ಪಣೆ ಮಾಡಿ ನಂತರ ರಾಜಹಂಸ ಸಿನಿಮಾ ಮೂಲಕ ನಟನೆ ಜೊತೆಗೆ ನಿರ್ಮಾಣವನ್ನು ಮಾಡಿದ್ದರು. “ಕೆರೆಬೇಟೆ”ಗೆ ರಾಜ್ ಗುರು ಆಕ್ಷನ್ ಕಟ್ ಹೇಳಿದ್ದಾರೆ ನಾಯಕನಾಗಿ ಜೋಕಾಲಿ ಮತ್ತು ರಾಜಹಂಸ ಖ್ಯಾತಿಯ ಗೌರಿಶಂಕರ್ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಗೌರಿಶಂಕರ್ ಗೆ ಜೋಡಿಯಾಗಿ ಬೆಂಗಳೂರಿನ ಬಿಂದು ಶಿವರಾಮ್ ಅಭಿನಯಿಸಿದ್ದಾರೆ.

ಮಲೆನಾಡಿನ ಕಥೆಯಾಧಾರಿಸಿದಂತ ಗೌರಿ ಶಂಕರ್ ನಾಯಕನಾಗಿ ನಟಿಸಿ ನಿರ್ಮಾಣ ಮಾಡಿರುವ “ಕೆರೆಬೇಟೆ” ಸಿನಿಮಾ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.

ಕಳೆದ ವರ್ಷ ನವೆಂಬರ್ ನಲ್ಲಿ ನಡೆದಂತಹ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಪನೋರಮ ) ಕೂಡ ಕೆರೆಬೇಟೆ ಚಿತ್ರ ಪ್ರದರ್ಶನಗೊಂಡಿತ್ತು

