• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ನರಗುಂದ ಸಮಾವೇಶ ತೋರಿದ ಕರ್ನಾಟಕದ ಚಳುವಳಿಗಳ ವೈಫಲ್ಯವೇನು?

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
July 25, 2021
in ಕರ್ನಾಟಕ
0
ನರಗುಂದ ಸಮಾವೇಶ ತೋರಿದ ಕರ್ನಾಟಕದ ಚಳುವಳಿಗಳ ವೈಫಲ್ಯವೇನು?
Share on WhatsAppShare on FacebookShare on Telegram

ಜುಲೈ 21ರಂದು ಗದಗ ಜಿಲ್ಲೆಯ ನರಗುಂದದಲ್ಲಿ ಸುಮಾರು 10ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳು ಸೇರಿ ಸಮಾವೇಶ ನಡೆಸಿದವು. ಇದೊಂದು ಸಾಂಕೇತಿಕ ಪ್ರತಿಭಟನೆಯಾಗಿತ್ತೇ ಹೊರತು, ಅಲ್ಲಿ ಭಾಗವಹಿಸಿದ ಸಂಘಟನೆಗಳ ಮಧ್ಯೆ ಒಂದು ಒಳಗೊಳ್ಳುವಿಕೆಯ ಪ್ರಕ್ರಿಯೆ ಕಾಣಲಿಲ್ಲ. ಇಷ್ಟೆಲ್ಲ ಸಂಘಟನೆಗಳ ಸೇರುವಿಕೆಯ ನಡುವೆಯೂ ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ರೈತಾಪಿಗಳನ್ನು  ಸೇರಿಸಲಾಗಲಿಲ್ಲ ಎಂಬುದನ್ನು ಗಮನಿಸಬೇಕು.

ADVERTISEMENT

41 ವರ್ಷಗಳ ಹಿಂದೆ ನಡೆದ ನರಗುಂದ ಬಂಡಾಯ ಮತ್ತು ಕಳೆದ 6 ವರ್ಷ‍ಗಳಿಂದ ನಡೆಯುತ್ತಿರುವ ನೀರಾವರಿ ಹೋರಾಟದ ಪ್ರಾಮುಖ್ಯತೆಯನ್ನು ಜನರಿಗೆ ತಲುಪಿಸುವಲ್ಲಿ ಈಗಿನ ಸಂಘಟನೆಗಳು ವಿಫಲವಾದವೆ? ಎಂಬ ಪ್ರಶ್ನೆ ನಮ್ಮ ಎದುರಿದೆ. ಕನ್ನಡ ಪರ ಸಂಘಟನೆಗಳು ಇಲ್ಲಿ ನಾಮಕಾವಸ್ತೆ ಬೆಂಬಲ ಕೊಟ್ಟು ಪ್ರಚಾರ ಪಡೆದು ನಂತರ ಲೋಕಲ್‍ ರಾಜಕಾರಣಕ್ಕೆ ಬಲಿಯಾದವೇ?

ದೆಹಲಿ ಹೋರಾಟದಲ್ಲಿ ಉತ್ತರ ಭಾರತದ ದಲಿತ, ಹಿಂದುಳಿದ ಕೃಷಿ ಕಾರ್ಮಿಕರು ಪಾಲ್ಗೊಳ್ಳುತ್ತಿರುವಾಗ, ನರಗುಂದದಲ್ಲಿ ಅಥವಾ ಒಟ್ಟೂ ಕರ್ನಾಟಕದಲ್ಲಿ ಅದೇಕೆ ಸಾಧ್ಯವಾಗುತ್ತಿಲ್ಲ? ಈ ದೃಷ್ಟಿಕೋನದಲ್ಲಿ  ಪ್ರಶ್ನೆಗಳನ್ನು ಇಟ್ಟುಕೊಂಡು ‘ಪ್ರತಿಧ್ವನಿ’ ಹಲವರೊಂದಿಗೆ ಚರ್ಚೆ ನಡೆಸಿತು.

