ದಕರೋನಾ ಕಾರಣದಿಂದಾಗಿ ಶಾಲಾ ಕಾಲೇಜುಗಳು ಬಂದ್ ಆಗಿ, ವಿದ್ಯಾರ್ಥಿಗಳಿಗೆ ಆಲ್ಲೈನ್ ಕ್ಲಾಸ್ ಮಾಡಲಾಗುತ್ತಿತ್ತು. ಜನವರಿ 2021 ರಂದು ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿದ್ದು, ಇದೀಗ ಎಸ್ಎಸ್ಎಲ್ಸಿ ಪರೀಕ್ಷಾ ದಿನಾಂಕ ಕೂಡ ಪ್ರಕಟವಾಗಿದೆ.
ತಾತ್ಕಾಲಿಕ ಎಸ್ಎಸ್ಎಲ್ಸಿ ವೇಳಾ ಪಟ್ಟಿ
ಜೂನ್ 14 – ಪ್ರಥಮ ಭಾಷೆ
ಜೂನ್ 16 – ಗಣಿತ
ಜೂನ್ 18 – ಇಂಗ್ಲೀಷ್ ಅಥವಾ ಕನ್ನಡ
ಜೂನ್ 21 – ವಿಜ್ಞಾನ
ಜೂನ್ 23 – ತೃತೀಯ ಭಾಷೆ ಹಿಂದಿ
ಜೂನ್ 25 – ಸಮಾಜವಿಜ್ಞಾನ
ಜನವರಿ 28 ರಂದು ಶಿಕ್ಷಣ ಸಚಿವ ಸುರೇಶ್ಕುಮಾರ್ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಜೂನ್ 14 ರಿಂದ 25 ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿವೆ, ಪ್ರಥಮ ಭಾಷೆಗೆ 3.15 ಗಂಟೆ ಕಾಲ, ಇತರೆ ವಿಷಯಗಳಿಗೆ 3 ಗಂಟೆ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಾತ್ಕಾಕಲಿಕ ಎಸ್ಎಸ್ಎಲ್ಸಿ ವೇಳಾಪಟ್ಟಿಯನ್ನು ಘೋಷಿಸಲಾಗಿದೆ. ಈ ವೇಳಾ ಪಟ್ಟಿ ತಾತ್ಕಾಲಿಕವಾಗಿದ್ದು ಫೆಬ್ರವರಿ 26 ರವರೆಗೂ ಆಕ್ಷೇಪಣ ಪಟ್ಟಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದಿದ್ದಾರೆ.
9ನೇ ತರಗತಿ ಮತ್ತು ಪ್ರಥಮ ಪಿಯುಸಿ ತರಗತಿ ಆರಂಭ
9ನೇ ತರಗತಿ ಮತ್ತು ಪ್ರಥಮ ಪಿಯುಸಿಗೆ ಫೆಬ್ರವರಿ 01 ರಿಂದ ಪೂರ್ಣಾವಧಿ ತರಗತಿಯನ್ನು ಆರಂಭ ಮಾಡಲಾಗುತ್ತದೆ ಎಂದಿದ್ದಾರೆ. ಜನವರಿ 22 ರಂದು ಶಿಕ್ಷಕರ ಮತ್ತು ಪದವೀದರರ ಕ್ಷೇತ್ರದ ಸದಸ್ಯರ ಸಭೆ ಕರೆದು ಚರ್ಚಿಸಲಾಗಿದೆ. 6 ರಿಂದ 8 ನೇ ತರಗತಿಯವರೆಗೂ ವಿದ್ಯಾಗಮ ಮುಂದುವರೆಯುತ್ತದೆ. 9 ನೇ ತರಗತಿ ಮತ್ತು ಪ್ರಥಮ ಪಿಯುಸಿ ಪೂರ್ಣಾವಧಿ ತರಗತಿಗಳು ಆರಂಭವಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ.