• Home
  • About Us
  • ಕರ್ನಾಟಕ
Thursday, September 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಪಿಎಂಎಫ್ಎಂಇ ಯೋಜನೆಯಲ್ಲಿ ಕರ್ನಾಟಕದ ಅಭೂತಪೂರ್ವ ಪ್ರಗತಿ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

ಪ್ರತಿಧ್ವನಿ by ಪ್ರತಿಧ್ವನಿ
September 4, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ
0
Share on WhatsAppShare on FacebookShare on Telegram

ಕೆಪೆಕ್ ಎಂಡಿ ಸಿ.ಎನ್. ಶಿವಪ್ರಕಾಶ್ ಅವರ ಶ್ರಮಕ್ಕೆ ಮೆಚ್ಚುಗೆ.

ADVERTISEMENT

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ದಗೊಳಿಸುವಿಕೆ (ಪಿಎಂಎಫ್ಎಂಇ) ಯೋಜನೆಯು ಕರ್ನಾಟಕದ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಈ ಯೋಜನೆಯಡಿ, ರಾಜ್ಯ ಸರ್ಕಾರವು ಹೆಚ್ಚುವರಿ ಶೇ.15ರಷ್ಟು ಸಹಾಯಧನ ನೀಡುತ್ತಿದ್ದು, ಕಿರು ಉದ್ದಿಮೆದಾರರಿಗೆ ಶೇ.50ರಷ್ಟು ಅಥವಾ ಗರಿಷ್ಠ ರೂ.15 ಲಕ್ಷ ಸಾಲ ಸಂಪರ್ಕಿತ ಸಹಾಯಧನ ಲಭ್ಯವಾಗುತ್ತಿದೆ. ಇದರಲ್ಲಿ ಕೇಂದ್ರದ ರೂ.6 ಲಕ್ಷ ಹಾಗೂ ರಾಜ್ಯದ ರೂ.9 ಲಕ್ಷ ಸಹಾಯಧನ ಸೇರಿದೆ.

ಈ ಯೋಜನೆಯ ಯಶಸ್ಸಿಗೆ ಕಾರಣರಾದ ಕರ್ನಾಟಕದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ನಾಯಕತ್ವ ಹಾಗೂ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಅವರ ಅವಿರತ ಶ್ರಮವನ್ನು ಉದ್ಯಮಿಗಳು ಮತ್ತು ರೈತರು ವ್ಯಾಪಕವಾಗಿ ಮೆಚ್ಚಿದ್ದಾರೆ..

ವಾರ್ಷಿಕ ಸಾಲ ಮಂಜೂರಾತಿಯ ಪ್ರಗತಿ:

    ಪಿಎಂಎಫ್ಎಂಇ ಯೋಜನೆಯಡಿ ಕಳೆದ ಐದು ಸಾಲುಗಳಲ್ಲಿ ಸಹಾಯ ಧನದಡಿಯಲ್ಲಿ ಸಾಲ ಮಂಜೂರಾತಿಯಲ್ಲಿ ಗಣನೀಯ ಏರಿಕೆಯಾಗಿದೆ. 2021-22 ಸಾಲಿನಲ್ಲಿ ಒಟ್ಟು 259 ಸಾಲಗಳು ಮಂಜೂರಾಗಿದ್ದವು, ಇದು 2022-23ರಲ್ಲಿ 1813ಗೆ, 2023-24ರಲ್ಲಿ 1,997ಗೆ, 2024-25ರಲ್ಲಿ 2321ಗೆ ಮತ್ತು 2025-26ರ ಮೊದಲ ತ್ರೈಮಾಸಿಕದಲ್ಲಿ 314 ಹಾಗೂ 2ನೆ ತ್ರೈಮಾಸಿಕದ ಆಗಸ್ಟ್ ಅಂತ್ಯದವರೆಗೆ 390 ಸಾಲಗಳು ಮಂಜೂರಾಗಿವೆ.
    ಇದು ಗ್ರಾಮೀಣ ಯುವಕ-ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ವಲಸೆಯನ್ನು ತಡೆಗಟ್ಟಿ, ರೈತರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ..

