ಕೇಂದ್ರೀಯ ವಿದ್ಯಾಲಯಗಳಲ್ಲಿ ಸಂಸದರಿಗೆ ಇರುವ ಕೋಟಾ ಸಹಿತ ಹಲವು ವಿಶೇಷ ಪ್ರವೇಶ ಅವಕಾಶಗಳನ್ನು ರದ್ದು ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
ಹೌದು, ಕೇಂದ್ರೀಯ ವಿದ್ಯಾಲಯ ವಿಶೇಷ ಜತೆಗೆ ಪ್ರವೇಶಾ ಮತ್ತು ಅನೇಕ ಕೋಟವನ್ನು ರದ್ದುಗೊಳಿಸಿದೆ. ಹೊಸ ನಿಯಮಗಳನ್ನೂ ಬಿಡುಗಡೆ ಮಾಡಿದೆ. ಇದರಿಂದಾಗಿ ಪ್ರತೀ ಕೆ.ವಿ.ಗೆ ತಲಾ ಹತ್ತರಂತೆ ಸುಮಾರು 40 ಸಾವಿರ ಹೆಚ್ಚುವರಿ ಸೀಟುಗಳು ಸಿಗಲಿವೆ.
ಕೊರೊನಾದಿಂದಾಗಿ ಅನಾಥ ರಾದ 10 ಮಕ್ಕಳಿಗೆ ವಿಶೇಷ ಆದ್ಯತೆ ಯಲ್ಲಿ ಪ್ರವೇಶ ನೀಡಲು ನಿರ್ಧರಿಸಲಾಗಿದೆ. ಅವರಿಗೆ 1-12ನೇ ತರಗತಿ ವರೆಗೆ ಶುಲ್ಕ ವಿನಾಯಿತಿ ನೀಡಲು ಚಿಂತನೆ ನಡೆಸಲಾಗಿದೆ.

ರದ್ದಾಗಿರುವ ಕೋಟಾ
ಸಂಸದರ ಕೋಟಾ ಅಲ್ಲದೆ, ಶಿಕ್ಷಣ ಸಚಿವಾ ಲಯದ ಉದ್ಯೋಗಿಗಳ ಮಕ್ಕಳಿಗೆ, ಕೇಂದ್ರೀಯ ವಿದ್ಯಾಲಯದ ನಿವೃತ್ತ ಉದ್ಯೋಗಿಗಳ ಸಂಘ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಿಗೆ ಮೀಸಲಾಗಿ ಇರುವ ವಿವೇಚನ ಕೋಟಾಗಳನ್ನು ರದ್ದು ಮಾಡಲಾಗಿದೆ. ಕಳೆದ ವರ್ಷ ಕೇಂದ್ರ ಸಚಿವರು ಕೆ.ವಿ.ಗಳಿಗೆ ಮಾಡುವ ಶಿಫಾರಸು ರದ್ದುಪಡಿಸಲಾಗಿತ್ತು.








