
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ತುತ್ತಾಗಿದೆ. ಅವರ ಬೆಂಗಾವಲು ಕಾರುಗಳು ಸರಣಿಯಾಗಿ ಡಿಕ್ಕಿ ಹೊಡೆದುಕೊಂಡಿವೆ. ತಿರುವನಂತಪುರದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
The escort vehicle of Kerala CM Pinarayi Vijayan met with an accident.. pic.twitter.com/2rp6DN7r3y
— ꧁✨𝑆𝙖ƚ𝖍ϵϵ𝗌𝖍✨꧂ (@MrPaluvetz) October 28, 2024
ಸಿಎಂ ಪಿಣರಾಯಿ ಅವರು ಎಂದಿನಂತೆ ತಮ್ಮ ಬೆಂಗಾವಲು ವಾಹನಗಳೊಂದಿಗೆ ಪ್ರಯಾಣಿಸುತ್ತಿದ್ದರು.ಈ ವೇಳೆ ಮುಖ್ಯರಸ್ತೆಯಲ್ಲೇ ಮುಂದಿದ್ದ ಕಾರು ತಕ್ಷಣ ಬ್ರೇಕ್ ಹಾಕಿದೆ. ಸ್ವಲ್ಪ ವೇಗವಾಗಿಯೇ ಬೆಂಗಾವಲು ವಾಹನಗಳು ಚಲಿಸುತ್ತಿದ್ದರಿಂದ ನಿಯಂತ್ರಣ ತಪ್ಪಿ, ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ ಎನ್ನಲಾಗಿದೆ.

ಸಿಎಂ ಜೊತೆಗೆ ಚಲಿಸುತ್ತಿದ್ದ ಸುಮಾರು ಏಳು ಬೆಂಗಾವಲು ವಾಹನಗಳು ಸರಣಿಯಾಗಿ ಡಿಕ್ಕಿ ಹೊಡೆದುಕೊಂಡಿರುವ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಕೂಡ ಆಗಿದೆ. ಮಹಿಳೆಯೊಬ್ಬರು ಈ ಬೆಂಗಾವಲು ವಾಹನಗಳು ಬಂದಾಗಲೇ ರಸ್ತೆಯಲ್ಲಿ ದಿಢೀರನೆ ಬಲಕ್ಕೆ ತಿರುಗಿಸಿದ್ದಾರೆ. ಹಾಗಾಗಿ ಮುಂದೆ ಹೋಗುತ್ತಿದ್ದ ಭದ್ರತಾ ವಾಹನಗಳು ಬ್ರೇಕ್ ಹೊಡೆದಿವೆ.
ಈ ವೇಳೆ ಹಿಂದೆಯೇ ವೇಗವಾಗಿ ಬರುತ್ತಿದ್ದ ಸಿಎಂ ವಾಹನ ಸೇರಿದಂತೆ ಕೊನೆಯ ಆಂಬುಲೆನ್ಸ್ ಕೂಡ ಏಳು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ.ಅದೃಷ್ಟವಶಾತ್ ಸಿಎಂ ಪಿಣರಾಯಿ ವಿಜಯನ್ ಅವರು ಕ್ಷೇಮವಾಗಿದ್ದಾರೆ ಎನ್ನಲಾಗಿದೆ.ಇನ್ನು ಸರಣಿ ಅಪಘಾತದಿಂದ ವಾಹನಗಳೆಲ್ಲ ಡ್ಯಾಮೇಜ್ ಕೂಡ ಆಗಿವೆ.




