ಭಾರತೀಯ ಚಿತ್ರರಂಗದ ಹೆಚ್ಚು ಕಮ್ಮಿ400 ಚಿತ್ರಗಳ ಆಯ್ಕೆ ಪಟ್ಟಿಯಲ್ಲಿ ಕೇವಲ 25 ಚಿತ್ರಗಳು(ಫ್ಯೂಚರ್ ಫಿಲಂಸ್) “ಪನ್ನೋರಮ”(Goa international film festival)ಗೆ ಆಯ್ಕೆಯಾಗಿದೆ, ಈ ಪೈಕಿ ಕನ್ನಡದ ಎರಡು ಚಿತ್ರಗಳು ಆಯ್ಕೆಯಾಗಿದೆ. ವಿಶೇಷವಾಗಿ ನಮ್ಮ “ಕೆರೆಬೇಟೆ” ಕೂಡ ಒಂದು ಎಂಬುದು ಹೆಮ್ಮೆಯ ವಿಚಾರ.

ಇತ್ತೀಚೆಗೆ ತೆರೆ ಕಂಡ ಕೆರೆ ಬೇಟೆ ಸಿನಿಮಾ ವಿಮರ್ಶಕರಿಂದ ಅತ್ಯಧ್ಭುತವಾದ ರೆಸ್ಪಾನ್ಸ್ ಪಡೆಸುಕೊಂಡಿತ್ತು. ಹೊಸ ತಂಡ ಕಟ್ಟಿಕೊಟ್ಟಿದ್ದ ಈ ಅದ್ಭುತ ಸಿನಿಮಾಗೆ ಪ್ರೇಕ್ಷಕ ಮಹಾಪ್ರಭು ಕೂಡ ಜೈಕಾರ ಹಾಕಿದ್ದ. ಆದ್ರೆ ಈ ಸಿನಿಮಾ ಇನ್ನು ದೊಡ್ಡ ಯಶಸ್ಸು ಸಾಧಿಸಬೇಕಿತ್ತು ಎಂಬುದು ಹಲವರ ಒತ್ತಾಸೆಯಾಗಿತ್ತು.

ಆದ್ರೆ ಒಳ್ಳೆಯ ಸಿನಿಮಾಗಳಿಗೆ ಎಂದಿಗೂ ಸೋಲಿಲ್ಲ, ಪ್ರತಿಭೆಗೆ ತಕ್ಕ ವೇದಿಕೆ ಸಾದಾ ಸಿಗುತ್ತದೆ ಎಂಬುದಕ್ಕೆ ಕೆರೆಬೇಟೆ ಸಿನಿಮಾ ಮತ್ತೊಂದು ನಿದರ್ಶನವಾಗಿದೆ ನಿಂತಿದೆ. ಏನೇ ಆಗಲಿ ಅತ್ಯುತ್ತಮ ವೇದಿಗಳಲ್ಲಿ ಗುರುತಿಸಿಕೊಳ್ಳುವ ಇಂಥ ಒಳ್ಳೆಯ ಸಿನಿಮಾಗಳಿಗೆ ಇನ್ಮುಂದೆ ಪ್ರೇಕ್ಷರರಿಂದಲೂ ಅದ್ಬುತ ಪ್ರತಿಕ್ರಿಯೆ ಸಿಗಲಿ ಎಂಬುದು ಕನ್ನಡಿಗರ ಆಶಯ.