ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅಭಿನಯದ ʻಗುರುದೇವ್ ಹೊಯ್ಸಳʼ ಸಿನಿಮಾ, ಮೊನ್ನೆಯಷ್ಟೇ ರಾಜ್ಯಾದ್ಯಂತ ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣ್ತಿದೆ. ಸಿನಿ ಪ್ರೇಕ್ಷಕರು ಹಾಗೂ ಚಿತ್ರ ವಿಮರ್ಶಕರು ಧನಂಜಯ್ ಅವರ 25ನೇ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ʻಗುರುದೇವ್ ಹೊಯ್ಸಳʼ ಸಿನಿಮಾ ಉತ್ತಮ ಕಲೆಕ್ಷನ್ ಮಾಡ್ತಿದ್ದು, ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಲಾಭ ಕಂಡಿದೆ.
ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಆದ್ರೆ ಕೆಲ ಮಂದಿ ಚಿತ್ರದ ಬಗ್ಗೆ ನಕಾರಾತ್ಮಕವಾಗಿಯೂ ಅಭಿಪ್ರಾಯ ಹಂಚಿಕೊಂಡಿದ್ದಾರೆ. ʻಗುರುದೇವ್ ಹೊಯ್ಸಳʼ ಸಿನಿಮಾ ಪ್ಲಾಪ್ ಹಾಗೆ ಹೀಗೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಕಾಲೆಳೆಯುತ್ತಿರುವವರಿಗೆ, ನಿರ್ಮಾಪಕ ಕಾರ್ತಿಕ್ ಗೌಡ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.
ಮಸಾಲೆ ದೋಸೆ ಎಂಬ ಹೆಸರಿರೋ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿರೋ ವ್ಯಕ್ತಿಯೊಬ್ಬರು, ʻಹೊಯ್ಸಳ ಸಿನಿಮಾ ಸೂಪರ್, ಬ್ಲಾಕ್ ಬಸ್ಟರ್, ಚಿಂದಿ ಚಿತ್ರಾನ್ನ.. ಆದ್ರೆ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಸೋತಿದೆ.. ನೀವು ಜನರ ಅಭಿಪ್ರಾಯವನ್ನ ಖರೀದಿ ಮಾಡೋಕಾಗಲ್ಲ ಅಂತ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ʻಗುರುದೇವ್ ಹೊಯ್ಸಳʼ ಚಿತ್ರದ ನಿರ್ಮಾಪಕ ಕಾರ್ತಿಕ್ ಗೌಡ, ʻನಾವು ಯಾವ ವಿಮರ್ಶಕರನ್ನೂ ಖರೀದಿಸಿಲ್ಲ, ವಿಮರ್ಶೆಗಳ ಮೇಲೆ ಪ್ರಭಾವವನ್ನೂ ಸಹ ಬೀರಿಲ್ಲ.. ಜನಪ್ರಿಯತೆ ಗಳಿಸುವ ಸಲುವಾಗಿಯೋ, ಅಥವಾ ನಿಮ್ಮ ಖಾಸಗಿ ಉದ್ದೇಶದಿಂದಲೋ ಏನೋ.. ನೀವು ನಮ್ಮ ಸಿನಿಮಾದ ಬಗ್ಗೆ ಕೆಲ ದಿನಗಳಿಂದಲೂ ಋಣಾತ್ಮಕವಾಗಿಯೇ ಮಾತ್ನಾಡ್ತಿದ್ದೀರಾ.. ನಿಮಗೆ ಸಿನಿಮಾ ಮಾಡಲು ಬರದಿದ್ದರೆ, ಸಿನಿಮಾವನ್ನ ಮುರಿಯುವ ಪ್ರಯತ್ನವನ್ನೂ ಮಾಡ್ಬೇಡಿ.. ಹೊಯ್ಸಳ ಚಿತ್ರದ ಬಗ್ಗೆ ಪ್ರಕಟವಾಗಿರುವ ಎಲ್ಲಾ ವಿಮರ್ಶೆಗಳು ನೈಜ ವಿಮರ್ಶೆಗಳು.. ನಮ್ಮ ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡ್ತಿದೆʼ ಅಂತ ಟ್ವೀಟ್ ಮಾಡಿದ್ದಾರೆ.