ಕೇರೆಗೊಡು (Keregodu) ಹನುಮ ಧ್ವಜ ತೆರವು ಬಳಿಕ ಮಂಡ್ಯದಲ್ಲಿ ನಡೆದ ಘರ್ಷಣೆಯಿಂದ ಸಾಮಾಜಿಕ ಜಾಲತಾಣದ (Social media) ಮೇಲೆ ಖಾಕಿ ಕಣ್ಣಿಟ್ಟಿದೆ.ಸಾಮಾಜಿಕ ಸ್ವಾಸ್ಥ್ಯಕ್ಕೆ ಭಂಗ ತರುವ ಪೋಸ್ಟ್ ನಿಷೇಧಿಸಿ ಆದೇಶ ಹೊರಡಿಸಿದೆ.

ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಈ ಆದೇಶ ಹೊರಡಿಸಿದ್ದಾರೆ.
ಕೆರಗೋಡು ಧ್ವಜಸ್ತಂಭದ ವಿಚಾರ ಸೂಕ್ಷ್ಮ ವಿಚಾರ.
ಈ ಸಂಬಂಧ ಯಾರೇ ಆಗಲಿ ಸಮಾಜಿಕ ಜಾಲತಾಣದಲ್ಲಿ ಸಮಾಜಿಕ ಸ್ವಾಸ್ಥ್ಯಕ್ಕೆ ಭಂಗ ತರುವ ಪೋಸ್ಟ್ ಮಾಡಬಾರದು.ಪ್ರಚೋದನಕಾರಿ ಹೇಳಿಕೆಗಳು, ವಿಡಿಯೋ, ಉದ್ರೇಕಕಾರಿ ಭಾಷಣ ಹಾಕುವವರ ವಿರುದ್ದ ಕ್ರಮ. ಅಂತಹವರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.

#Mandya #keregodu #Socialmedia #hanumadwaja