ನರಗುಂದಕ್ಕೆ ಬಂದಿದ್ದ ಕರ್ನಾಟಕ ರಾಜ್ಯ ರೈತ ಸಂಘ ಕಾರ್ಯದರ್ಶಿ ಚಾಮರಸ ಮಾಲಿಪಾಟೀಲ್‍, ‘ನರಗುಂದದ ಸಮಾವೇಶ ನಿರಾಶೆ ಮೂಡಿಸಿತು. ಇಲ್ಲಿನ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಂಘಟಕರು ವಿಫಲರಾಗಿದ್ದಾರೆ. ಅದು ಕೇವಲ ಅವರ ತಪ್ಪಲ್ಲ. ಇತರ ಸಂಘಟನೆಗಳು ಕಾಟಾಚಾರಕ್ಕೆ ಬೆಂಬಲ ಕೊಟ್ಟು ಜವಾಬ್ದಾರಿಯಿಂದ ನುಣುಚಿಕೊಂಡವು. ನಮ್ಮ ಮಧ್ಯಮ ವರ್ಗದ ರೈತ ಕುಟುಂಬಗಳಿಗೂ ಸಮಸ್ಯೆಯ  ಗಂಭೀರತೆ ತಟ್ಟೇ ಇಲ್ಲ’  ಎಂದರು.

ಚಾಮರಸ ಮಾಲಿಪಾಟೀಲರ ಮಾತುಗಳ ಹಿನ್ನೆಲೆಯಲ್ಲಿ ನೋಡಿದರೆ, ಸಮಾವೇಶಕ್ಕೂ ಮುನ್ನ ನಿರೀಕ್ಷೆ ಇದ್ದಷ್ಟು, ವಾಸ್ತವವಾಗಿ ಜನಬೆಂಬಲ ಸಿಗಲಿಲ್ಲ. ನರಗುಂದದಲ್ಲಿ 6 ವರ್ಷದಿಂದ ನಡೆಯುತ್ತಿರುವ ಒಂದು ನೀರಾವರಿ ಹೋರಾಟಕ್ಕೆ ಆರಂಭದಲ್ಲಿ ಸಿಕ್ಕಷ್ಟು ಜನಬೆಂಬಲ ಈಗಿಲ್ಲ. ಇಲ್ಲಿ ಹೋರಾಟ ನಡೆಸುತ್ತಿರುವವರಲ್ಲಿ ಕೆಲವರು ವೃತ್ತಿಪರ ರಾಜಕಾರಣಿಗಳೊಂದಿಗೆ ಗುರುತಿಸಿಕೊಂಡರು, ಪ್ರಚಾರಕ್ಕೆ ಹಾತೊರೆದರು ಮತ್ತು ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಸರಿಯಾದ ಸಂದರ್ಭದಲ್ಲಿ ಧ್ವನಿ ಎತ್ತದೆ ಹೋದರು. ರೈತ ಸಂಘದ  ಯಾವ ಬಣಗಳೂ ಇಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲ. ಕನ್ನಡ ಪರ ಸಂಘಟನೆಗಳದ್ದು ಕೇವಲ ಆರಂಭಶೂರತ್ವವಾಗಿತ್ತು. ಈ ಕಾರಣಕ್ಕೇ ಮೊನ್ನೆಯ ನರಗುಂದ ಸಮಾವೇಶದಲ್ಲಿ ಮೂರು ಸಾವಿರಕ್ಕಿಂತ ಹೆಚ್ಚು ಜನ ಸೇರಿಸುವಲ್ಲಿ ಈ ಸಂಘಟನೆಗಳು ವಿಫಲವಾದವು ಎಂಬ ಮಾತಿದೆ.