ಮಾನ್ಯ ಮುಖ್ಯಮಂತ್ರಿಗಳು 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ರಾಜ್ಯದಲ್ಲಿ ಹೆಚ್ಚುವರಿ 5000 ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಸ್ಥಾಪಿಸುವ ಗುರಿ ಘೋಷಿಸಿದ್ದು, ಇದಕ್ಕಾಗಿ ರೂ.206 ಕೋಟಿ ಅನುದಾನ ಒದಗಿಸಿದ್ದಾರೆ. ಈ ಗುರಿ ಸಾಧನೆಯತ್ತ ರಾಜ್ಯವು ಭರದಿಂದ ಸಾಗುತ್ತಿದ್ದು, ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕೆಪೆಕ್ ಸಂಸ್ಥೆಯು ಯೋಜನೆಯನ್ನು ಸಮರ್ಥವಾಗಿ ಅನುಷ್ಠಾನಗೊಳಿಸುತ್ತಿದೆ..

   ಕೆಪೆಕ್ ಸಂಸ್ಥೆಯು ಯೋಜನೆಯ ರಾಜ್ಯ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಅವರ ನೇತೃತ್ವದಲ್ಲಿ ಅನೇಕ ನವೀನ ಕ್ರಮಗಳನ್ನು ಕೈಗೊಂಡಿದೆ..

ಪ್ರಸ್ತುತ ಆರ್ಥಿಕ ವರ್ಷದ (2025-26) ಪ್ರಾರಂಭದಿಂದಲೂ ಯೋಜನೆಯ ಅನುಷ್ಠಾನವನ್ನು ಚುರುಕುಗೊಳಿಸಲಾಗಿದ್ದು, ಜಿಲ್ಲಾವಾರು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಮುಂದಾಳತ್ವದಲ್ಲಿ ಆಯೋಜಿಸಲಾಗುತ್ತಿದೆ. ಈಗಾಗಲೇ 19 ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆದಿದ್ದು, ಪ್ರತಿ ಕಾರ್ಯಕ್ರಮದಲ್ಲಿ 300-400 ಸಂಭಾವ್ಯ ಉದ್ದಿಮೆದಾರರು ಮತ್ತು ರೈತರು ಭಾಗವಹಿಸಿ ಅರ್ಜಿ ಸಲ್ಲಿಕೆಗೆ ಮುಂದಾಗಿದ್ದಾರೆ..

    ಉದ್ದಿಮೆದಾರರಿಗೆ ಸಹಾಯ ಹಸ್ತ ನೀಡಲು ಕೆಪೆಕ್ ಸಂಸ್ಥೆಯು ಇತ್ತೀಚೆಗೆ 89 ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ನೇಮಕ ಮಾಡಿದ್ದು, ಇನ್ನೂ 100 ಜನರ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಹಾಯವಾಣಿ ಕೇಂದ್ರ ಸ್ಥಾಪನೆ, ಬ್ಯಾಂಕಿಂಗ್ ಸಲಹಾ ಕೋಶ (3 ನುರಿತ ತಜ್ಞರೊಂದಿಗೆ), ಪರಿಶಿಷ್ಠ ಜಾತಿ/ಪಂಗಡದ ಉದ್ದಿಮೆದಾರರಿಗೆ ವಿಶೇಷ ಅಭಿಯಾನ ಮತ್ತು ಪ್ರತ್ಯೇಕ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ ಪ್ರಮುಖ ಬ್ಯಾಂಕುಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆಗಳು ನಡೆದಿದ್ದು, ಬ್ಯಾಂಕಿನಲ್ಲಿ ಬಾಕಿ ಇರುವ ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲಾ ಪ್ರಯತ್ನಗಳು ಸಿ.ಎನ್. ಶಿವಪ್ರಕಾಶ್ ಅವರ ದೂರದೃಷ್ಟಿ ಮತ್ತು ಸಮರ್ಪಣೆಯ ಫಲವಾಗಿದ್ದು, ಯೋಜನೆಯ ಪ್ರಗತಿಯನ್ನು ದ್ವಿಗುಣಗೊಳಿಸಿದೆ..

     ಪ್ರಸ್ತುತ ಆರ್ಥಿಕ ವರ್ಷದ (2025-26) ಪ್ರಗತಿಯು ಅಭೂತಪೂರ್ವವಾಗಿದ್ದು, ಆಗಸ್ಟ್ ಮಾಹೆಯ ಅಂತ್ಯಕ್ಕೆ 2937 ಅರ್ಜಿಗಳು ಸಲ್ಲಿಕೆಯಾಗಿದ್ದು, 704 ಸಾಲಗಳು ಮಂಜೂರಾಗಿವೆ. ಇದರ ಮೂಲಕ ರೂ.109.24 ಕೋಟಿ ಹೂಡಿಕೆಯಾಗಿದೆ.

 
ಮಾಹೆವಾರು ವಿವರಗಳು ಈ ಕೆಳಕಂಡಂತಿವೆ:

ಮಾಹೆ
ಸಲ್ಲಿಕೆಯಾದ ಅರ್ಜಿಗಳು/
ಸಾಲ ಮಂಜೂರಾತಿ
ಹೂಡಿಕೆಯಾಗುತ್ತಿರುವ ಬಂಡವಾಳ (ರೂ.ಕೋಟಿಗಳಲ್ಲಿ)
ಏಪ್ರಿಲ್ –
328
73
10.19

ಮೇ- 2025
398
126
19.00

ಜೂನ್- 2025
502
115
22.76

ಜುಲೈ- 2025
796
168
26.58

ಆಗಸ್ಟ್- 2025
913
221
30.71

ಆಗಸ್ಟ್ ಮಾಹೆಯ ಅಂತ್ಯಕ್ಕೆ
2937
704
109.24

ವಾರ್ಷಿಕ ಸಹಾಯಧನದಡಿ ಸಾಲ ಮಂಜೂರಾತಿ ಗ್ರಾಫ್ ವಿವರ:

ಯೋಜನೆಯಡಿ ಸ್ಥಾಪನೆಯಾಗುತ್ತಿರುವ ಘಟಕಗಳು ಮುಖ್ಯವಾಗಿ ಸಿರಿಧಾನ್ಯ ಘಟಕಗಳು, ಆರೋಗ್ಯಯುಕ್ತ ಗಾಣದ ಎಣ್ಣೆ ಘಟಕಗಳು, ಬೆಲ್ಲ ಉತ್ಪಾದನಾ ಘಟಕಗಳು ಹಾಗೂ ಪರಿಶುದ್ಧ ಮಸಾಲೆ ಪದಾರ್ಥಗಳ ಘಟಕಗಳಾಗಿವೆ. ಇವು ನಾರು, ಪ್ರೋಟೀನ್, ವಿಟಮಿನ್ ಮತ್ತು ಖನಿಜಯುಕ್ತ ಉತ್ಪನ್ನಗಳನ್ನು ಉತ್ಪಾದಿಸಿ, ನಾಗರೀಕರ ಆರೋಗ್ಯವೃದ್ಧಿಗೆ ಸಹಕಾರಿಯಾಗಿವೆ. ಈ ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಸೃಷ್ಟಿಸಿ, ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸುತ್ತಿದೆ..

ಕರ್ನಾಟಕದ ಅತ್ಯುತ್ತಮ ವಿತರಣಾ ಸಾಧನೆ:

ದೇಶದಲ್ಲಿ ಮುಂಚೂಣಿ ಸ್ಥಾನ:
ಪಿಎಂಎಫ್ಎಂಇ ಯೋಜನೆಯಡಿ ಸಾಲ ವಿತರಣೆಯಲ್ಲಿ ಕರ್ನಾಟಕವು ಕಳೆದ ಸಾಲಿನಲ್ಲಿ ಕೇರಳದ ನಂತರದ 2ನೇ ಸ್ಥಾನದಲ್ಲಿತ್ತು. 2025-26ನೇ ಸಾಲಿನಲ್ಲಿ ದೇಶದಲ್ಲಿ ಕರ್ನಾಟಕವು ಅಗ್ರ ಸ್ಥಾನದಲ್ಲಿ ಕಾಣಿಸಿಕೊಂಡಿದೆ, ಒಟ್ಟು 7092 ಸಾಲಗಳ ಮಂಜುರಾತಿಯಲ್ಲಿ 6562 ಸಾಲಗಳನ್ನು ಯಶಸ್ವೀ ರೀತಿಯಲ್ಲಿ ವಿತರಿಸಿ 93% ವಿತರಣಾ ಸಾಧನೆಯನ್ನು ಪ್ರದರ್ಶಿಸಿದೆ. ಇದು ತಮಿಳುನಾಡು (90%), ಉತ್ತರ ಪ್ರದೇಶ (86%) ಮತ್ತು ಮಹಾರಾಷ್ಟ್ರ (85%)ನಂತಹ ರಾಜ್ಯಗಳನ್ನು ಹಿಂದಿಕ್ಕಿದ್ದು,
ದೇಶದ ಟಾಪ್ 10 ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಳಿಸಿದೆ.

ಕ್ರ.ಸಂ. ರಾಜ್ಯಗಳು ಸಾಲ ಮಂಜೂರಾತಿ ಸಾಲ ಇತ್ಯರ್ಥ ಶೇಕಡ
1 ಕರ್ನಾಟಕ 7092
6562
93%

2 ತಮಿಳುನಾಡು
16493
14910
90%

3 ಉತ್ತರ ಪ್ರದೇಶ
19237
16452
86%

4 ಮಹಾರಾಷ್ಟ್ರ
25218
21413
85%

5 ಮಧ್ಯಪ್ರದೇಶ
10178
8613
80%

6 ಕೇರಳ
7423
5871
79%

7 ತೆಲಂಗಾಣ
7080
6557
79%

8 ಆಂದ್ರಪ್ರದೇಶ
7538
5775
77%

9 ಜಾರ್ಕಾಂಡ್
3994
2886
72%

10 ಬಿಹಾರ್
26562
17755
67%

    ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು ಯೋಜನೆಯನ್ನು ರೈತರ ಮತ್ತು ಉದ್ದಿಮೆದಾರರ ಹಿತಕ್ಕಾಗಿ ವಿಸ್ತರಿಸುವ ದಿಶೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ನಾಯಕತ್ವದಲ್ಲಿ ರಾಜ್ಯದ ಕೃಷಿ ಕ್ಷೇತ್ರವು ಹೊಸ ಎತ್ತರಕ್ಕೇರಿದೆ. ಅದೇ ರೀತಿ, ಕೆಪೆಕ್ ಎಂಡಿ ಸಿ.ಎನ್. ಶಿವಪ್ರಕಾಶ್ ಅವರ ತಾಂತ್ರಿಕ ಮತ್ತು ಆಡಳಿತಾತ್ಮಕ ಶ್ರಮವು ಯೋಜನೆಯನ್ನು ಜನಪ್ರಿಯಗೊಳಿಸಿದೆ. ಇವರ ದೂರದೃಷ್ಟಿ ಪ್ರಯತ್ನಗಳಿಂದಾಗಿ ಪಿಎಂಎಫ್ಎಂಇ ಯೋಜನೆಯು 5000 ಉದ್ದಿಮೆಗಳ ಗುರಿ ಸಾಧನೆಯತ್ತ ಸ್ಪಷ್ಟವಾಗಿ ಮುನ್ನಡೆಯುತ್ತಿದೆ. ಈ ಪ್ರಗತಿಯು ಕರ್ನಾಟಕದ ಗ್ರಾಮೀಣ ಅಭಿವೃದ್ಧಿಗೆ ಹೊಸ ಆಯಾಮ ನೀಡುತ್ತಿದೆ.
Tags: Cheluvarayaswamycheluvarayaswamy mlacheluvarayaswamy newsmla cheluvarayaswamyn chaluvarayaswamyn chaluvarayaswamy speechn cheluvaraswamyN Cheluvarayaswamyn cheluvarayaswamy latest newsn cheluvarayaswamy latest updatesn cheluvarayaswamy ministern cheluvarayaswamy newsn cheluvarayaswamy on basavaraj horattin cheluvarayaswamy on r ashokn cheluvarayaswamy todayn cheluvarayaswamy today newsn cheluvarayaswamy updatesncheluvarayaswamysachin cheluvarayaswamy
Previous Post

“ಭೀಮ” ಖ್ಯಾತಿಯ ಪ್ರಿಯಾ ಅಭಿನಯದ “ಕುಂಭ‌ ಸಂಭವ” ಚಿತ್ರದ ಟೀಸರ್ ಬಿಡುಗಡೆ .

Next Post

ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

Related Posts

Top Story

ಮಹಿಳೆಯರನ್ನು ವೃತ್ತಿಜೀವನದಲ್ಲಿ ಪುನಃ ತೊಡಗಿಸಲು ಹರ್‌ಕೀ ಸಂಸ್ಥೆಯೊಂದಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಚರ್ಚೆ..!

by ಪ್ರತಿಧ್ವನಿ
September 4, 2025
0

ವೃತ್ತಿ ಜೀವನದಲ್ಲಿ ವಿರಾಮದ ನಂತರ, ವಿಶೇಷವಾಗಿ ತಾಂತ್ರಿಕ ಕರ್ತವ್ಯಗಳಲ್ಲಿ ಮಹಿಳೆಯರು ಮತ್ತೆ ಕಾರ್ಯಪಡೆಗೆ ಸೇರಲು ಸಹಾಯ ಮಾಡುವಲ್ಲಿ ಮತ್ತು ಮಹಿಳೆಯರು ಮರುಕೌಶಲ್ಯ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಲು ಅಭ್ಯರ್ಥಿಗಳನ್ನು ಹುರಿದುಂಬಿಸುತ್ತಿರುವ...

Read moreDetails
ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

September 4, 2025

“ಭೀಮ” ಖ್ಯಾತಿಯ ಪ್ರಿಯಾ ಅಭಿನಯದ “ಕುಂಭ‌ ಸಂಭವ” ಚಿತ್ರದ ಟೀಸರ್ ಬಿಡುಗಡೆ .

September 4, 2025

ಸೆಪ್ಟೆಂಬರ್ 5 ರಿಂದ “ಅಮೇಜಾನ್ ಪ್ರೈಮ್” ನಲ್ಲಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ “ಕೊತ್ತಲವಾಡಿ” .

September 4, 2025

ಸೆಪ್ಟೆಂಬರ್ 10 ರಂದು ಬಿಡುಗಡೆಯಾಗಲಿದೆ ಝೈದ್ ಖಾನ್ ಅಭಿನಯದ “ಕಲ್ಟ್” ಚಿತ್ರದ “ಅಯ್ಯೊ ಶಿವನೇ” ಹಾಡು. .

September 4, 2025
Next Post
ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

Recent News

Top Story

ಮಹಿಳೆಯರನ್ನು ವೃತ್ತಿಜೀವನದಲ್ಲಿ ಪುನಃ ತೊಡಗಿಸಲು ಹರ್‌ಕೀ ಸಂಸ್ಥೆಯೊಂದಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಚರ್ಚೆ..!

by ಪ್ರತಿಧ್ವನಿ
September 4, 2025
ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ
Top Story

ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

by ನಾ ದಿವಾಕರ
September 4, 2025
Top Story

ಪಿಎಂಎಫ್ಎಂಇ ಯೋಜನೆಯಲ್ಲಿ ಕರ್ನಾಟಕದ ಅಭೂತಪೂರ್ವ ಪ್ರಗತಿ: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

by ಪ್ರತಿಧ್ವನಿ
September 4, 2025
Top Story

“ಭೀಮ” ಖ್ಯಾತಿಯ ಪ್ರಿಯಾ ಅಭಿನಯದ “ಕುಂಭ‌ ಸಂಭವ” ಚಿತ್ರದ ಟೀಸರ್ ಬಿಡುಗಡೆ .

by ಪ್ರತಿಧ್ವನಿ
September 4, 2025
Top Story

ಸೆಪ್ಟೆಂಬರ್ 5 ರಿಂದ “ಅಮೇಜಾನ್ ಪ್ರೈಮ್” ನಲ್ಲಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ “ಕೊತ್ತಲವಾಡಿ” .

by ಪ್ರತಿಧ್ವನಿ
September 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಹಿಳೆಯರನ್ನು ವೃತ್ತಿಜೀವನದಲ್ಲಿ ಪುನಃ ತೊಡಗಿಸಲು ಹರ್‌ಕೀ ಸಂಸ್ಥೆಯೊಂದಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಚರ್ಚೆ..!

September 4, 2025
ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

ಮೌಲ್ಯ ಕಳೆದ ಸಮಾಜದಲ್ಲಿ ಶಿಕ್ಷಕರ ಪಾತ್ರ

September 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada