ದೀಪಾವಳಿ ಹಬ್ಬದ ಪ್ರಯುಕ್ತ ಉತ್ತರಾಖಂಡದ ಶ್ರೀ ಕೇದಾರನಾಥ ಮಂದಿರವನ್ನು ಹೂವಿನಿಂದ ಅಲಂಕರಿಸಲಾಗಿದೆ.ಉತ್ತರಾಖಂಡದ ಜ್ಯೋತಿರ್ಲಿಂಗ ಕ್ಷೇತ್ರವು ಚಳಿಗಾಲ ಆರಂಭದ ಹಿನ್ನಲೆ ನವೆಂಬರ್ 3ರಿಂದ ಕ್ಲೋಸ್ ಮಾಡಲಾಗುತ್ತದೆ.
ಅಂದು ಬೆಳಗ್ಗೆ 8.30ಕ್ಕೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದ್ದು, ಕೇದಾರನಾಥ ಥಾಮ್‌ನಲ್ಲಿರುವ ಶ್ರಭಕುಂಠ ಭೈರವನಾಥ ದೇವಾಲಯವನ್ನು ನೆನ್ನೆಯೇ ಕ್ಲೋಸ್ ಮಾಡಲಾಗಿದೆ.
ಚಳಿಗಾಲ ಅವಧಿ ಮುಗಿದು ಬೇಸಿಗೆ ಆರಂಭದಲ್ಲಿ ದೇವಾಲಯದ ಬಾಗಿಲನ್ನು ಮತ್ತೆ ತೆರೆಯಲಿದ್ದು, ದೀಪಾವಳಿ ಸಂದರ್ಭದಲ್ಲಿ ಕೇದಾರೀಶ್ವರನ ದರ್ಶನ ಪಡೆಯಲು ಅಪಾರ ಸಂಖ್ಯೆಯ ಭಕ್ತರು ಮಂದಿರಕ್ಕೆ ಭೇಟಿ ನೀಡುತ್ತಾರೆ..