ಈ ಹಿನ್ನೆಲೆಯಲ್ಲಿ ರೈತಸಂಘ ಸೇರಿದಂತೆ ರಾಜ್ಯದ ಬಹುಪಾಲು ಚಳವಳಿಗಳ ಬಿಕ್ಕಟ್ಟುಗಳೇನು ಎಂಬ ಕುರಿತು ನಾಡಿನ ಹಲವು ಚಿಂತಕರು ಮತ್ತು ಹೋರಾಟಗಾರರ ಅಭಿಪ್ರಾಯಗಳು ಇಲ್ಲಿವೆ.

ರಾಜ್ಯ ರೈತ ಸಂಘದ ಒಂದು ಬಣದ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್‍, ‘40 ವರ್ಷದ ಹಿಂದಿನ ನರಗುಂದ ಬಂಡಾಯದ ನೆನಪಿನಲ್ಲಿ ನಡೆದ ಈ ಸಮಾವೇಶವೂ ಐತಿಹಾಸಿಕ ಎಂದರು. ಆದರೆ, ರಾಜ್ಯದಲ್ಲಿ ಒಟ್ಟಾರೆ ರೈತ ಚಳುವಳಿಯ ಹಿನ್ನಡೆಗೆ ಏನು ಕಾರಣ ಎಂಬುದಕ್ಕೆ ಅವರಲ್ಲಿ ಸ್ಪಷ್ಟ ಉತ್ತರವಿಲ್ಲ. ರೈತ ಸಂಘಟನೆ ಅಧಿಕಾರ ರಾಜಕಾರಣಕ್ಕೆ ಹೋಗಬೇಕು ಎಂದು ಹೇಳುವ ಅವರು, ರೈತಸಂಘದ ಚಟುವಟಿಕೆಯ ಪ್ರಕ್ರಿಯೆಯಲ್ಲಿ ನಾಯಕತ್ವ ಮತ್ತು ಸಂಘಟನೆಯಲ್ಲಿ ತೊಡಕು ಉಂಟಾದವು ಎನ್ನುತ್ತಾರೆ.

ದೆಹಲಿ ಹೋರಾಟದಲ್ಲಿ ರೈತರ ಜೊತೆಗೆ ಭೂರಹಿತ ಕೃಷಿ ಕಾರ್ಮಿಕರು ಪಾಲ್ಗೊಂಡಿದ್ದಾರೆ, ಅದು ಈ ರಾಜ್ಯದಲ್ಲಿ ಸಾಧ್ಯವೇ ಆಗಲಿಲ್ಲ ಎಂಬ ನಮ್ಮ ಪ್ರಶ್ನೆಗೆ ಅವರು ಕೊಟ್ಟ ಉತ್ತರ ತೀರಾ ತೆಳುವಾಗಿತ್ತು. ‘ರೈತ ಸಮೂಹವೆಂದರೆ ಅದರಲ್ಲಿ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಎಲ್ಲರೂ ಇರುತ್ತಾರೆ. ನಮ್ಮ ಚಳುವಳಿಯಲ್ಲಿ ಜಾತಿ, ಧರ್ಮ ಯಾವುದಕ್ಕೂ ಆಸ್ಪದವಿಲ್ಲ’ ಎಂದರು.

ಮೂರು ಕೃಷಿ ಕಾನೂನುಗಳ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಅವರು ಎಂದಿನಂತೆ ಕಿಡಿಕಾರಿದರು.

ನರಗುಂದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಜನಶಕ್ತಿಯ ಸಂಘಟನೆಯ ನಾಯಕ ನೂರ್‍ ಶ್ರೀಧರ್‍, ‘ಇದು ಒಂದು ಉತ್ತಮ ಕಾರ್ಯಕ್ರಮವಾಗಿತ್ತು. ಆದರೆ ಸಮಾವೇಶದ ಸ್ವರೂಪ ಇರಲಿಲ್ಲ’ ಎಂಬುದನ್ನು ಒಪ್ಪಿಕೊಂಡರು. ಸಂಘಟನೆಗಳು ಚುನಾವಣಾ ರಾಜಕಾರಣಕ್ಕೆ ಪ್ರವೇಶ ಮಾಡುವಾಗ ಎಡವುತ್ತವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ  ನೂರ್‍ ಶ್ರೀಧರ್‍, ‘ಸಂಘಟನೆ/ಚಳವಳಿಗಳು ಅಧಿಕಾರ ರಾಜಕಾರಣ ಮಾಡಬೇಕು. ಆದರೆ ಆ ಚಳುವಳಿಯಿಂದ ಬಂದವರು ಚುನಾಯಿತರಾದಾಗ, ಅವರ ಮೇಲೆ ಚಳವಳಿ ಅಥವಾ ಸಂಘಟನೆಯ ನಿಯಂತ್ರಣ ಇರಬೇಕು’ ಎಂದು ಅಭಿಪ್ರಾಯಪಟ್ಟರು.

ಇದಕ್ಕೆ ಕೊಂಚ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದು ಕಮ್ಯುನಿಸ್ಟ್ ಚಳುವಳಿಯ ಹಿನ್ನೆಲೆಯ ಭೀಮನಗೌಡ ಕಾಶಿರೆಡ್ಡಿ. ‘ಚಳುವಳಿ ಹಿನ್ನೆಲೆಯ ಸಂಘಟನೆಗಳು ಅಧಿಕಾರ ರಾಜಕಾರಣ ಅಂದರೆ ಸಂಸದೀಯ ಪ್ರಜಾಪ್ರಭುತ್ವಕ್ಕೆ ಇಳಿಯಲೇಬೇಕು. ಆದರೆ ಆ ಚಳವಳಿ/ಸಂಘಟನೆ ಒಂದು ರಾಜಕೀಯ ಪಕ್ಷವಾಗಿ ಘೋಷಿಸಿಕೊಂಡೇ ಮುನ್ನುಗಬೇಕು. ಆದರೆ ರಾಜ್ಯದ ಚಳವಳಿ/ಸಂಘಟನೆಗಳ ಸಮಸ್ಯೆ  ಅಂದರೆ ಯಾರೋ ಒಂದಿಬ್ಬರನ್ನು ಶಾಸಕಾಂಗಕ್ಕೆ ಕಳಿಸಿಬಿಟ್ಟರೆ ಮುಗೀತು ಅನ್ನುವುದು. ಅದು ಪ್ರಾಕ್ಟಿಕಲ್‍ ಆಗಿ ಹಾಗೆ ಆಗಲ್ಲ. ಹೋರಾಟದ ಸಂಘಟನೆ ರಾಜಕೀಯ ಪಕ್ಷವಾಗಿ ಘೋಷಣೆ ಮಾಡಿಕೊಳ್ಳಬೇಕು, ಅದು ಎಲ್ಲ ಪ್ರದೇಶದ ಜನರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಬೇಕು’ ಎನ್ನುತ್ತಾರೆ.

ಚಳವಳಿಯಿಂದ ಆಯ್ಕೆ ಆದವರ ಮೇಲೆ ಸಂಘಟನೆಯ ನಿಯಂತ್ರಣ ಇರಬೇಕು ಎಂಬ ವಾದವನ್ನು ತಿರಸ್ಕರಿಸುವ ಭೀಮನಗೌಡ ಕಾಶಿರೆಡ್ಡಿ, ‘ಈಗ ಆರ್‍ಎಸ್‍ಎಸ್‍ ಎಂಬ ಸಂವಿಧಾನೇತರ ಸಿದ್ಧಾಂತಗಳ ಸಂಘಟನೆ ಸರ್ಕಾರ ನಿಯಂತ್ರಣ ಮಾಡುತ್ತಿದೆ. ಅದೇ ರೀತಿ, ಬೇರೆ ಸಂಘಟನೆಗಳಿಂದ ಬೆಳೆದು ಜನಪ್ರತಿನಿಧಿ ಆದವರನ್ನು ಸಂಘಟನೆಯೇ ನಿಯಂತ್ರಿಸಬೇಕು ಎಂಬುದು ಕೂಡ ಸಂವಿಧಾನದ ಉಲ್ಲಂಘನೆ ಅಲ್ಲವೇ?’ ಎಂದು ಪ್ರಶ್ನಿಸುತ್ತಿದ್ದಾರೆ.

