• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಮುಂದುವರೆದ ಸಾರಿಗೆ ನೌಕರರ ಗೋಳು: ಸಂಬಳವಿಲ್ಲದೆ ಪರದಾಡುತ್ತಿರುವ ಸಾರಿಗೆ ಕಾರ್ಮಿಕರು.!!

ಕರ್ಣ by ಕರ್ಣ
October 9, 2021
in ಕರ್ನಾಟಕ
0
ಮುಂದುವರೆದ ಸಾರಿಗೆ ನೌಕರರ ಗೋಳು: ಸಂಬಳವಿಲ್ಲದೆ ಪರದಾಡುತ್ತಿರುವ ಸಾರಿಗೆ ಕಾರ್ಮಿಕರು.!!
Share on WhatsAppShare on FacebookShare on Telegram

ಕೊರೋನಾ ಲಾಕ್ಡೌನ್ ನಿಂದಾಗಿ  ರಾಜ್ಯ ಸಾರಿಗೆ ನಿಗಮಗಳು ಮಕಾಡೆ ಮಲಗಿವೆ. ಸದ್ಯ ಅನ್ ಲಾಕ್ ಆಗಿ ಸಂಪೂರ್ಣ ಬಸ್ ಸಂಚಾರ ಆರಂಭವಾದರೂ ನೌಕರರಿಗೆ ಸಂಬಳವನ್ನೂ ಕೊಡಲಾರದ ಸ್ಥಿತಿಗೆ  ನಿಗಮಗಳು ಬಂದು ನಿಂತಿದೆ. ಯಾವಾಗಲೂ ತಿಂಗಳ ಆರಂಭದಲ್ಲಿ ಸಂಬಳ ಪಡೆಯುತ್ತಿದ್ದ ನೌಕರರಿಗೆ ಅಕ್ಟೋಬರ್ ಬಂದರೂ ಆಗಸ್ಟ್ ತಿಂಗಳ ಅರ್ಧ ಸಂಬಳ  ಕೈ ಸೇರಿಲ್ಲ. ಅರ್ಧ ಸಂಬಳದಲ್ಲಿ ಬದುಕೋದು ಹೇಗೆ ಅಂತ ನೌಕರರು ಪ್ರಶ್ನೆ ಮಾಡ್ತಿದ್ದಾರೆ.

ADVERTISEMENT

ಒಂದೂವರೆ ತಿಂಗಳ‌ ಸಂಬಳ ಸಿಗದೆ ಪರದಾಡುತ್ತಿರುವ ಸಾರಿಗೆ ನೌಕರರು.!!

ಕೊರೊನಾ‌ ಬಂದಾಗಿಂದ ಸಾರಿಗೆ ಇಲಾಖೆಗಳು  ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು,  ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಅರಿತ ಸರ್ಕಾರ ನೌಕರರ ಸಂಬಳಕ್ಕಾಗಿ ಪ್ರತಿ ತಿಂಗಳು 50% ಹಣ ಬಿಡುಗಡೆ ಮಾಡುತ್ತಿದೆ. ಆದರೆ, ಈ ಬಾರಿ ಸಾರಿಗೆ ನೌಕರರಿಗೆ  ಆಗಸ್ಟ್  ತಿಂಗಳ ಅರ್ಧ ಸಂಬಳವೇ ಆಗಿಲ್ಲ. ಅಕ್ಟೋಬರ್ ಮೊದಲ ವಾರ ಕಳೆದರೂ ಆಗಸ್ಟ್ ನ ಅರ್ಧ ಸಂಬಳ ಹಾಗೂ ಸೆಪ್ಟೆಂಬರ್ ಪೂರ್ತಿ ಸಂಬಳ ನೌಕರರ ಕೈ ಸೇರಿಲ್ಲ. ಹೀಗಾಗಿ  ಮನೆ ಬಾಡಿಗೆ, ಕರೆಂಟ್, ಬಿಲ್, ನೀರಿನ ಬಿಲ್, ಖರ್ಚಿಗೂ ಹಣ ಇಲ್ಲದೆ ನೌಕರರು ಆರ್ಥಿಕ   ಸಂಕಷ್ಟದಿಂದ  ಪರದಾಡುತ್ತಿದ್ದಾರೆ.‌ ಇಂತಹ ಸಮಯದಲ್ಲೆ  ದಸರಾ, ದೀಪಾವಳಿ ಹಬ್ಬಗಳು ಇದ್ದು ವೇತನವಿಲ್ಲದೇ ಸಾರಿಗೆ ನೌಕರರಿಗೆ ಹಬ್ಬದ ಸಂಭ್ರಮವೇ ಇಲ್ಲದಾಗಿದೆ.‌ ಸಾರಿಗೆ ನಿಗಮಗಳು ಕೊರೊನಾದಿಂದ  ಕಷ್ಟ ಅನುಭವಿಸಿದ ಕಾರಣದಿಂದಾಗಿ ಸರ್ಕಾರ ಕಳೆದ ವರ್ಷ ವೇತನಕ್ಕೆ ಅಂತ 2,133 ಕೋಟಿ ಬಿಡುಗಡೆ ಮಾಡಿತ್ತು. ಕೊರೊನಾ ಎರಡನೇ ಅಲೆಯಲ್ಲಿಯೂ ಜುಲೈ ವರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆದ್ರೆ ಆಗಸ್ಟ್ ತಿಂಗಳ ವೇತನಕ್ಕೆ ಪೂರ್ತಿ  ಅನುದಾನ ಬಿಡುಗಡೆ ಆಗದ ಕಾರಣ ನಿಗಮದಲ್ಲಿ ವೇತನ ನೀಡಲು ದುಡ್ಡಿಲ್ಲ. ರಾಜ್ಯಾದ್ಯಂತ 1.30 ಲಕ್ಷ ಸಾರಿಗೆ ನೌಕರರಿದ್ದು 320 ಕೋಟಿ ಹಣ ಬೇಕು. ಕೊರೊನಾ ಬಂದಾಗಿಂದ ನಿಗಮಗಳು 50%  ಹಾಗೂ ಸರ್ಕಾರ 50% ಸಂಬಳಕ್ಕೆ ಹಣ ಬಿಡುಗಡೆ ಮಾಡುತ್ತಿದೆ.‌ ಆದರೆ, ಈ ಬಾರಿ ಒಂದೂವರೆ ತಿಂಗಳ ಸಂಬಳ ಬಾಕಿ ಇದ್ದು, ನೌಕರರ ಪರದಾಡುತ್ತಿದ್ದಾರೆ.

ಸಾರಿಗೆ ನೌಕರರಿಗೆ ಸಂಬಳ ನೀಡದಿದ್ದಕ್ಕೆ ಮಾಜಿ ಸಿಎಂ ಹೆಚ್‌ಡಿಕೆ ಕಿಡಿ.!!

ಸಾರಿಗೆ ನೌಕರರಿಗೆ ಸಂಬಳ ಆಗದ ಹಿನ್ನಲೆ ಮಾಜಿ ಸಿಎಂ‌ ಕುಮಾರಸ್ವಾಮಿಯವರು ಆದಷ್ಟು ಬೇಗ ಸರ್ಕಾರ ಹಣ ಬಿಡುಗಡೆ ಮಾಡಿ ಎಂದು ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದರು. ‌ ಸಾರಿಗೆ ನೌಕರರಿಗೆ ವೇತನ ವಿಳಂಬ ಮಾಡುವುದು ಸರಿಯಲ್ಲ. ತಕ್ಷಣವೇ ವೇತನ ಬಿಡುಗಡೆ ಮಾಡಬೇಕು.‌ ಪ್ರತಿ ತಿಂಗಳು ಸಕಾಲಕ್ಕೆ ವೇತನ ನೀಡುವಂತೆ ಸರ್ಕಾರ ಹಾಗೂ ಸಾರಿಗೆ ಸಚಿವರಿಗೆ ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಶ್ರೀ ರಾಮುಲು, ನಾನು ಈಗಾಗಲೇ ಆರ್ಥಿಕ ಇಲಾಖೆ ಜೊತೆಗೆ ಮಾತಾಡಿದ್ದಿನಿ. ನೌಕರರಿಗೆ ಯಾವುದೇ ತೊಂದರೆ ಆಗಲು ಬಿಡುವುದಿಲ್ಲ. ಹಬ್ಬದೊಳಗೆ ಸಂಬಳ ಆಗುತ್ತದೆ ಎಂದು ಭರವಸೆ ನೀಡಿದ್ದಾರೆ.

ಸಾರಿಗೆ ನೌಕರನಿಂದ ಆತ್ಮಹತ್ಯೆಗೆ ಯತ್ನ.!!

ಒಂದ್ಕಡೆ ನೌಕರರಿಗೆ ಸಂಬಳ ಆಗಿಲ್ಲ ಎನ್ನುವುದಾದರೆ, ಮತ್ತೊಂದೆಡೆ ಜೀವ ನಿರ್ವಹಣೆಗೆ ಇಲಾಖೆಯಿಂದ ವಜಾ‌ಗೊಂಡ ನೌಕರರು ಬದುಕು ಮೂರಾಬಟ್ಟೆಯಾಗಿದೆ. ವಜಾಗೊಂಡಿರುವ ಹಿನ್ನೆಲೆ ಕೇಶವ ಎಂಬ ಸಾರಿಗೆ ನೌಕರ ಇತ್ತೀಚೆಗೆ ಆತ್ಮಹತ್ಯೆ ಯತ್ನಿಸಿರುವ ಘಟನೆ ನಡೆದಿತ್ತು. ಬೆಂಗಳೂರಿನ ಇಂದಿರಾನಗರದ ಡಿಪೋ 6ರ ಮುಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಹಳೆ ಬಯ್ಯಪ್ಪನಹಳ್ಳಿಯಲ್ಲಿ ವಾಸವಾಗಿದ್ದ ಕೇಶವ, ಅಕ್ಟೋಬರ್‌ 7ರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಕ್ರಿಮಿನಾಶಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಡಿಪೋ ಮ್ಯಾನೇಜರ್ ಮುಂದೆಯೇ ವಿಷ ಸೇವಿಸಿ ಆಕ್ರೋಶ ಹೊರಹಾಕಿದ್ದರು. ತಕ್ಷಣ ಕೇಶವನನ್ನ ಬೋರಿಂಗ್ ಆಸ್ಪತ್ರೆಗೆ ದಾಖಲು ಮಾಡಿದ ಹಿನ್ನೆಲೆ ಜೀವಾಪಾಯದಿಂದ ಪಾರಾಗಿದ್ದಾರೆ. ಅಂದಹಾಗೆ, ಏಪ್ರಿಲ್ ನಲ್ಲಿ ನಡೆದ ಮುಷ್ಕರದ ವೇಳೆ 4 ಸಾವಿರಕ್ಕೂ ಅಧಿಕ ವಜಾಗೊಂಡಿದ್ದರು. ಕೊರೊನಾ ಹೆಚ್ಚಾಗಿದ್ದಾಗ ಬಸ್ ಸಂಚಾರವಿಲ್ಲದೆ, ಪ್ರಯಾಣಿಕರಿಲ್ಲದೇ ನಿಗಮಗಳು ನಷ್ಟದಲ್ಲಿದ್ದವು.‌ ಸದ್ಯ ಬಸ್ ಸಂಚಾರ ಯಥಾಸ್ಥಿತಿಯಲ್ಲಿದ್ದರೂ, ನಿಗಮಗಳಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರ ಹಾಗೂ ಸಾರಿಗೆ ನಿಗಮಗಳು ಆದಾಯದ ಮೂಲ ಸೃಷ್ಟಿಸಿ ಸಂಬಳದ ಸಮಸ್ಯೆಗೆ ಅಂತ್ಯ ಹಾಡಬೇಕಿದೆ.

ಕೊರೋನಾ ಲಾಕ್ಡೌನ್ ನಿಂದಾಗಿ  ರಾಜ್ಯ ಸಾರಿಗೆ ನಿಗಮಗಳು ಮಕಾಡೆ ಮಲಗಿವೆ. ಸದ್ಯ ಅನ್ ಲಾಕ್ ಆಗಿ ಸಂಪೂರ್ಣ ಬಸ್ ಸಂಚಾರ ಆರಂಭವಾದರೂ ನೌಕರರಿಗೆ ಸಂಬಳವನ್ನೂ ಕೊಡಲಾರದ ಸ್ಥಿತಿಗೆ  ನಿಗಮಗಳು ಬಂದು ನಿಂತಿದೆ. ಯಾವಾಗಲೂ ತಿಂಗಳ ಆರಂಭದಲ್ಲಿ ಸಂಬಳ ಪಡೆಯುತ್ತಿದ್ದ ನೌಕರರಿಗೆ ಅಕ್ಟೋಬರ್ ಬಂದರೂ ಆಗಸ್ಟ್ ತಿಂಗಳ ಅರ್ಧ ಸಂಬಳ  ಕೈ ಸೇರಿಲ್ಲ. ಅರ್ಧ ಸಂಬಳದಲ್ಲಿ ಬದುಕೋದು ಹೇಗೆ ಅಂತ ನೌಕರರು ಪ್ರಶ್ನೆ ಮಾಡ್ತಿದ್ದಾರೆ.

Tags: Covid 19ಆರ್ಥಿಕ ಸಂಕಷ್ಟಕರ್ನಾಟಕಕೋವಿಡ್-19ನೌಕರಭಾರತಶ್ರೀ ರಾಮುಲುಸಾರಿಗೆಹೆಚ್‌ಡಿಕೆ
Previous Post

ಹಳ್ಳಿಯ ಮಹಿಳೆಯರಿಗೆ ಸ್ವರ್ಧಾತ್ಮಕ ಜಗತ್ತಿಗೆ ಕಾಲಿಡಲು ವಿನ್ ಶಿ ಸಂಸ್ಥೆಯಿಂದ ವಿಶೇಷ ಕಸೂತಿ ಕಲೆ ಮತ್ತು ವ್ಯಕ್ತಿತ್ವ ವಿಕಸನ ಶಿಬಿರ

Next Post

RSS ಮುಸಲ್ಮಾನ ವಿರುದ್ಧ ಪ್ರಚೋದಿಸುತ್ತದೆ ಎಂದು ಫೇಸ್ಬುಕ್ಕಿಗೆ ತಿಳಿದಿದ್ದರೂ ಯಾವುದೇ ಮಹತ್ವದ ಕ್ರಮ ತೆಗೆದುಕೊಂಡಿಲ್ಲ – ಫೇಸ್ಬುಕ್ಕಿನ ಮಾಜಿ ಉದ್ಯೋಗಿ ಆರೋಪ

Related Posts

ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ
ಕರ್ನಾಟಕ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

by ಪ್ರತಿಧ್ವನಿ
April 10, 2026
0

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮುದ್ರಿತ ಅಂಕಪಟ್ಟಿ ನೀಡುವ ಪದ್ಧತಿಗೆ ಸರ್ಕಾರ ತೆರೆ ಎಳೆಯಲು ನಿರ್ಧರಿಸಿದೆ. ಬದಲಿಗೆ ಡಿಜಿಟಲ್ ಅಂಕಪಟ್ಟಿಯನ್ನೇ ಅಧಿಕೃತವಾಗಿ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
RSS ಮುಸಲ್ಮಾನ ವಿರುದ್ಧ ಪ್ರಚೋದಿಸುತ್ತದೆ ಎಂದು ಫೇಸ್ಬುಕ್ಕಿಗೆ ತಿಳಿದಿದ್ದರೂ ಯಾವುದೇ ಮಹತ್ವದ ಕ್ರಮ ತೆಗೆದುಕೊಂಡಿಲ್ಲ – ಫೇಸ್ಬುಕ್ಕಿನ ಮಾಜಿ ಉದ್ಯೋಗಿ ಆರೋಪ

RSS ಮುಸಲ್ಮಾನ ವಿರುದ್ಧ ಪ್ರಚೋದಿಸುತ್ತದೆ ಎಂದು ಫೇಸ್ಬುಕ್ಕಿಗೆ ತಿಳಿದಿದ್ದರೂ ಯಾವುದೇ ಮಹತ್ವದ ಕ್ರಮ ತೆಗೆದುಕೊಂಡಿಲ್ಲ - ಫೇಸ್ಬುಕ್ಕಿನ ಮಾಜಿ ಉದ್ಯೋಗಿ ಆರೋಪ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada