ಕಬಾಬ್ ಗೆ (kabab) ಬಳಸುವ ಕಲರ್ ನಲ್ಲಿ ಕ್ಯಾನ್ಸರ್ (Cancer) ಕಾರಕ ಬಣ್ಣ ಪತ್ತೆಯಾದ ಬೆನ್ನಲೇ, ಸದ್ಯ ನಾನ್ ವೆಜ್ (Non veg) ಪ್ರಿಯರಿಗೆ ಮತ್ತೊಂದು ಶಾಕ್ ಎದುರಾಗೋ ಸಾಧ್ಯತೆಯಿದೆ. ರಾಜ್ಯದಲ್ಲಿ ಶೀಘ್ರದಲ್ಲೇ ಶವರ್ಮಾ ಬ್ಯಾನ್ ಆಗೋ ಸಾಧ್ಯತೆಯಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
![](https://pratidhvani.com/wp-content/uploads/2024/06/IMG_8482-1.jpeg)
ಈ ಶವರ್ಮಾಗಳಲ್ಲಿ ಬ್ಯಾಕ್ಟಿರಿಯಾ (Bacteria) ಹಾಗೂ ಈಸ್ಟ್ (yeast) ಪತ್ತೆಯಾಗಿರೋದ್ರಿಂದ ಶವರ್ಮಾವನ್ನ ಕೂಡ ನಿಷೇಧಿಸೋ ಸಾಧ್ಯತೆಯಿದೆ. ಶವರ್ಮಾಗಳು ಭಾರಿ ಜನಪ್ರಿಯವಾಗಿದ್ದು, ಇದೀಗ ಈ ಅಂಶ ಪತ್ತೆಯಾಗಿರೋದು ನಾನ್ವೆಜ್ ಪ್ರಿಯರ ಆತಂಕಕ್ಕೆ ಕಾರಣವಾಗಿದೆ.
ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ, ಬೆಂಗಳೂರು ಸೇರಿದಂತೆ ಹಲವೆಡೆ ಶವರ್ಮಾ ಗುಣಮಟ್ಟ ಪರಿಶೀಲನೆ ನಡೆಸಿತ್ತು. ಈ ವೇಳೆ ಶವರ್ಮಾ ತಯಾರಿಕೆಯಲ್ಲಿ ನೈಮರ್ಲ್ಯದ ಕೊರತೆ ಕಂಡುಬಂದಿದೆ.