ಚಿಂತಕ, ಬರಹಗಾರ ಡಾ ಬಂಜಗೆರೆ ಜಯಪ್ರಕಾಶ್, ದಲಿತ-ರೈತ ಸಂಘಟನೆಗಳ ಜೊತೆ ಮೊದಲೆಲ್ಲ ತುಂಬ ಸಂಪರ್ಕದಲ್ಲಿದ್ದ ಸಿನಿಮಾ ನಿರ್ದೇಶಕ, ಬರಹಗಾರ ಎನ್‍.ಎಸ್‍ ಶಂಕರ್‍ ಅವರು ಕೂಡ ಅಧಿಕಾರ ರಾಜಕಾರಣ ಬೇಕು ಎನ್ನುತ್ತಾರೆ. ಇವರಿಬ್ಬರೂ ಎತ್ತುವ ಪ್ರಶ್ನೆ ಎಂದರೆ, ರಾಜ್ಯದ ಚಳುವಳಿಗಳು ನಾಯಕತ್ವ, ಜಾತಿವಾದಿತನ, ಸ್ವಪ್ರತಿಷ್ಟೆ ಕಾರಣದಿಂದಾಗಿ ಚಳವಳಿಗಳಿಗೇ ಧಕ್ಕೆ ಉಂಟು ಮಾಡಿಬಿಟ್ಟವಾ ಎಂಬುದು.

ರೈತ ಚಳವಳಿ ಅಥವಾ ಇತರ ಕರ್ನಾಟಕದ ಚಳವಳಿಗಳು ಕಾರ್ಯಕರ್ತರಲ್ಲಿ ಸ್ಪಷ್ಟ ರಾಜಕೀಯ ಪ್ರಜ್ಞೆಯನ್ನು ಕಟ್ಟಿಕೊಡಲೇ ಇಲ್ಲ’ ಎನ್ನುವ ಬಂಜಗೆರೆಯವರು, ಕನ್ನಡ ಪರ ಹೋರಾಟ ಕೂಡ ರೈತಪರ ಹೋರಾಟವಾಗಬೇಕಿತ್ತು ಎಂದು ಹೇಳಿದರು.

‘ರಾಜ್ಯದಲ್ಲಿ ರೈತರ ಸಂಕಷ್ಟ ಕುರಿತಂತೆ ಹಿಂದೆಲ್ಲ ರೈತ ಸಂಘ ಪ್ರತಿಭಟನೆ ಮಾಡಿತ್ತು. ಭೂರಹಿತ ಕೃಷಿ ಕಾರ್ಮಿಕರು ಅಥವಾ ಅಲ್ಪ ಭೂಮಿ ಹೊಂದಿರುವವರ ಬಗ್ಗೆ ನೀವು ಕೇಳಿದ ಪ್ರಶ್ನೆ ಸರಿಯಾಗಿಯೇ ಇದೆ. ಆದರೆ, ಹೊಟ್ಟೆನೋವು ಬಂದವರೇ ಔಷಧಿ ತೆಗೆದುಕೊಳ್ಳಬೇಕು. ಕೃಷಿ ಕಾರ್ಮಿಕರು, ಸಣ್ಣ ರೈತರು ಒಂದು ಚಳವಳಿ ಕಟ್ಟುವತ್ತ ಹೆಜ್ಜೆ ಇಡಬೇಕು. ನಗರದ ಬಡವರ ಸಮಸ್ಯೆಯ ಹೋರಾಟವೂ ಇದರಲ್ಲಿ ಸೇರಿದಾಗ ಇದೊಂದು  ಐಕ್ಯ ಹೋರಾಟ ಆಗಲು ಸಾಧ್ಯ’ ಎನ್ನುತ್ತಾರೆ ಬಂಜಗೆರೆ ಜಯಪ್ರಕಾಶ್.

 ‘ಗುಂಡೂರಾವ ಅಥವಾ ಕಾಂಗ್ರೆಸ್‍ ಸರ್ಕಾರ ಕೆಡವಲು ನರಗುಂದ ಬಂಡಾಯ ಒಂದು ಹಿನ್ನಲೆಯಾಗಿತು. ಆದರೆ ನಂತರ ಬಂದ ಹೆಗಡೆ ಸರ್ಕಾರ ಎಲ್ಲ ಚಳುವಳಿಗಳನ್ನು ಒಡೆಯಲು ಆರಂಭಿಸಿತು’ ಎನ್ನುವ ಎನ್‍.ಎಸ್‍ ಶಂಕರ್‍, .‘ರಾಜನರ್ತಕಿಯಾಗಿರುವ ಮೀಡಿಯಾ ಬಳಸಿಕೊಂಡು ಈಗಿನ ಆಡಳಿತಗಾರರು ಭ್ರಾಂತಿ ಸೃಷ್ಟಿಸಿದ್ದಾರೆ. ಪ್ರತಿರೋಧದ ಧ್ವನಿಗಳನ್ನು ಅಡಗಿಸಲು ಕರಾಳ ಶಾಸನಗಳನ್ನು ದುರ್ಬಳಕೆ ಮಾಡುತ್ತ ಹೊರಟಿದ್ದಾರೆ’ ಎಂದರು.

Tags: ಎನ್ ಎಸ್ ಶಂಕರ್ಕೋಡಿಹಳ್ಳಿ ಚಂದ್ರಶೇಖರ್ಚಾಮರಸ ಮಾಲಿಪಾಟೀಲದೆಹಲಿ ರೈತ ಹೋರಾಟನರಗುಂದ ಬಂಡಾಯನೂರ್ ಶ್ರೀಧರ್ಬಂಜಗೆರೆ ಜಯಪ್ರಕಾಶ್ರೈತ ಚಳವಳಿ
Previous Post

ಮುಂದಿನ ವಾರ ರಾಜಸ್ಥಾನ ಸರ್ಕಾರದ ಸಂಪುಟ ವಿಸ್ತರಣೆ?

Next Post

ಬಿಜೆಪಿ-ಜನಸೇನಾ ಮೈತ್ರಿ ಮುಂದುವರಿಕೆ; 2024 ಆಂಧ್ರ ಚುನಾವಣೆಗೆ ಭರ್ಜರಿ ತಯಾರಿ

Related Posts

Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
0

ಆರ್‌ಎಸ್‌ಎಸ್‌ ವಿರುದ್ಧ ತಮಿಳುನಾಡಿನಲ್ಲಿ ಯಾವ ರೀತಿ ಕ್ರಮ ಕೈಗೊಂಡಿದ್ದಾರೋ ಆ ರೀತಿ ಕ್ರಮವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ...

Read moreDetails

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025

Kantara Chapter-1: ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಕಾಂತಾರ ಚಾಪ್ಟರ್ 1’ .

October 13, 2025

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025
Next Post
ಬಿಜೆಪಿ-ಜನಸೇನಾ ಮೈತ್ರಿ ಮುಂದುವರಿಕೆ; 2024 ಆಂಧ್ರ ಚುನಾವಣೆಗೆ ಭರ್ಜರಿ ತಯಾರಿ

ಬಿಜೆಪಿ-ಜನಸೇನಾ ಮೈತ್ರಿ ಮುಂದುವರಿಕೆ; 2024 ಆಂಧ್ರ ಚುನಾವಣೆಗೆ ಭರ್ಜರಿ ತಯಾರಿ

Please login to join discussion

Recent News

Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
Top Story

Kantara Chapter-1: ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಕಾಂತಾರ ಚಾಪ್ಟರ್ 1’ .

by ಪ್ರತಿಧ್ವನಿ
October 13, 2025
Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada